ವಿಶಾಖಪಟ್ಟಣಂ ವಿಷಾನಿಲ: ಎಲ್‌ಜಿ ಪಾಲಿಮರ್‌ಗೆ ಬಿಗ್ ಶಾಕ್

ವಿಶಾಖಪಟ್ಟಣಂ, ಮೇ 26: ಆಂಧ್ರಪ್ರದೇಶದ ವಿಶಾಖಪಟ್ಟಣಂ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ವಿಷಾನಿಲ ಬಿಟ್ಟ ಎಲ್‌ಜಿ ಪಾಲಿಮರ್ ಕಾರ್ಖಾನೆಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.

ಅಲ್ಲದೇ, ತನಿಖೆ ಮುಗಿಯುವವರೆಗೆ ಎಲ್‌ಜಿ ಪಾಲಿಮರ್ ಕಾರ್ಖಾನೆಯ ಆಡಳಿತ ಮಂಡಳಿಯವರು ಯಾರೂ ದೇಶ ಬಿಟ್ಟು ಹೋಗುವಂತಿಲ್ಲ, ತನಿಖಾ ಸಮಿತಿ ಹೊರತುಪಡಿಸಿ ಬೇರೆ ಯಾರೂ ಕಾರ್ಖಾನೆಯನ್ನು ಪ್ರವೇಶಿಸುವಂತಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರದ ತನ್ನ ಆದೇಶದಲ್ಲಿ ತಿಳಿಸಿದೆ.

ಸ್ಟಿರಿನ್ ವಿಷಾನಿಲವನ್ನು ಅನುಮತಿಯಿಲ್ಲದೇ ದಕ್ಷಿಣ ಕೊರಿಯಾಕ್ಕೆ ಏಕೆ ಸಾಗಿಸಿದ್ದು? ಎಂದು ಸರ್ಕಾರಕ್ಕೆ ಕೇಳಿರುವ ಹೈಕೋರ್ಟ್ ಈ ಬಗ್ಗೆ ವಿವರಣೆ ನೀಡುವಂತೆ ತಾಕೀತು ಮಾಡಿದೆ.

Vizag Gas Leak: Highcourt Orders For Seize LG Polymar Company

ಮೇ 7 ರಂದು ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್‌ ಜಿ ಪಾಲಿಮರ್ಸ್ ಎಂಬ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ಸ್ಟಿರಿನ್ ವಿಷಾನಿಲ ಸೋರಿಕೆಯಾಗಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 11 ಜನ ಮೃತಪಟ್ಟು, ನೂರಾರು ಜನ ಆಸ್ಪತ್ರೆ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+