ಆಂಧ್ರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಎಸ್ಪಿ ಕೈ ಅಡುಗೆ!

ವಿಶಾಖಪಟ್ಟಣಂ, ಮೇ.21: ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಸ್ವತಃ ಮಹಿಳಾ ಎಸ್ಪಿ ಲೆಮನ್ ರೈಸ್ ತಯಾರಿಸಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Recommended Video

      ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

      ಕಳೆದ ಬುಧವಾರ ರಾತ್ರಿ ವಿಶಾಖಪಟ್ಟಣಂ ಎಸ್ಪಿ ರಾಜಕುಮಾರ್ ಅವರಿಗೆ ಕೆಲವು ವಲಸೆ ಕಾರ್ಮಿಕರು ಕರೆ ಮಾಡು ನೋವು ತೋಡಿಕೊಂಡಿದ್ದರು. ಕಳೆದ ಮೇ.16ರಂದು ನೆಲ್ಲೂರಿನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂವರೆಗೂ ನಡೆದುಕೊಂಡು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.

      ಇನ್ನು, ವಲಸೆ ಕಾರ್ಮಿಕರಿಗೆ ಮಾರ್ಗಮಧ್ಯೆ ಎಲ್ಲಿಯೂ ಊಟ ಸಿಗದೇ ಪರದಾಡಿದ್ದನ್ನು ಎಸ್ಪಿ ಅವರಲ್ಲಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸಿದ ಎಸ್ಪಿ ರಾಜಕುಮಾರ್ ಸ್ವತಃ ತಾವೇ ಲೆಮನ್ ರೈಸ್ ತಯಾರಿಸಿಕೊಂಡು ಬಂದು ವಲಸೆ ಕಾರ್ಮಿಕರಿಗೆ ವಿತರಿಸಿದ್ದಾರೆ.

      Visakhapatnam SP Prepared Lemon Rice And Distribute For migrant workers

      ಕ್ವಾರೆಂಟೈನ್ ಕೇಂದ್ರದಲ್ಲಿದ್ದ ವಲಸೆ ಕಾರ್ಮಿಕರು:

      ವಿಶಾಖಪಟ್ಟಣಂ ತಲುಪಲು ನಡೆದುಕೊಂಡು ಬರುತ್ತಿದ್ದ ವಲಸೆ ಕಾರ್ಮಿಕರಿಗೆ ಕೆಲವರು ಎಸ್ಪಿ ರಾಜಕುಮಾರಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ಅಗತ್ಯ ಸಹಾಯ ಬೇಕಿದ್ದಲ್ಲಿ ಇವರಿಗೆ ಕರೆ ಮಾಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳಾ ವಲಸೆ ಕಾರ್ಮಿಕರೊಬ್ಬರು ಎಸ್ಪಿಯವರಿಗೆ ಫೋನ್ ಮಾಡಿ ನೋವು ತೋಡಿಕೊಂಡಿದ್ದರು.

      ಹಸಿವಿನಿಂದ ಬಳಲುತ್ತಿದ್ದ ವಲಸೆ ಕಾರ್ಮಿಕರಿಗಾಗಿ ಮನೆಯಿಂದಲೇ ಊಟ ತಯಾರಿಸಿಕೊಂಡು ಅವರು ತಿಳಿಸಿದ ಪ್ರದೇಶಕ್ಕೆ ತೆರಳಿದೆ. ಆದರೆ ಎಲ್ಲ ಕಾರ್ಮಿಕರನ್ನು ಸ್ಥಳೀಯ ಕಾಲೇಜ್ ಒಂದರಲ್ಲಿ ಕ್ವಾರೆಂಟೈನ್ ನಲ್ಲಿ ಇರಿಸಲಾಗಿತ್ತು. ನಂತರ ಅಲ್ಲಿಗೆ ತೆರಳಿ ಊಟವನ್ನು ನೀಡಿರುವುದಾಗಿ ಎಸ್ಪಿ ರಾಜ್ ಕುಮಾರಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+