ವಿಡಿಯೋ: ನಟ-ರಾಜಕಾರಣಿ ಬಾಲಕೃಷ್ಣರಿಂದ ಪತ್ರಕರ್ತನ ಮೇಲೆ ಹಲ್ಲೆ

ಹಿಂದೂಪುರ (ಆಂಧ್ರಪ್ರದೇಶ), ಮಾರ್ಚ್ 29: ನಟ- ತೆಲುಗು ದೇಶಂ ಪಕ್ಷದ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಹಲ್ಲೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮೋಜೋ ಟಿವಿಯ ಪತ್ರಕರ್ತನನ್ನು ಬೆದರಿಸುತ್ತಿರುವುದು ಹಾಗೂ ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಕೂಡ ಸೆರೆಯಾಗಿವೆ. ಬುಧವಾರದಂದು ಈ ಘಟನೆ ನಡೆದಿದೆ. ಹಿಂದೂಪುರ ಶಾಸಕರೂ ಆದ ಬಾಲಕೃಷ್ಣ ತಮ್ಮ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸುವಾಗ ಈ ಘಟನೆ ನಡೆದಿದೆ.

ಇದೀಗ ಆ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ ಹಾಗೂ ಷೇರ್ ಆಗುತ್ತಿದೆ. ಟಿಡಿಪಿಯ ಕಾರ್ಯಕರ್ತರು ಬಾಲಕೃಷ್ಣ ಅವರಿಗೆ ಹಾರ ಹಾಕಿದ್ದಾರೆ. ಆ ನಂತರ ಹಲವು ಮಕ್ಕಳು ಬಾಲಯ್ಯ ಬಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ವೈಯಕ್ತಿಕ ಭದ್ರತಾ ಸಿಬ್ಬಂದಿ ಆ ಮಕ್ಕಳನ್ನು ತಳ್ಳಿದ್ದಾರೆ. ಆ ದೃಶ್ಯವನ್ನು ವರದಿಗಾರ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ.

Balakrishna

ಇದನ್ನು ಗಮನಿಸಿದ ಬಾಲಕೃಷ್ಣ ಪತ್ರಕರ್ತರ ಜತೆ ಜಗಳಕ್ಕೆ ಇಳಿದು, ಹಲ್ಲೆ ಮಾಡಿದ್ದಾರೆ. ಕೆಟ್ಟ ಮಾತುಗಳಲ್ಲಿ ಬಯ್ದು, ಕೊಲ್ಲುವುದಾಗಿ ಧಮಕಿ ಹಾಕಿದ್ದಾರೆ. ಮೊದಲು ಆ ವಿಡಿಯೋ ಡಿಲೀಟ್ ಮಾಡು ಎಂದು ಬಾಲಕೃಷ್ಣ ಬೆದರಿಸುವುದು ತುಂಬ ಸ್ಪಷ್ಟವಾಗಿ ಕೇಳಿಸುತ್ತದೆ. ನನಗೆ ಕತ್ತಿ ಬಳಸುವುದೂ ಗೊತ್ತಿದೆ, ಬಾಂಬ್ ಹಾಕುವುದೂ ಗೊತ್ತಿದೆ. ನಿನ್ನ ಪ್ರಾಣ ತೆಗೀತೀನಿ ಎಂದು ಬೆದರಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಅಗಿದೆ.

ಬಾಲಕೃಷ್ಣ ಸಾರ್ವಜನಿಕವಾಗಿ ಹೀಗೆ ನಡೆದುಕೊಳ್ಳುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ತನ್ನ ಅಭಿಮಾನಿಗಳು, ತಮ್ಮದೇ ಪಕ್ಷದ ಸದಸ್ಯರಿಗೆ ಹೊಡೆದ ಉದಾಹರಣೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+