ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ
ಅಮರಾವತಿ, ಆಗಸ್ಟ್ 10 : ಟಿಟಿಡಿ ಆಡಳಿತ ಮಂಡಳಿಯ 743 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆದರೆ, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ, ದರ್ಶನ ಎಂದಿನಂತೆ ಇರಲಿದೆ ಎಂದು ಆಡಳಿತ ಮಂಡಳಿ ಹೇಳಿದೆ.
Recommended Video
ಸೋಮವಾರ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಆಂಧ್ರ ಪ್ರದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ತಿರುಪತಿಯಲ್ಲಿ ಮಾತ್ರ ಹೆಚ್ಚಾಗುತ್ತಿಲ್ಲ" ಎಂದು ಹೇಳಿದ್ದಾರೆ.
"ನಮ್ಮ ಹಿತ ಕಾಪಾಡಲು ಬಾಲಾಜಿ ಇದ್ದಾನೆ. ಇಂತಹ ಬಿಕ್ಕಟ್ಟಿನಲ್ಲಿ ನಮ್ಮನ್ನು ಅವನೇ ಕಾಪಾಡುತ್ತಾನೆ, ಮುನ್ನೆಡೆಸುತ್ತಾನೆ. ದೇವಾಲಯ ಮುಚ್ಚಲು ಯಾವುದೇ ಕಾರಣಗಳು ಇಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಿರುಪತಿಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಜಾರಿಗೊಳಿಸಿದ್ದ ಲಾಕ್ ಡೌನ್ ಆಗಸ್ಟ್ 14ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಭಕ್ತರ ಭೇಟಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಲಾಗಿದೆ.
ಜುಲೈ ತಿಂಗಳಿನಲ್ಲಿಯೇ ತಿರುಪತಿಯಲ್ಲಿ ದರ್ಶನ ನಿಲ್ಲಿಸಬೇಕು ಎಂದು ಟಿಟಿಡಿ ಸಿಬ್ಬಂದಿಗಳೇ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಆದರೆ, ದೇವಾಲಯ ಮುಚ್ಚುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿತ್ತು.
ಸದ್ಯ ಪ್ರತಿದಿನ ಸುಮಾರು 12 ಸಾವಿರ ಜನರು ತಿರುಪತಿಗೆ ಭೇಟಿ ನೀಡುತ್ತಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ದೇವಾಲಯ ಮುಚ್ಚಿ ಎನ್ನುವ ಬೇಡಿಕೆಗೂ ಆಡಳಿತ ಮಂಡಳಿ ಒಪ್ಪಿಗೆ ನೀಡಿಲ್ಲ.












Click it and Unblock the Notifications