ತಿರುಪತಿಯ ಬಾಲಾಜಿಗೆ 2 ಕೋಟಿ ರೂ. ಬಂಗಾರದ ಕೈ ನೀಡಿದ ಭಕ್ತ!
ತಿರುಮಲ, ಜೂನ್ 15: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಬಾಲಾಜಿ ದೇವಾಲಯಕ್ಕೆ ಭಕ್ತನೊಬ್ಬ 2 ಕೋಟಿ ರೂ. ಬೆಲೆ ಬಾಳುವ ಚಿನ್ನದ ಕೈಗಳನ್ನು ನೀಡಿದ್ದಾರೆ!
ತಮಿಳುನಾಡಿನ ತಂಗದೊರೈ ಎಂಬ ವ್ಯಕ್ತಿ ಅಭಯ ಹಸ್ತ, ಕಟಿ ಹಸ್ತದ ಆಭರಣವನ್ನು ಸುಪ್ರಭಾತ ಸೇವೆಯ ಮೂಲಕ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಅಧಿಕಾರಿಗಳಿಗೆ ಒಪ್ಪಿಸಲಿದ್ದಾರೆ.
ಎರಡು ಬಂಗಾರದ ಕೈಗಳೂ ತಲಾ 6 ಕೆಜಿ ತೂಗುತ್ತಿದ್ದು, ಬಾಲಾಜಿಯ ಭಕ್ತರಾಗಿರುವ ತಂಗದೊರೈ ಈ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲಿದ್ದಾರೆ.

2013 ರಲ್ಲಿ ತಿರುಪತಿಯ ಬಾಲಾಜಿಗಾಗಿ ಸ್ವರ್ಣರಥವನ್ನು ನಿರ್ಮಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. 32 ಅಡಿ ಎತ್ತರವಿದ್ದ ಈ ಸ್ವರ್ಣರಥಂ ಸುಮಾರು 28,000 ಕೆ.ಜಿ.ತೂಕವಿತ್ತು. 74 ಕೆ.ಜಿ.ಚಿನ್ನ, 2,800 ಕೆ.ಜಿ. ತಾಮ್ರ ಬಳಸಿ ಇದನ್ನು ನಿರ್ಮಿಸಲಾಗಿತ್ತು.












Click it and Unblock the Notifications