ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!

ಅಮರಾವತಿ, ಮಾರ್ಚ್ 10 : ಆಂಧ್ರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್‌ಆರ್ ಕಾಂಗ್ರೆಸ್ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾರ್ಚ್ 26ರಂದು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಿಗದಿಯಾಗಿದೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಉಮಾರೆಡ್ಡಿ ವೆಂಕಟೇಶ್ವರಲು ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷ ಉದ್ಯಮಿ ಮುಕೇಶ್ ಅಂಬಾನಿ ಮನವಿಯಂತೆ ಒಬ್ಬರಿಗೆ ಟಿಕೆಟ್ ಕೊಟ್ಟಿದೆ.

ರಾಜ್ಯಸಭೆ ಚುನಾವಣೆಗೆ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಮೋಪಿದೇವಿ ವೆಂಕಟರಮಣ, ಅಲ್ಲಾ ಅಯೋಧ್ಯ, ರಾಮಿರೆಡ್ಡಿ ಮತ್ತು ಪರಿಮಳ್ ಧೀರಜ್‌ ಲಾಲ್ ಲಾತ್ವಾನಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.

175 ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ 151 ಸದಸ್ಯ ಬಲವನ್ನು ಹೊಂದಿದೆ. ಆದ್ದರಿಂದ, ರಾಜ್ಯಸಭಾ ಚುನಾವಣೆಗೆ ಘೋಷಣೆ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಸುಲಭವಾಗಿ ಆಯ್ಕೆಯಾಗಲಿದ್ದಾರೆ.

ಮುಕೇಶ್ ಅಂಬಾನಿ ಮನವಿ

ಮುಕೇಶ್ ಅಂಬಾನಿ ಮನವಿ

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ವೈಎಸ್‌ಆರ್ ಕಾಂಗ್ರೆಸ್ ಉದ್ಯಮಿ ಮುಕೇಶ್ ಅಂಬಾನಿ ಮನವಿಯಂತೆ ಪರಿಮಳ ಧೀರಜ್‌ ಲಾಲ್ ಲಾತ್ವಾನಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಮಾರ್ಚ್ 26ರಂದು ಮತದಾನ

ಮಾರ್ಚ್ 26ರಂದು ಮತದಾನ

ಮಾರ್ಚ್ 26ರಂದು ಮತದಾನ ಆಂಧ್ರಪ್ರದೇಶ ವಿಧಾನಸಭೆಯಿಂದ 4 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ವಿಧಾನಸಭೆಯ ಸದಸ್ಯರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

4 ಸ್ಥಾನಗಳಲ್ಲಿ ಗೆಲುವು

4 ಸ್ಥಾನಗಳಲ್ಲಿ ಗೆಲುವು

ಆಂಧ್ರಪ್ರದೇಶ ವಿಧಾನಸಭೆ ಬಲಾಬಲದ ಆಧಾರದ ಮೇಲೆ ವೈಎಸ್‌ಆರ್‌ ಕಾಂಗ್ರೆಸ್ ಎಲ್ಲಾ 4 ಸ್ಥಾನಗಳಲ್ಲಿ ಜಯಗಳಿಸಿಲಿದೆ. ಉದ್ಯಮಿ ಮುಕೇಶ್ ಅಂಬಾನಿ ಮನವಿಯಂತೆ ಟಿಕೆಟ್ ನೀಡಿರುವ ಪರಿಮಳ ಧೀರಜ್‌ ಲಾಲ್ ಲಾತ್ವಾನಿ ಅವರು ಗೆಲ್ಲುವುದು ಖಚಿತವಾಗಿದೆ.

55 ಸ್ಥಾನಗಳಿಗೆ ಚುನಾವಣೆ

55 ಸ್ಥಾನಗಳಿಗೆ ಚುನಾವಣೆ

ಮಾರ್ಚ್ 26ರಂದು ವಿವಿಧ ರಾಜ್ಯಗಳ ವಿಧಾನಸಭೆಯಿಂದ 55 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 12 ರಿಂದ 13 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+