ಪೊಲೀಸರ ಅಪರೂಪದ ವರ್ಕಿಂಗ್ ಸ್ಟೈಲಿಗೆ ಬೇಸ್ತುಬಿದ್ದ ಪ್ರತಿಭಟನಾಕಾರರು

ಅಮರಾವತಿ, ಜ 4: ಆಂಧ್ರಪ್ರದೇಶಕ್ಕೆ ಅಮರಾವತಿ ಹೊರತಾಗಿ ಇನ್ನೆರಡು ನಗರವನ್ನು ರಾಜಧಾನಿಯನ್ನಾಗಿ ಮಾಡಲು ಹೊರಟಿರುವ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಕ್ರಮದ ವಿರುದ್ದ, ತೆಲುಗುದೇಶಂ ನೇತೃತ್ವದ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ಅಮರಾವತಿ ಜಿಲ್ಲೆಯ ಮಂದಮ್ಮಮ್ ಎನ್ನುವಲ್ಲಿ ನಡೆಯುತ್ತಿದ್ದ ಪ್ರತಿಭಟೆನೆ ವೇಳೆ, ಪೊಲೀಸ್ ಮುಖ್ಯಸ್ಥರು ನಡೆದುಕೊಂಡ ರೀತಿಗೆ ಪ್ರತಿಭಟನಾಕಾರರೇ ಬೇಸ್ತು ಬಿದ್ದಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡೆಪ್ಯುಟಿ ಸುಪರಿಡೆಂಟ್ ಆಪ್ ಪೊಲೀಸ್ ವೀರಾ ರೆಡ್ಡಿ ಆಗಮಿಸಿದ್ದಾರೆ. ಆಗ, ಪ್ರತಿಭಟನಾಕಾರರು, ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು, ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.

Protest Against Three Capital For Andhra Pradesh: DSP Fell at The Feet Of Protestors

ಆ ವೇಳೆ, ಕೈಮುಗಿಯುತ್ತಾ ಅಧಿಕಾರಿ ವೀರಾ ರೆಡ್ಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಭಟನಾಕಾರರು ಜಗ್ಗದಿದ್ದಾಗ, ಒಬ್ಬೊಬ್ಬರ ಕಾಲಿಗೆ ಬಿದ್ದು ವಾಪಸ್ ಹೋಗುವಂತೆ ಕೇಳಿಕೊಳ್ಳುತ್ತಿರುವ ದೃಶ್ಯವೀಗ ವೈರಲ್ ಆಗಿದೆ.

ಆಂಧ್ರದಲ್ಲಿ ವೈ.ಎಸ್.ಜಗನ್ ಅಧಿಕಾರ ಸ್ವೀಕರಿಸಿದ ನಂತರ, ಹಿಂದಿನ ಸರಕಾರದ ಹಲವು ಯೋಜನೆಗಳನ್ನು ರದ್ದುಪಡಿಸುವುದೋ ಅಥವಾ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರದ ಸಚಿವಾಲಯದ ಕಾರ್ಯಗಳನ್ನು ನಿರ್ವಹಿಸಲು ಒಂದು ರಾಜಧಾನಿ, ಶಾಸಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಮತ್ತೊಂದು ರಾಜಧಾನಿ ಹಾಗೂ ಹೈಕೋರ್ಟ್ ನ್ನು ಮತ್ತೊಂದು ರಾಜಧಾನಿಯಲ್ಲಿ ವಿಂಗಡಿಸಲು ತಜ್ಞರ ಸಮಿತಿ, ಜಗನ್ ಸರಕಾರಕ್ಕೆ ಸಲಹೆ ನೀಡಿದೆ.

ಜಗನ್ ಸರಕಾರದ ಕ್ರಮವನ್ನು ವಿರೋಧಿಸಿ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ರೈತರ ಭಾರೀ ಪ್ರತಿಭಟನೆ ನಡೆಯುತ್ತಿದೆ. ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರಿಯೂ ಆಗಿರುವ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ, ರೈತರ ಹೋರಾಟಕ್ಕಾಗಿ ತಮ್ಮ ಚಿನ್ನವನ್ನೂ ಹರಾಜಿಗೆ ಇಡುವ ಮೂಲಕ, ಭಾರೀ ಸುದ್ದಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+