ಚಂದ್ರಬಾಬು ನಾಯ್ಡುಗೆ NDA ಮುಚ್ಚಿದ ಬಾಗಿಲು! ಅಮಿತ್ ಶಾ ಕಿಡಿ
ವಿಜಯವಾಡ, ಏಪ್ರಿಲ್ 05: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಎನ್ ಡಿಎ ಬಾಗಿಲು ಶಾಶ್ವತವಾಗಿ ಮುಚ್ಚಿದೆ, ಇನ್ನೆಂದೂ ತೆರೆಯುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಮಿತ್ ಶಾ ಕಿಡಿಕಾರಿದ್ದಾರೆ.

ಲೋಕಸಭೆ ಮತ್ತು ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ಏಕಕಾಲದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಗುರುವಾರ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ ಪೂರ್ತಿ ಭಾಷಣದಲ್ಲೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರ ಏಲೆ ಹರಿಹಾಯ್ದ ಶಾ, 'ಎನ್ ಡಿಎ ಬಾಗಿಲು ನಿಮಗೆ ಸಂಪೂರ್ಣ ಮುಚ್ಚಿದೆ' ಎಂದರು.
"ಚಂದ್ರಬಾಬು ನಾಯ್ಡು ಒಬ್ಬ ಅವಕಾಶವಾದಿ ರಾಜಕಾರಣಿ. ಅವರು ಅಧಿಕಾರಕ್ಕಾಗಿ ಮತ್ತೆ ಎನ್ ಡಿಎ ಬಾಗಿಲು ತಟ್ಟಿದರೂ ಅಚ್ಚರಿಯಿಲ್ಲ. ಆದರೆ ಯಾವುದೇ ಕಾರಣಕ್ಕೂ ಎನ್ ಡಿಎ ನಾಯ್ಡುಗೆ ತನ್ನ ಬಾಗಿಲು ತೆಗೆಯುವುದಿಲ್ಲ. ಅದು ನಾಯ್ಡು ಪಾಲಿಗೆ ಶಾಶ್ವತವಾಗಿ ಮುಚ್ಚಿದೆ' ಎಂದರು.












Click it and Unblock the Notifications