• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಡು ರಸ್ತೆಯಲ್ಲಿ ಹಿರಿಯ ವರದಿಗಾರರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

|

ಅಮರಾವತಿ, ಅಕ್ಟೋಬರ್ 16: ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಹಿರಿಯ ವರದಿಗಾರರೊಬ್ಬರನ್ನು ಕೊಚ್ಚಿ ಕೊಂದಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಗುಂಡಿನ ದಾಳಿ ನಡೆಸಿ ಪತ್ರಕರ್ತ ಆಶೀಶ್ ಹತ್ಯೆಗೈದ ದುಷ್ಕರ್ಮಿಗಳು

ಆಂಧ್ರ ಜ್ಯೋತಿ ದಿನಪತ್ರಿಕೆಯ ವರದಿಗಾರರಾಗಿದ್ದ 45 ವರ್ಷ ವಯಸ್ಸಿನ ಕೆ ಸತ್ಯನಾರಾಯಣ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ, ತೀವ್ರ ರಕ್ತಸ್ರಾವದಿಂದ ಸತ್ಯನಾರಾಯಣ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಸ್ ಅನ್ನಾವರಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಡಿಜಿಪಿ ಗೌತಮ್ ಸಾವಂಗ್ ಅವರು ಪೂರ್ವ ಗೋದಾವರಿ ಜಿಲ್ಲೆಯ ಎಸ್ಪಿ ಅದ್ನಾನ್ ನಯೀಂ ಅಸ್ಮಿ ಅವರಿಗೆ ಖುದ್ದು ಈ ಪ್ರಕರಣದ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರಗೆಳೆಯುವಂತೆ ಆದೇಶಿಸಿದ್ದಾರೆ.

English summary
A 45-year-old reporter of a Telugu daily has been hacked to death by an unidentified gang in East Godavari district, police said. K Satyanarayana, a reporter of Andhra Jyothy, died on the spot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X