ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಆಂಧ್ರಕ್ಕೆ ಚಂಡಮಾರುತ ಹೊಡೆತ
ಬೆಂಗಳೂರು, ಡಿಸೆಂಬರ್ 13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಯೊಳಗೆ ಅದು ಚಂಡಮಾರುತವಾಗಿ ಬದಲಾಗಿ ಆಂಧ್ರ ಪ್ರದೇಶದ ಕಡೆ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆಳ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ಸೃಷ್ಠಿಯಾಗಿದೆ. ಪ್ರಸ್ತುತ ಅದು ಭಾರತದ ಕರಾವಳಿ (ಆಂಧ್ರಪ್ರದೇಶ)ಕ್ಕೆ ಸುಮಾರು 1000 ಕಿ.ಮೀ ದೂರದಲ್ಲಿದ್ದು, ಗಂಟೆಗೆ 120 ಕಿ.ಮೀ ವೇಗದಲ್ಲಿ ಕರಾವಳಿಯತ್ತ ರಭಸವಾಗಿ ದಾವಿಸುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತವು ಆಂಧ್ರಪ್ರದೇಶದ ತೀರಕ್ಕೆ ಹಾನಿ ಮಾಡಲಿದೆ. ಡಿಸೆಂಬರ್ 15 ಮತ್ತು 16ರಂದು ಚಂಡಮಾರುತ ಹೆಚ್ಚು ಭೀಕರ ರೂಪ ತಾಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಂಡಮಾರುತದಿಂದ ಆಂಧ್ರಪ್ರದೇಶದ ಕರಾವಳಿ ಭಾಗ ಹಾಗೂ ತಮಿಳುನಾಡಿನ ಉತ್ತರ ಭಾಗ ಹಾಗೂ ಕರ್ನಾಟಕದ ಉತ್ತರ ಭಾಗದಲ್ಲಿ ಮಳೆ ಆಗುತ್ತದೆ ಎಂದು ಹೇಳಲಾಗಿದೆ.
ಚಂಡಮಾರುತಕ್ಕೆ ಇನ್ನೂ ಯಾವುದೇ ಹೆಸರು ಇಟ್ಟಿಲ್ಲ ಆದರೆ ಇದಕ್ಕೆ 'ಪೆತಾಯಿ' ಎಂದು ಹೆಸರಿಡಲಾಗುತ್ತದೆ ಎಂಬ ಸುದ್ದಿ ಇದೆ. ಆದರೆ ಇದಿನ್ನೂ ಅಧಿಕೃತವಾಗಿಲ್ಲ.












Click it and Unblock the Notifications