Get Updates
Get notified of breaking news, exclusive insights, and must-see stories!

ಆರ್ ಜಿವಿ ಲಕ್ಷ್ಮೀಸ್ ಎನ್ಟಿಆರ್ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ನಿಷೇಧ!

ಅಮರಾವತಿ, ಮಾರ್ಚ್ 29: ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆ, ವಿವಾದವನ್ನು ಹುಟ್ಟು ಹಾಕಿರುವ ಲಕ್ಷ್ಮೀಸ್ ಎನ್ಟಿಆರ್ ಚಿತ್ರದ ಬಿಡುಗಡೆಗೆ ಆಂಧ್ರಪ್ರದೇಶ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಏಪ್ರಿಲ್ 03ರ ತನಕ ಆಂಧ್ರಪ್ರದೇಶದಲ್ಲಿ ಚಿತ್ರ ಬಿಡುಗಡೆ ಮಾಡುವಂತಿಲ್ಲ.

ರಾಮ್​ಗೋಪಾಲ್​ವರ್ಮ ನಿರ್ದೇಶನದ ಮಾಜಿ ಮುಖ್ಯಮಂತ್ರಿ, ಸಿನಿಮಾ ದಿಗ್ಗಜ ಎನ್ ಟಿ ರಾಮರಾವ್ ಅವರ ಜೀವನ, ಲಕ್ಷ್ಮಿ ಪಾರ್ವತಿ ಅವರನ್ನು ಮದ್ವೆಯಾದ ಬಳಿಕ ನಡೆದ ಘಟನಾವಳಿಗಳ ಆಧಾರಿತ 'ಲಕ್ಷ್ಮೀಸ್​ ಎನ್​ಟಿಆರ್​' ಮಾರ್ಚ್ 29ರಂದು ಬಿಡುಗಡೆಗೆ ಸಿದ್ಧವಾಗಿತ್ತು.

ಆದರೆ, ಈ ಚಿತ್ರದಲ್ಲಿರುವ ಪಾತ್ರವು ನೇರವಾಗಿ ಆಂಧ್ರದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ರಾಜಕೀಯ ಹಾಗೂ ವಯಕ್ತಿಕ ಬದುಕಿಗೆ ಸಂಬಂಧಿಸಿದ್ದು, ನೆಗಟಿವ್ ಆಗಿ ಚಿತ್ರಿಸಲಾಗಿದೆ. ಇದರಿಂದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮೇಲೆ ಪರಿಣಾಮ ಉಂಟಾಗಲಿದೆ ಎಂದು ತೆಲುಗುದೇಶಂ ಪಾರ್ಟಿಯ ಕಾರ್ಯಕರ್ತರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಮೊದಲ ಹಂತದ ಚುನಾವಣೆ ಮುಗಿಯುವ ತನಕ ಚಿತ್ರ ಬಿಡುಗಡೆಗೆ ತಡೆ ಕೋರಿದ ಅರ್ಜಿಗೆ ಹೈಕೋರ್ಟ್ ಅಸ್ತು ಎಂದಿದೆ.

 Andhra High Court stays release of Lakshmis NTR

ಏಪ್ರಿಲ್​ 15ರವರೆಗೆ ಆಂಧ್ರದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡದಂತೆ ಚಿತ್ರದ ನಿರ್ಮಾಪಕ ರಾಕೇಶ್ ರೆಡ್ಡಿ​ ಹಾಗೂ ನಿರ್ದೇಶಕರಾದ ರಾಮ್​ಗೋಪಾಲ್​ ವರ್ಮಾ ಹಾಗೂ ಅಗಸ್ತ್ಯ ಮಂಜು ಅವರಿಗೆ ನೋಟೀಸ್​ ನೀಡಲಾಗಿದೆ. ಆಂಧ್ರದಲ್ಲಿ ಏಪ್ರಿಲ್​ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.

ತೆಲಂಗಾಣದಲ್ಲಿ ಬಿಡುಗಡೆ : ಸುಮಾರು 750ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ವರ್ಮಾ ಅವರ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವು ಸಿಕ್ಕಿದೆ. ಕಳೆದ ವಾರ ಚಿತ್ರಕ್ಕೆ ತಡೆ ಕೋರಿ, ತೆಲಂಗಾಣಅ ಹೈಕೋರ್ಟಿನಲ್ಲಿ ಇದೇ ರೀತಿ ಅರ್ಜಿ ಹಾಕಲಾಗಿತ್ತು. ಆದರೆ, ಅರ್ಜಿ ತಿರಸ್ಕಾರಗೊಂಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+