ತಿರುಪತಿ ದೇವಸ್ಥಾನಕ್ಕೆ 3.16 ಕೋಟಿ ರೂ ದೇಣಿಗೆ ನೀಡಿದ ಎಐಎಡಿಎಂಕೆ ಶಾಸಕ
ತಿರುಮಲ, ಫೆಬ್ರುವರಿ 06: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಎಐಎಡಿಎಂಕೆ ಶಾಸಕ ಆರ್ ಕುಮಾರಗುರು ಅವರು ಶನಿವಾರ 3.16 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ತಾವು ನೀಡಿದ ಈ ದೇಣಿಗೆಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ತಮ್ಮ ವಿಧಾನಸಭಾ ಕ್ಷೇತ್ರವಾದ ಉಳಂದೂರು ಪೆಟ್ಟೈನಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಬೇಕೆಂದು ಟಿಟಿಡಿ ಬೋರ್ಡ್ ಸದಸ್ಯರೂ ಆಗಿರುವ ಕುಮಾರಗುರು ಅವರು ಮನವಿ ಮಾಡಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ವೈವಿ ಸುಬ್ಬರೆಡ್ಡಿ ತಿಳಿಸಿದ್ದಾರೆ.

ಇದೇ ಸಂದರ್ಭ ತಮಿಳುನಾಡಿನಲ್ಲಿ ವೆಂಕಟೇಶ್ವರ ದೇಗುಲ ನಿರ್ಮಾಣಕ್ಕೆಂದು ನಾಲ್ಕು ಎಕರೆ ಭೂಮಿಯನ್ನೂ ನೀಡಿದ್ದಾರೆ. ಆ ದಾಖಲೆಗಳನ್ನು ಶನಿವಾರ ಟಿಟಿಡಿಗೆ ಒಪ್ಪಿಸಿದ್ದಾರೆ. ಒಳ್ಳೆ ಮುಹೂರ್ತ ನೋಡಿಕೊಂಡು ದೇವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಕಳೆದ ಡಿಸೆಂಬರ್ 25ರಂದೇ ದೇವಸ್ಥಾನ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಎಂದು ಶಾಸಕ ಕುಮಾರಗುರು ತಿಳಿಸಿದ್ದಾರೆ.












Click it and Unblock the Notifications