Aland Elections : ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ
ಕಲಬುರಗಿ, ಮಾರ್ಚ್ 24: ಆಳಂದ ಅಸೆಂಬ್ಲಿ ಕ್ಷೇತ್ರವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದ್ದು, ಬೀದರ್ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಈ ಕ್ಷೇತ್ರವು 1951ರಲ್ಲೇ ಅಸ್ತಿತ್ವಕ್ಕೆ ಬಂದಿದೆ.
ಇದು ಸಾಮಾನ್ಯ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದೆ. ಆದರೆ, ಬೀದರ್ ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ SC ಮತದಾರರು ಸರಿ ಸುಮಾರು 54,882 ರಷ್ಟಿದ್ದಾರೆ. ಜನಗಣತಿಯ ಪ್ರಕಾರ ಶೇ 23.61 ರಷ್ಟಿದ್ದಾರೆ.
ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ST ಮತದಾರರು ಸರಿ ಸುಮಾರು 4,928 ಆಗಿದ್ದು, ಜನಗಣತಿಯ ಪ್ರಕಾರ ಶೇ 2.12% ರಷ್ಟಿದ್ದಾರೆ.

ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸರಿ ಸುಮಾರು 37,890 ರಷ್ಟಿದ್ದಾರೆ. ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 16.3 ರಷ್ಟಿದೆ.
ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಗ್ರಾಮೀಣ ಮತದಾರರು ಸರಿಸುಮಾರು ಶೇ 1,96,772 ರಷ್ಟಿದ್ದು, ಜನಗಣತಿಯ ಪ್ರಕಾರ ಶೇ 84.65 ರಷ್ಟಿದ್ದಾರೆ.
ಆಳಂದ ಅಸೆಂಬ್ಲಿಯಲ್ಲಿ ಕ್ಷೇತ್ರದಲ್ಲಿ ನಗರ ಮತದಾರರು ಸರಿ ಸುಮಾರು ಶೇ 35,682 ರಷ್ಟಿದ್ದಾರೆ. ಜನಗಣತಿಯ ಪ್ರಕಾರ ಶೇ 15.35 ರಷ್ಟಿದ್ದಾರೆ.
2019 ರ ಲೋಕಸಭಾ ಚುನಾವಣೆಯಂತೆ ಆಳಂದ ವಿಧಾನಸಭೆಯ ಒಟ್ಟು ಮತದಾರರು 232454 ಇದ್ದಾರೆ.
2019 ರ ಲೋಕಸಭಾ ಚುನಾವಣೆಯಂತೆ ಆಳಂದ ವಿಧಾನಸಭೆಯ ಮತಗಟ್ಟೆಗಳ ಸಂಖ್ಯೆ 254 ರಷ್ಟಿವೆ.
2019 ರ ಲೋಕಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭೆಯ ಮತದಾರರ ಮತದಾನ ಶೇ 57.42 ರಷ್ಟು ಆಗಿದೆ.
2018 ರ ಅಸೆಂಬ್ಲಿ ಚುನಾವಣೆಯಲ್ಲಿ ಆಳಂದ ವಿಧಾನಸಭೆಯ ಮತದಾರರ ಮತದಾನ ಶೇ 68.72 ರಷ್ಟು ಆಗಿದೆ.
ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಚುನಾಯಿತ ಶಾಸಕರು
2018 ರ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಗುತ್ತೇದಾರ್ ಸುಭಾಷ್ ರುಕ್ಮಯ್ಯ
2013 ರ ವಿಧಾನಸಭಾ ಚುನಾವಣೆ : ಕೆಜೆಪಿಯಿಂದ ಬಿ.ಆರ್. ಪಾಟೀಲ
2008 ರ ವಿಧಾನಸಭಾ ಚುನಾವಣೆ: ಜೆಡಿಎಸ್‌ನಿಂದ ಸುಭಾಷ್ ಗುತ್ತೇದಾರ್
ಕಳೆದ 6 ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿ 4 ಬಾರಿ ಮುನ್ನಡೆ ಸಾಧಿಸಿದ್ದರೆ, ಜೆಡಿಎಸ್ 1 ಬಾರಿ ಮತ್ತು ಕೆಜೆಪಿ 1 ಬಾರಿ ಮುನ್ನಡೆ ಸಾಧಿಸಿದೆ.
2018 ರ ಅಸೆಂಬ್ಲಿ ಚುನಾವಣಾ ಫಲಿತಾಂಶಗಳು (% ಮತದಾನ ಬೂತ್‌ಗಳಲ್ಲಿ ಮುನ್ನಡೆ)
ಶೇ 56ರಷ್ಟು ಮತಗಟ್ಟೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ
ಶೇ 43.2ರಷ್ಟು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ
2018 ರಲ್ಲಿ, ಭಾರತೀಯ ಜನತಾ ಪಕ್ಷದ ಸುಭಾಷ್ ಗುತ್ತೇದಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ ಆರ್ ಪಾಟೀಲ್ ಅವರನ್ನು 697 ಮತಗಳ ಅಂತರದಿಂದ ಸೋಲಿಸುವ ಮೂಲಕ ಆಳಂದ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.
ಈ ಬಾರಿಯು ಬಿಜೆಪಿಯಿಂದ ಸುಭಾಷ್ ಗುತ್ತೇದಾರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಬಹುತೇಕ ಖಚಿತವಾಗಿವೆ. ಇನ್ನು ಕಾಂಗ್ರೆಸ್‌ನಿಂದ ಬಿ ಆರ್ ಪಾಟೀಲ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಬಯಸುವುದಾದರೆ, ಆಳಂದ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಬಿ ಆರ್ ಪಾಟೀಲ್ ಹೇಳಿದ್ದಾರೆ. ಆದರೆ, ಇಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ.
ಆಳಂದ ಕ್ಷೇತ್ರದಲ್ಲಿ 1999 ರಲ್ಲಿ ಜನತಾದಳದಿಂದ ಸುಭಾಷ್ ಗುತ್ತೇದಾರ್ ಸ್ಪರ್ಧಿಸಿದ್ದರು. ಅವರ ವಿರುದ್ಧ ಲೋಕಶಕ್ತಿಯಿಂದ ಬಿ ಆರ್ ಪಾಟೀಲ್ ಕಣಕ್ಕಿಳಿದಿದ್ದರು. ಆ ಸಮಯದಲ್ಲಿ ಗುತ್ತೇದಾರ್ ಅವರು ಬಿ ಆರ್ ಪಾಟೀಲ್ ಅವರನ್ನು ಎರಡು ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ನಂತರ 2004ರಲ್ಲಿ ಬಿ ಆರ್ ಪಾಟೀಲ್ ಅವರು ಜೆಡಿಎಸ್‌ನಿಂದ ಸ್ಪರ್ದಿಸಿದ್ದರು. ಗುತ್ತೇದಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 17 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
2008ರಲ್ಲಿ ಮತ್ತೆ ಜೆಡಿಎಸ್‌ನಿಂದ ಸುಭಾಶ್ ಗುತ್ತೇದಾರ್ ಸ್ಪರ್ಧೆ ಮಾಡಿದರಿ. ಬಿ ಆರ್ ಪಾಟೀಲ್ ಕಾಂಗ್ರೆಸ್‌ನಿಂದ ಕಣಕ್ಕಿಳಿದರು. ಬಿ.ಆರ್.ಪಾಟೀಲ್ ವಿರುದ್ಧ ಸುಭಾಷ್ ಗುತ್ತೇದಾರ್ ಅವರು 4 ಸಾವಿರ ಮತಗಳ ಅಂತರದಿಂದ ಜಯಸಾಧಿಸಿದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿಯಿಂದ ಬಿ ಆರ್ ಪಾಟೀಲ್ ಸ್ಪರ್ಧಿಸಿದರೆ ಜೆಡಿಎಸ್‌ನಿಂದ ಸುಭಾಷ್ ಗುತ್ತೇದಾರ್ ಕಣಕ್ಕಿಳಿದರು. ಆಗ ಗುತ್ತೇದಾರ್ ವಿರುದ್ಧ ಬಿ ಆರ್ ಪಾಟೀಲ್ ಮತ್ತೆ ಜಯಗಳಿಸಿದರು.
2018ರಲ್ಲಿ ಕಾಂಗ್ರೆಸ್‌ನಿಂದ ಬಿ ಆರ್ ಪಾಟೀಲ್ ಹಾಗೂ ಬಿಜೆಪಿಯಿಂದ ಸುಭಾಷ್ ಗುತ್ತೇದಾರ್ ಸ್ಪರ್ಧಿಸಿದರು. ಕೇವಲ 600 ಮತಗಳ ಅಂತರದಿಂದ ಬಿ ಆರ್ ಪಾಟೀಲ್ ಸೋಲು ಅನುಭವಿಸಿದರು.












Click it and Unblock the Notifications