ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಡೋದರದ ಈತ ದಂಡದಿಂದ ತಪ್ಪಿಸಿಕೊಳ್ಳಲು ಎಂಥ ಐಡ್ಯಾ ಮಾಡ್ಯಾರ

|
Google Oneindia Kannada News

ಅಹ್ಮದಾಬಾದ್, ಸೆಪ್ಟೆಂಬರ್ 10: ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ನಂತರ ಗುಜರಾತ್ ನ ವಡೋದರದ ಆರ್ ಶಾ ಅವರು ಒಂದು ಅದ್ಭುತವಾದ ಐಡ್ಯಾ ಮಾಡ್ಯಾರ. ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ವಿಮೆ ಮತ್ತಿತರ ಪತ್ರಗಳನ್ನು ತಮ್ಮ ಹೆಲ್ಮೆಟ್ ಗೆ ಅಂಟಿಸಿಕೊಂಡಿದ್ದಾರೆ. ಆ ಮೂಲಕ ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ದಾರಿ ಕಂಡುಕೊಂಡಿದ್ದಾರೆ.

ಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

ಶಾ ಅವರೇ ಹೇಳಿಕೊಳ್ಳುವಂತೆ, ಯಾವುದೇ ದಂಡ ತಲೆ ಮೇಲೆ ಬೀಳದಿರಲಿ ಎಂದು ಹೀಗೆ ಮಾಡಿದ್ದಾರೆ. ಎಎನ್ ಐ ಸುದ್ದಿ ಸಂಸ್ಥೆಯು ಆರ್ ಶಾ ಅವರ ಫೋಟೋವನ್ನು ಟ್ವೀಟ್ ಮಾಡಿದೆ. ವಿಮೆ ದಾಖಲೆ, ಡ್ರೈವಿಂಗ್ ಲೈಸೆನ್ಸ್ ಅನ್ನು ಹೆಲ್ಮೆಟ್ ಗೆ ಅಂಟಿಸಿರುವುದು ಕಂಡುಬರುತ್ತದೆ.

Vadodara Man New Idea To Avoid Hefty Fines After Motor Vehicle Act Amendment

"ಬೈಕ್ ಓಡಿಸುವ ಮೊದಲು ಹೆಲ್ಮೆಟ್ ಹಾಕಿಕೊಳ್ಳುತ್ತೇನೆ" ಎಂದು ಶಾ ಎಎನ್ ಐಗೆ ತಿಳಿಸಿದ್ದು, "ಆ ಕಾರಣಕ್ಕೆ ಎಲ್ಲ ದಾಖಲೆಗಳನ್ನು ಹೆಲ್ಮೆಟ್ ಗೆ ಅಂಟಿಸಿದ್ದೇನೆ. ಈ ಮೂಲಕ ಹೊಸ ಕಾನೂನಿನ ಪ್ರಕಾರ ಯಾವುದೇ ದಂಡ ಬೀಳದಂತೆ ಇರಬಹುದು" ಎಂದು ಶಾ ಕಾರಣ ಬಹಿರಂಗ ಮಾಡಿದ್ದಾರೆ.

Vadodara Man New Idea To Avoid Hefty Fines After Motor Vehicle Act Amendment

ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಮೊತ್ತದ ದಂಡ ಹಾಕಲಾಗುತ್ತಿದೆ. ಹೀಗೆ ಕಾನೂನು ಜಾರಿಗೆ ಬಂದ ನಂತರ ಹಲವು ಮಂದಿ ಇಂಥ ಪ್ರಯೋಗ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ.

English summary
R Shah, from Vadodara, Gujarat found new idea to avoid hefty fines after Motor Vehicle act amendment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X