ಸೂರತ್ ಅತ್ಯಾಚಾರ ಪ್ರಕರಣ: ಓರ್ವ ವ್ಯಕ್ತಿ ಬಂಧನ

ಅಹ್ಮದಾಬಾದ್, ಏಪ್ರಿಲ್ 21: ಸೂರತ್ ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಅಹ್ಮದಾಬಾದ್ ಮೂಲದವನು ಎನ್ನಲಾಗಿದೆ.

ಏಪ್ರಿಲ್ 6 ರಂದು ಸೂರತ್ತಿನ ಭೆಸ್ಟಾನ್ ಕ್ರಿಕೆಟ್ ಮೈದಾನದಲ್ಲಿ 9-11 ವರ್ಷದ ಒಳಗಿನ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ವೈದ್ಯಕೀಯ ಪರೀಕ್ಷೆಯ ನಂತರ ಆಕೆ ಅತ್ಯಾಚಾರಕ್ಕೊಳಗಾಗಿರುವುದು ದೃಢವಾಗಿತ್ತು. ಆಕೆಯ ದೇಹದ ಮೇಲೆ 86 ಕ್ಕೂ ಹೆಚ್ಚು ಗಾಯದ ಗುರುತುಗಳಿದ್ದವು.

ಸುಮಾರು 8 ದಿನಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆದಿತ್ತು ಮತ್ತು ನಂತರ ಆಕೆಯನ್ನು ಮತ್ತಷ್ಟು ಹಿಸಿಸಿ ಕೊಲೆ ಮಾಡಲಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿತ್ತು.

Surat minor girl rape and murder case: one man held

ಸಂತ್ರಸ್ಥ ಬಾಲಕಿ ಆಂಧ್ರಪ್ರದೇಶ ಮೂಲದವಳು ಎಂಬುದು ಏಪ್ರಿಲ್ 17 ರಂದು ತಿಳಿದುಬಂದಿತ್ತು. ಕಳೆದ ವರ್ಷ ಅಕ್ಟೋಬರ್ ನಿಂದ ಆಕೆ ಕಾಣೆಯಾಗಿದ್ದಳು.

ಪೋಕ್ಸೋ(Protection of Children from Sexual Offences) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ಇಂದು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಡೆದ ಕತಯವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ, ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಂತರ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಕೂಗು ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಈ ದುರಂತ ಘಟನೆ ಬೆಳಕಿಗೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+