• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತಂಜಲಿ ಕೊರೊನಾ ಔಷಧಿಗೆ ಅನುಮತಿ ನಿರಾಕರಿಸಿದ ರಾಜಸ್ಥಾನ

|
Google Oneindia Kannada News

ಅಹಮದಬಾದ್, ಜೂನ್ 25: ಕೊರೊನಾ ವೈರಸ್ ಕೇಸ್‌ಗಳು ತೀವ್ರವಾಗುತ್ತಿರುವ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಕೊರೊನಾ ವಿರೋಧಿ ಔಷಧಿ ಬಿಡುಗಡೆ ಮಾಡಿದೆ. ಆದರೆ, ಈ ಔಷಧಿಗೆ ರಾಜಸ್ಥಾನ ಮತ್ತು ಮಹಾರಾಷ್ಟ್ರ ಸರ್ಕಾರ ಬ್ರೇಕ್ ಹಾಕಿದೆ.

ಶೇಕಡಾ 100ರಷ್ಟು ಕೊರೊನಾ ವಿರುದ್ಧ ಈ ಔಷಧ ಹೋರಾಡಲಿದೆ ಮತ್ತು ಫಲಿತಾಂಶವೂ ನೀಡಲಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ. ''ಪತಂಜಲಿಯ ಕೊರೊನಾ ವಿರೋಧಿ ಔಷಧ ಮಾರಾಟಕ್ಕೆ ರಾಜ್ಯದಲ್ಲಿ ನಾವು ಅನುಮತಿ ನೀಡುವುದಿಲ್ಲ. ಐಸಿಎಂಆರ್ ಸಂಸ್ಥೆಯಿಂದ ಅನುಮತಿ ಸಿಕ್ಕರೆ ಮಾತ್ರ ಅವಕಾಶ'' ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.

ಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆ

''ಕೊರೊನಾ ವೈರಸ್ ಗುಣಪಡಿಸಲು ಔಷಧ ಎಂದು ಹೇಳಿಕೊಳ್ಳುತ್ತಿರುವ ಪತಂಜಲಿ ಕಂಪನಿ ಸರ್ಕಾರದ ಅನುಮತಿ ಪಡೆದುಕೊಂಡಿಲ್ಲ. ಈ ಕುರಿತು ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲ. ಅನುಮತಿಯೂ ನೀಡಿಲ್ಲ'' ಎಂದು ರಘು ಶರ್ಮಾ ಮಾಹಿತಿ ನೀಡಿದ್ದಾರೆ.

''ಕೊರೊನಾ ಔಷಧಿಗೆ ಆಯುಷ್ ಸಚಿವಾಲಯ ಅನುಮೋದನೆ ನೀಡಿಲ್ಲ. ಹಾಗಾಗಿ, ರಾಜ್ಯದಲ್ಲಿ ಮಾರಾಟ ಮತ್ತು ಪ್ರಚಾರ ಮಾಡಿದ್ರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ'' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.

ಅಂದ್ಹಾಗೆ, ಪತಂಜಲಿ ಸಂಸ್ಥೆಯ ಕೊರೊನಾ ವಿರೋಧಿ ಔಷಧಿ ಅಧಿಕೃತವಾಗಿ ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಆಯುಷ್ ಸಚಿವಾಲಯ ಮಾರಾಟ ಮತ್ತು ಪ್ರಚಾರಕ್ಕೆ ಬ್ರೇಕ್ ಹಾಕಿದೆ. ಔಷಧಿ ಕುರಿತು ಪೂರ್ತಿ ವಿವರ ಕೊಡಿ, ಪ್ರಚಾರ ಮಾಡುವುದು ನಿಲ್ಲಿಸಿ ಎಂದು ಸೂಚಿಸಿದೆ.

English summary
We will not give permission to Patanjali to sell their anti-Corona drug in the state. We will decide once they get approval from Indian Council of Medical Research (ICMR): Raghu Sharma, Rajasthan Health Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X