ಬಿಜೆಪಿ ತೊರೆದ ಪಾಟೀದಾರ್ ನಾಯಕಿ ಗುಜರಾತಿನ ರೇಷ್ಮಾ ಪಟೇಲ್
ಗಾಂಧಿನಗರ, ಮಾರ್ಚ್ 16: ಬಿಜೆಪಿ ಸೇರಿದ್ದ ಪಾಟೀದಾರ್ ಆಂದೋಲನದ ನಾಯಕಿ ಗುಜರಾತಿನ ರೇಷ್ಮಾ ಪಟೇಲ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿ ಎಂದರೆ ಒಂದು ಪಕ್ಷವಲ್ಲ, ಅದು ಮಾರ್ಕೆಟಿಂಗ್ ಕಂಪೆನಿ ಎಂದು ರಾಜೀನಾಮೆ ಬಳಿಕ ರೇಷ್ಮಾ ರಾವ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಹಾರ್ದಿಕ್ ಪಟೇಲ್ ಅವರಿಂದ ಆರಂಭವಾದ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಪಾಟೀದಾರ್ ಆಂದೋಲನದಲ್ಲಿ ಗುರುತಿಸಿಕೊಂಡಿದ್ದ ರೇಷ್ಮಾ, ತಮ್ಮ ಬೇಡಿಕೆಗಳನ್ನು ಬಿಜೆಪಿ ಈಡೇರಿಸುವ ಭರವಸೆ ನೀಡುತ್ತಿದ್ದಂತೆಯೇ ಬಿಜೆಪಿ ಸೇರಿದ್ದರು. ಆದರೆ ಇದುವರೆಗೂ ಬಿಜೆಪಿ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ ಎಂದು ದೂರಿರುವ ಅವರು, ಗುಜರಾತ್ ಬಿಜೆಪಿ ಮುಖಂಡ ಜಿತು ವಘಾನಿ ಅವರಿಗೆ ರಾಜೀನಾಮೆ ಸಲ್ಲಿಸಿದರು.

"ಬಿಜೆಪಿ ಈಗ ಒಂದು ಮಾರ್ಕೆಟಿಂಗ್ ಕಂಪನಿಯಾಗಿದೆ. ನಮ್ಮನ್ನೆಲ್ಲ ಆ ಕಂಪನಿಗಾಗಿ ಸುಳ್ಳು ಹೇಳಿ, ಸುಳ್ಳು ಯೋಜನೆಗಳನ್ನು ನೀಡುವ ಭರವಸೆ ನೀಡಲು ಹೇಳಲಾಗುತ್ತಿದೆ. ನನ್ನ ಮನಸ್ಸು ಇದಕ್ಕೆ ಒಪ್ಪುತ್ತಿಲ್ಲ. ನಾವು ದೇಶಕ್ಕಾಗಿ ಕೆಲಸ ಮಾಡುವವರು, ಸಮಾಜದಲ್ಲಿ ಧನಾತ್ಮಕ ಬದಲಾವಣೆಯಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಬಿಜೆಪಿಯಿಂದ ಹೊರಬಂದಿದ್ದೇನೆ" ಎಂದು ರೇಷ್ಮಾ ಹೇಳಿದರು.












Click it and Unblock the Notifications