Get Updates
Get notified of breaking news, exclusive insights, and must-see stories!

ವಿಡಿಯೋ: ಬೋಟ್ ನಲ್ಲಿ 30 ಮಂದಿ ರಕ್ಷಿಸಿದ ಎನ್ ಡಿಆರ್ಎಫ್!

ಅಹ್ಮದಾಬಾದ್, ಆಗಸ್ಟ್.25: ಉತ್ತರ ಭಾರತದಲ್ಲಿ ವರುಣದೇವನು ರೌದ್ರನರ್ತನ ತೋರುತ್ತಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ಬೀದಿಗೆ ಬಂದು ನಿಂತಿದೆ. ನಿಲ್ಲುವುದಕ್ಕೂ ನೆಲೆ ಇಲ್ಲದಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಗುಜರಾತ್ ನಲ್ಲಿ ನದಿಗಳಲ್ಲೇ ಉಕ್ಕಿ ಹರಿಯುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾಕಷ್ಟು ಗ್ರಾಮಗಳ ಸುತ್ತಲೂ ನೀರು ಆವರಿಸಿದ್ದು, ನಡುಗಡ್ಡೆಯ ನಡುವೆ ನೂರಾರು ಜನರು ಸಿಲುಕಿರುವು ಕಂಡು ಬಂದಿದೆ.

NDRF Team Rescued 30 People Stranded In Gujarat Flood Area

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದ್ದಾರೆ. ಸೋಮವಾರ ಎನ್ ಡಿಆರ್ಎಫ್ ತಂಡವು ನಡೆಸಿದ ರಕ್ಷಣಾ ಕಾರ್ಯಾಚರಣೆಯ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೋಟ್ ನಲ್ಲಿ 30 ಜನರ ರಕ್ಷಣೆ:

ಗುಜರಾತ್ ನ ಮೋರ್ಬಿ ಜಿಲ್ಲಿಯ ಚಿಕಾಲಿ ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿತ್ತು. ಇದರ ನಡುವೆ ಸಿಲುಕಿದ್ದ 30 ಜನರ ಗ್ರಾಮಸ್ಥರಿಗೆ ಪ್ರಾಣ ಭೀತಿ ಎದುರಾಗಿದ್ದು, ತಕ್ಷಣ ಕಾರ್ಯಾಚರಣೆಗೆ ಇಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು 30 ಜನರನ್ನು ರಕ್ಷಿಸಿದೆ. ಬೋಟ್ ಗಳಲ್ಲಿ ಮೂರು ಗ್ರಾಮಸ್ಥರನ್ನು ಸುರಕ್ಷಿತವಾಗಿ ತಡ ಸೇರಿಸುವ ಕೆಲಸವನ್ನು ಮಾಡಿದೆ. ಸದ್ಯ 30 ಗ್ರಾಮಸ್ಥರು ಜಿಲ್ಲಾಡಳಿತದ ಆಶ್ರಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+