"ಗಾಂಧಿ ಹುಟ್ಟಿದ ನಾಡಿನಿಂದ ಬಂದ ಪ್ರಧಾನಿ ಮೋದಿ ಅತಿ ದೊಡ್ಡ ಸುಳ್ಳುಗಾರ"

ಅಹ್ಮದಾಬಾದ್, ಏಪ್ರಿಲ್ 16: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ನಲ್ಲಿ ಚುನಾವಣೆ ಪ್ರಚಾರ ನಡೆಸಿರುವ ಕಾಂಗ್ರೆಸ್ ನಾಯಕ ನವ್ ಜೋತ್ ಸಿಂಗ್ ಸಿಧು, ಮಹಾತ್ಮ ಗಾಂಧಿ ಜನ್ಮ ಸ್ಥಳವಾದ ಗುಜರಾತ್ ನಿಂದಲೇ 'ಅತಿ ದೊಡ್ಡ ಸುಳ್ಳುಗಾರ' ಪ್ರಧಾನಿಯೂ ಬಂದಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ.

ದಾಂಗ್ ಜಿಲ್ಲೆಯಲ್ಲಿ ಮಾತನಾಡಿದ ಸಿಧು, ಪ್ರಧಾನ ಮಂತ್ರಿಗಳು ಶ್ರೀಮಂತ ಜನರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ನನಗೆ ಅಚ್ಚರಿ ಆಗುತ್ತದೆ. ಏಕೆಂದರೆ, ಮಹಾತ್ಮ ಗಾಂಧಿ ಅವರಿಗೆ ಜನ್ಮ ನೀಡಿದ ಭೂಮಿಯಿಂದಲೇ ಪ್ರಧಾನಿಯೂ ಬಂದಿದ್ದಾರೆ. ಆದರೆ ಅವರು ಅವರು ಅತಿ ದೊಡ್ಡ ಸುಳ್ಳುಗಾರ ಎಂದಿದ್ದಾರೆ.

ಮೋದಿ ಜೂಟಾ ನಂಬರ್ ಒನ್ ಮತ್ತು ಫೇಕು ನಂಬರ್ ಒನ್ ಎಂದು ಜರಿದಿರುವ ಸಿಧು, ಮೋದಿ ಜೀ ನೀವು ಒಂದು ಪರ್ಸೆಂಟ್ ನಷ್ಟಿರುವ ಶ್ರೀಮಂತರ ಪ್ರಧಾನಿ. ನೀವು ಬಡ ನಾಗರಿಕರ ಪ್ರಧಾನಿ ಅಲ್ಲ. ಇಲ್ಲಿನ ನಾಗರಿಕರನ್ನು ಸ್ಥಳಾಂತರ ಮಾಡಿ, ಬೇರೆದೆ ಹೋಗುವಮ್ತೆ ಹೇಳುತ್ತೀರಿ. ಈ ಭಾಗದ ಶೇಕಡಾ ಎಂಬತ್ತರಷ್ಟು ಸ್ಥಳೀಯರು ಕಾರ್ಮಿಕರಾಗಿ ಬೇರೆ ರಾಜ್ಯಗಳಲ್ಲಿ ದುಡಿಯುತ್ತಿದ್ದಾರೆ ಎಂದಿದ್ದಾರೆ.

Navjoth Singh Sidhu

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಹುಲ್ ಗಾಂಧಿ ಗುಜರಾತ್ ನ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಅವರು ಹೇಳಿದರು. ಎರಡು ಕೋಟಿ ಉದ್ಯೋಗವನ್ನು ಪ್ರತಿ ವರ್ಷ ಸೃಷ್ಟಿಸುವ ಭರವಸೆ ನೀಡಿದ್ದಿರಿ. ನಿಮ್ಮ ಆಡಳಿತಾವಧಿಯಲ್ಲಿ ಎಂಟು ಲಕ್ಷ ಜನರಿಗೆ ಕೆಲಸ ಸಿಕ್ಕಿದೆ. ಚೀನಾ ಜಿಡಿಪಿ ಆರು ಪರ್ಸೆಂಟ್ ಇದ್ದರೂ ಅವರು ಐದು ವರ್ಷದಲ್ಲಿ ಎಪ್ಪತ್ತು ಲಕ್ಷ ಉದ್ಯೋಗ ನೀಡಿದ್ದಾರೆ. ಭಾರತದ ಜಿಡಿಪಿ ಎಂಟು ಪರ್ಸೆಂಟ್ ಇದ್ದರೂ ನಾವು ಸೃಷ್ಟಿಸಿದ್ದು ಎಂಟು ಲಕ್ಷ ಉದ್ಯೋಗ ಎಂದಿದ್ದಾರೆ.

ಈ ಮಧ್ಯೆ ಸರಕಾರಿ ಸ್ವಾಮ್ಯದ ಎಚ್ ಎಎಲ್, ಬಿಎಸ್ ಎನ್ ಎಲ್, ಎಂಟಿಎನ್ ಎಲ್ ನಿಂದ ಸಿಬ್ಬಂದಿ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ. ಸರಕಾರಿ ಬ್ಯಾಕ್ ಲಾಗ್ ಹುದ್ದೆಗಳು ಇಪ್ಪತ್ತೈದು ಲಕ್ಷ ಇವೆ. ಇವುಗಳನ್ನೆಲ್ಲ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಭರ್ತಿ ಮಾಡುತ್ತಾರೆ ಎಂದು ಹೇಳಲು ಬಯಸುತ್ತೇನೆ ಎಂದು ಸಿಧು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+