ವಿಡಿಯೋ; ತಬ್ಬಿಕೊಳ್ಳಲು ನಿರಾಕರಿಸಿದ ಇವಾಂಕಾ ಟ್ರಂಪ್!
ಅಹಮದಾಬಾದ್, ಫೆಬ್ರವರಿ 24; ಎರಡು ದಿನಗಳ ಭಾರತದ ಪ್ರವಾಸಕ್ಕಾಗಿ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಡೀ ದಿನ ಮಾಧ್ಯಮಗಳಲ್ಲಿ ಸದ್ದು ಮಾಡಿದರು.
Recommended Video
ಟ್ರಂಪ್‌ರಷ್ಟೇ ಅವರ ಮಗಳು ಇವಾಂಕಾ ಟ್ರಂಪ್ ಕೂಡ ಗಮನ ಸೆಳೆದಿದ್ದಾರೆ. ಅಹಮದಾಬಾದ್‌ನ ಮೋಟೆರಾ ಮೈದಾನದಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲೂ ಇವಾಂಕಾ ಟ್ರಂಪ್ ಭಾಗವಹಿಸಿದ್ದರು. ಈ ವೇಳೆ ಮುಖ್ಯವೇದಿಕೆ ಬಳಿ ಹೋಗುವಾಗ ಖಾಸಗಿ ಸುದ್ದಿ ಸಂಸ್ಥೆಯೊಂದರ ಹಿರಿಯ ವರದಿಗಾರ್ತಿಯೊಬ್ಬರು ಇವಾಂಕಾರನ್ನು ತಬ್ಬಿಕೊಳ್ಳಲು ಯತ್ನಿಸಿದರು.
After Namaste Trump Rally at Motera, Ahmedabad!
— Pratyush Sayan Bharadwaj (प्रत्यूष सायण भारद्वाज) (@PratushSayan) February 24, 2020
ANI Reporter: Ivanka! Did you enjoy?
Ivanka: Spectacular 😍#NamasteTrump#NamasteyTrump#TrumpIndiaVisit #NamsteTrump #TrumpInIndia #TrumpIndiaVisit #IvankaTrump pic.twitter.com/2VAj3ph2Y3
ಆದರೆ, ಇವಾಂಕಾ ಆ ಕ್ಷಣದಿಂದ ದೂರ ಸರಿದು, ನಯವಾಗಿ ತಿರಸ್ಕರಿಸಿದರು. ಈ ಕುರಿತ ವಿಡಿಯೋ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಅಷ್ಟೇ ಅಲ್ಲದೇ ಟ್ವಿಟ್ಟರ್‌ನಲ್ಲಿ ಇವಾಂಕಾ ಟ್ರಂಪ್ ಡೊನಾಲ್ಡ ಟ್ರಂಪ್ ಅವರನ್ನೂ ಮೀರಿಸಿ ಟ್ರೆಂಡಿಂಗ್‌ನಲ್ಲಿದ್ದಾರೆ.

ಆಗ್ರಾದ ತಾಜ್‌ಮಹಲ್ ನೋಡಿಕೊಂಡು ಟ್ರಂಪ್ ದಂಪತಿ ಹಾಗೂ ಅವರ ಮಗಳು ಇವಾಂಕಾ ಟ್ರಂಪ್ ದೆಹಲಿಗೆ ಪ್ರಯಾಣಿಸಿದರು. ಅವರು ಸೋಮವಾರ ರಾತ್ರಿ ಐಷಾರಾಮಿ ಹೋಟೆಲ್‌ನಲ್ಲಿ ತಂಗಲಿದ್ದಾರೆ.












Click it and Unblock the Notifications