ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಗುಜರಾತ್‌ನಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ 6 ಭಕ್ತರ ಸಾವು

|
Google Oneindia Kannada News

ಅಹಮದಾಬಾದ್, ಸೆ.02: ಗುಜರಾತ್‌ನ ಅರಾವಳಿ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

ಅವಘಡದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಅರಾವಳಿಯ ಕೃಷ್ಣಾಪುರ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ

ಮಾಹಿತಿಯ ಪ್ರಕಾರ ಇವರೆಲ್ಲರೂ ಅಂಬಾ ಜೀ ದರ್ಶನಕ್ಕೆ ತೆರಳುತ್ತಿದ್ದರು. ಪಂಚಮಹಲ್ ನಿವಾಸಿಗಳಾದ ಇವರು ಕಾಲ್ನಡಿಗೆಯಲ್ಲಿ ಅಂಬಾ ಜೀ ದರ್ಶನಕ್ಕೆ ಹೋಗುತ್ತಿದ್ದರು.

Gujarat 6 Dead, 7 Seriously Injured in Aravalli Road Accident

ಬನಸ್ಕಾಂತದಲ್ಲಿರುವ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಅಂಬಾಜಿಯಲ್ಲಿ ವಿಗ್ರಹವಿಲ್ಲ. ಇಲ್ಲಿ ಪವಿತ್ರವೆಂದು ಪರಿಗಣಿಸಲಾದ ಶ್ರೀ ವೀಸಾ ಯಂತ್ರವನ್ನು ಪೂಜಿಸಲಾಗುತ್ತದೆ, ಇದನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ.

ಮಾಹಿತಿ ಪ್ರಕಾರ, ಸೆಪ್ಟೆಂಬರ್ 5 ರಿಂದ 6 ದಿನಗಳ ಕಾಲ ಭದರ್ವಿ ಪೂನಂ ಮೇಳವನ್ನು ಆಯೋಜಿಸಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯ ಭಕ್ತರು ಅಂಬಾಜಿಗೆ ಆಗಮಿಸುತ್ತಿದ್ದಾರೆ. ಬನಸ್ಕಾಂತ ಜಿಲ್ಲಾಡಳಿತ ಮತ್ತು ಅರಸುರಿ ಅಂಬಾಜಿ ಮಾತಾ ದೇವಸ್ಥಾನ ಟ್ರಸ್ಟ್‌ಗಳು ಜಾತ್ರೆಯನ್ನು ಆಯೋಜಿಸಲು ಸಿದ್ಧತೆಯಲ್ಲಿ ತೊಡಗಿವೆ.

ಅಪಘಾತದ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಮೊದಲು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡವರನ್ನು ಗುರುತಿಸಲಾಗುತ್ತಿದ್ದು, ವಿಷಯ ತಿಳಿಸಲು ಅವರ ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.

ಪಾದಚಾರಿಗಳಿಗೆ ಡಿಕ್ಕಿ ಹೊಡೆದು 6 ಜನರನ್ನು ಬಲಿ ಪಡೆದಿರುವ ಕಾರು ತೀವ್ರವಾಗಿ ಜಖಂಗೊಂಡಿರುವುದು. ಚಿತ್ರಗಳಲ್ಲಿನ ಕಾರಿನ ಸ್ಥಿತಿ ನೋಡಿದರೆ ಕಾರು ಎಷ್ಟು ವೇಗವಾಗಿ ಬರುತ್ತಿತ್ತು ಎಂದು ಊಹಿಸಬಹುದು.

ಅರಾವಳಿಯಲ್ಲಿ ನಡೆದ ಅಪಘಾತದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು. ಬಳಿಕ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದಾರೆ. ಜನರನ್ನು ಘಟನಾ ಸ್ಥಳದಿಂದ ದೂರ ಕಳುಹಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

English summary
Aravalli Road accident; 6 pilgrims dead and 7 seriously injured in Gujarat's Aravalli district. Injured shifted to hospital. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X