ತೌಕ್ತೆ ಚಂಡಮಾರುತ ದುರಂತ: ನಾಪತ್ತೆಯಾಗಿದ್ದ ತಗ್‌ಬೋಟ್‌ನ 7 ಸಿಬ್ಬಂದಿಯ ಶವ ಪತ್ತೆ
ಅಹಮದಾಬಾದ್, ಮೇ 23: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ತಗ್‌ಬೋಟ್‌ನ ಕ್ಯಾಪ್ಟನ್ ನಾಗೇಂದ್ರ ಕುಮಾರ್ ಸಹಿತ ಏಳು ಜನರ ಮೃತದೇಹ ಪತ್ತೆಯಾಗಿದೆ. ಗುಜರಾತ್‌ನ ವಲ್ಸದ್ ಪ್ರದೇಶದಲ್ಲಿ ಈ ಮೃತದೇಹಗಳು ಭಾನುವಾರ ದೊರೆತಿದೆ. ವರಪ್ರದಾ ಹೆಸರಿನ ತಗ್‌ಬೋಟ್‌ನಲ್ಲಿದ್ದ 11 ಮಂದಿ ಚಂಡಮಾರುತದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದರು.
ತೌಕ್ತೆ ಚಂಡಮಾರುತಕ್ಕೆ ಸಿಲುಕಿ P305 ಬಾರ್ಜ್ ಮುಳುಗಡೆಯಾಗಿತ್ತು. ಈ ಬೃಹತ್ ಬಾರ್ಜ್‌ಅನ್ನು ಎಳೆಯುತ್ತಿದ್ದ ವರಪ್ರದಾ ತಗ್‌ಬೋಟ್‌ನಲ್ಲಿದ್ದ 11 ಜನರು ಕೂಡ ಮುಂಬೈನ ಕರಾವಳಿ ಭಾಗದಿಂದ ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇದರಲ್ಲಿ ಏಳು ಮಂದಿ ಈಗ ಶವವಾಗಿ ಪತ್ತೆಯಾಗಿದ್ದಾರೆ.
ಮುಂಬೈ ಪೊಲೀಸರ ಜೊತೆಗೆ ವಲ್ಸದ್ ಪೊಲೀಸರು ಸಂಪರ್ಕದಲ್ಲಿದ್ದಾರೆ. ಶನಿವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದರೆ ಭಾನುವಾರ ಮೂರು ಮೃತದೇಹಗಳು ದೊರೆತಿವೆ. ಇನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ವಿವಿಧ ಭಾಗದಲ್ಲಿ 8 ಅಪರಿಚಿತ ಮೃತದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಕಳೆದ ಸೋಮವಾರ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿದ್ದ ಪಿ 305 ಬಾರ್ಜ್ ಇರುವ ಸ್ಥಳವನ್ನು ಶನಿವಾರ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರರು ಈ ಮೊದಲು ಮಾಹಿತಿಯನ್ನು ನೀಡಿದ್ದಾರೆ.
ಬಾರ್ಜ್ ಮುಳುಗಡೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 66ಕ್ಕೆ ಏರಿಕೆಯಾಗಿದ್ದು 9 ಮಂದಿಯ ಸುಳಿವು ಇನ್ನೂ ದೊರೆತಿಲ್ಲ. ಘಟನೆ ನಡೆದ ಸಂದರ್ಭದಲ್ಲಿ 261 ಜನರು ಬಾರ್ಜ್‌ನಲ್ಲಿದ್ದರು ಎಂದು ನೌಕಾಪಡೆ ಮಾಹಿತಿ ನೀಡಿದೆ. ಇದರಲ್ಲಿ 186 ಜನರನ್ನು ರಕ್ಷಣೆ ಮಾಡಲಾಗಿದೆ. ಬಾರ್ಜ್ P305ನಲ್ಲಿ ನಾಪತ್ತೆಯಾಗಿದ್ದ 9 ಜನರ ಜೊತೆಗೆ ವರಪ್ರದಾ ತಗ್ ಬೋಟ್‌ನಲ್ಲಿದ್ದ 11 ಜನರಿಗಾಗಿ ನೌಕಾಪಡೆ ಹಾಗೂ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಹುಡುಕಾಟವನ್ನು ನಡೆಸುತ್ತಿದ್ದರು. ವರಪ್ರದಾ ತಗ್‌ಬೋಟ್‌ನಲ್ಲಿ 13 ಜನರಿದ್ದು ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
-
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ












Click it and Unblock the Notifications