ಎಎಪಿ V/s ಬಿಜೆಪಿ: ಭಯದಲ್ಲಿ ಗುಜರಾತ್ ರಾಜ್ಯಾಧ್ಯಕ್ಷರನ್ನೇ ತೆಗೆದು ಹಾಕುತ್ತಾ ಕೇಸರಿ ಪಡೆ?

ಅಹ್ಮದಾಬಾದ್, ಆಗಸ್ಟ್ 23: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಸ್ತಿತ್ವದಿಂದ ಶೇಕ್ ಆಗಿರುವ ಬಿಜೆಪಿಯು ಗುಜರಾತಿನಲ್ಲಿರುವ ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಅನ್ನು ಶೀಘ್ರದಲ್ಲೇ ತೆಗೆದುಹಾಕಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

ಗುಜರಾತಿನಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಪೂರ್ವದಲ್ಲೇ ಆಪ್ ಪರ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ತೆರಳಿದ್ದರು. ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರ ಪಟ್ಟಣದಲ್ಲಿ ಟೌನ್‌ಹಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ಗುಜರಾತ್ ಬದಲಾವಣೆಗಾಗಿ ಹಂಬಲಿಸುತ್ತಿದೆ ಮತ್ತು ಎಎಪಿಗೆ ಜನರಿಂದ ಅಪಾರ ಬೆಂಬಲ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

ಗುಜರಾತಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ತುಂಬಾ ಹೆದರುತ್ತಿದೆ. ಒಂದು ಮೂಲಗಳ ಪ್ರಕಾರ, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. "ಬಿಜೆಪಿಗೆ ಇಷ್ಟು ಹೆದರಿದೆಯಾ?" ಎಂದು ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಧರ್ಮಯುದ್ಧ

ವಿಧಾನಸಭಾ ಚುನಾವಣೆಯಲ್ಲಿ ಧರ್ಮಯುದ್ಧ

"ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಅರವಿಂದ್ ಕೇಜ್ರಿವಾಲ್ ಮಹಾಭಾರತದ ಧರ್ಮಯುದ್ಧಕ್ಕೆ ಹೋಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಕಡೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಸೇನೆಗಳಿವೆ. ಆದರೆ ಆಮ್ ಆದ್ಮಿ ಪಕ್ಷಕ್ಕೆ ಶ್ರೀಕೃಷ್ಣನ ಬೆಂಬಲವಿದೆ," ಎಂದು ಅರವಿಂದ್ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.

ಬಿಜೆಪಿ ಮತ್ತು ಆಪ್ ನಡುವೆ ಕೌರವರು ಮತ್ತು ಪಾಂಡವರ ರೀತಿ ಕದನ

ಬಿಜೆಪಿ ಮತ್ತು ಆಪ್ ನಡುವೆ ಕೌರವರು ಮತ್ತು ಪಾಂಡವರ ರೀತಿ ಕದನ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯವರು ಕೌರವರ ಬಣವಾದರೆ, ಆಮ್ ಆದ್ಮಿ ಪಕ್ಷವು ಪಾಂಡವರ ಬಣ ಎನ್ನುವಂತೆ ಪ್ರಚುರಪಡಿಸಲಾಗುತ್ತಿದೆ. ಎಎಪಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅದೇ ರೀತಿ ಬಿಂಬಿಸುವುದಕ್ಕೆ ಹೊರಟಿದ್ದು, ಬಿಜೆಪಿಯನ್ನು ಮಹಾಭಾರತದ ಪರಾಜಿತ ಖಳನಾಯಕರಾದ ಕೌರವರಿಗೆ ಮತ್ತು ಅವರ ಪಕ್ಷವನ್ನು ಹಿಂದೂ ಮಹಾಕಾವ್ಯದಲ್ಲಿ ವಿಜಯಶಾಲಿಗಳಾದ ರಾರಾಜಿಸಿದ ಪಾಂಡವರಂತೆ ಹೋಲಿಸಿದ್ದಾರೆ.

ಸಿಸೋಡಿಯಾ ಮನೆ ಮೇಲಿನ ದಾಳಿಗೆ ಕಾರಣ ಕೊಟ್ಟ ಕೇಜ್ರಿವಾಲ್

ಸಿಸೋಡಿಯಾ ಮನೆ ಮೇಲಿನ ದಾಳಿಗೆ ಕಾರಣ ಕೊಟ್ಟ ಕೇಜ್ರಿವಾಲ್

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಲು ಇದೇ ಕಾರಣ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಿಸೋಡಿಯಾ ಮನೆ ಮತ್ತು ದೇಶದ ಇತರ 30 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.

ದೆಹಲಿ ಎಲ್‌ಜಿವಿಕೆ ಸಕ್ಸೇನಾ ಅವರು ಈ ಪ್ರಕರಣದಲ್ಲಿ ತನಿಖೆಗೆ ಶಿಫಾರಸು ಮಾಡಿದ ನಂತರ ಕೇಂದ್ರ ಸಾಬೀತು ಸಂಸ್ಥೆ ಮೂಲ ಆಧಾರಿತ ಎಫ್‌ಐಆರ್ ಅನ್ನು ದಾಖಲಿಸಿದೆ. ಡಿಸಿಎಂ ಸಿಸೋಡಿಯಾ ಮತ್ತು ಇತರರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದೆ.

ಮನೀಶ್ ಸಿಸೋಡಿಯಾ ನೀಡಿರುವ ಉತ್ತರವೇನು?

ಮನೀಶ್ ಸಿಸೋಡಿಯಾ ನೀಡಿರುವ ಉತ್ತರವೇನು?

ಆಮ್ ಆದ್ಮಿ ಪಕ್ಷ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ಪಡೆಯುತ್ತಿರುವ ಜನ ಬೆಂಬಲವು ಬಿಜೆಪಿಯ ಕಣ್ಣು ಕುಕ್ಕುತ್ತಿದೆ. ಜನರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವನ್ನು ನೀಡುತ್ತಿದ್ದಂತೆ ಬಿಜೆಪಿ ಉಲ್ಟಾ ಹೊಡೆಯುತ್ತಿದೆ. ಕೇಂದ್ರ ಸರ್ಕಾರವು ನನ್ನ ಕುತ್ತಿಗೆ ಹಿಡಿದು ಬೆದರಿಸುವ ಉತ್ಸಾಹದಲ್ಲಿದೆ. ಆದರೆ ನನ್ನ ಬಗ್ಗೆ ಚಿಂತಿಸಬೇಡಿ, ನಾನು ಪ್ರಾಮಾಣಿಕತೆಯ ಕುತ್ತಿಗೆಯನ್ನು ಹೊಂದಿದ್ದು, ಯಾವುದೇ ಆತಂಕವಿಲ್ಲ," ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದರು. ದೆಹಲಿ ಸರ್ಕಾರದ ಮದ್ಯ ನೀತಿಯ ಬಗ್ಗೆ ಕೇಂದ್ರೀಯ ತನಿಖಾ ದಳ ದಾಖಲಿಸಿರುವ ಪ್ರಕರಣದಲ್ಲಿ ಸಿಸೋಡಿಯಾ ಹೆಸರನ್ನು ಸೇರಿಸಲಾಗಿದೆ. ಕಳೆದ ವಾರ ಏಳು ರಾಜ್ಯಗಳಾದ್ಯಂತ ಇರುವ ಇತರ 31 ಸ್ಥಳಗಳ ಜೊತೆಗೆ ಅವರ ದೆಹಲಿ ಮನೆಯ ಮೇಲೆ ದಾಳಿ ನಡೆಸಿತ್ತು.

"ಭಾರತದ ಮಟ್ಟಿಗೆ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಪದವಿ ಪಡೆದುಕೊಂಡ ವಿದ್ಯಾವಂತರಿಗೂ ಉದ್ಯೋಗ ಸಿಗುತ್ತಿಲ್ಲ. ಗುಜರಾತ್ ಪಾಲಿಗೆ ಉದ್ಯೋಗ ಅತಿದೊಡ್ಡ ಅಗತ್ಯವಾಗಿದೆ. ಇಲ್ಲಿ ಉದ್ಯೋಗಗಳು ಸಾಕಷ್ಟಿವೆ, ಆದರೂ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ," ಎಂದು ಮನೀಶ್ ಸಿಸೋಡಿಯಾ ದೂಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+