ಊಟಕ್ಕೆ ಕರೆದ ಆಟೋ ಚಾಲಕ, ತಕ್ಷಣ ಒಪ್ಪಿಕೊಂಡ ಅರವಿಂದ್ ಕೇಜ್ರಿವಾಲ್; ವಿಡಿಯೋ ನೋಡಿ

ಅಹಮದಾಬಾದ್, ಸೆ.12: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೋಮವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅರವಿಂದ್ ಕೇಜ್ರಿವಾಲ್ ಪದೇ ಪದೇ ಗುಜರಾತ್‌ಗೆ ಭೇಟಿ ನೀಡುತ್ತಿದ್ದು, ಗುಜರಾತ್‌ ಮೇಲೆ ಕಣ್ಣಿಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ತಮ್ಮ ಪಕ್ಷಕ್ಕೆ ಸಹಾಯ ಮಾಡಿದ ರೀತಿಯಲ್ಲಿಯೇ ತಮ್ಮ ಪ್ರಯಾಣಿಕರಲ್ಲಿ ಪಕ್ಷದ ಬಗ್ಗೆ ಪ್ರಚಾರ ಮಾಡುವ ಮೂಲಕ ಗುಜರಾತ್‌ನಲ್ಲಿ ಎಎಪಿ ಗೆಲ್ಲಲು ಸಹಾಯ ಮಾಡುವಂತೆ ಆಟೋರಿಕ್ಷಾ ಚಾಲಕರಿಗೆ ಒತ್ತಾಯಿಸಿದರು.

ಕೇಜ್ರಿವಾಲ್ ಅವರ ಭಾಷಣದ ನಂತರ, ಸಭಿಕರಲ್ಲಿ ಒಬ್ಬ ಆಟೋ ಡ್ರೈವರ್ ಅವರನ್ನು ಅವರ ಮನೆಯಲ್ಲಿ ಊಟ ಮಾಡುವಂತೆ ವಿನಂತಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ತಕ್ಷಣವೇ ಆಹ್ವಾನವನ್ನು ಸ್ವೀಕರಿಸಿದರು.

Auto Driver Invited To Arvind Kejriwal To Have Dinner At His Home

ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಆಟೋ ಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸುತ್ತಿರುವುದನ್ನು ಕಾಣಬಹುದು.

"ನಾನು ನಿಮ್ಮ ದೊಡ್ಡ ಅಭಿಮಾನಿ. ಪಂಜಾಬ್‌ನ ಆಟೋ ಡ್ರೈವರ್‌ನ ಮನೆಯಲ್ಲಿ ನೀವು ರಾತ್ರಿ ಊಟ ಮಾಡುತ್ತಿರುವ ವಿಡಿಯೋವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ನೀವೂ ನನ್ನ ಮನೆಗೆ ಊಟಕ್ಕೆ ಬರುತ್ತೀರಾ?" ಎಂದು ಕೇಳುತ್ತಾರೆ.

Auto Driver Invited To Arvind Kejriwal To Have Dinner At His Home

ಈ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಕೋರಿಕೆಯನನ್ನು ತಕ್ಷಣವೇ ಒಪ್ಪಿಕೊಂಡು, ಅವರ ಇಬ್ಬರು ಪಕ್ಷದ ಸಹೋದ್ಯೋಗಿಗಳೊಂದಿಗೆ ಭೋಜನಕ್ಕೆ ಬರುವುದಾಗಿ ಹೇಳಿದರು.

"ನಾವು ಎಷ್ಟು ಗಂಟೆಗೆ ಬರಬೇಕು? ನಿಮ್ಮ ಆಟೋದಲ್ಲಿ ನನ್ನನ್ನು ಕರೆದುಕೊಂಡು ಹೋಗಲು ನೀವು ಇಂದು ರಾತ್ರಿ ನನ್ನ ಹೋಟೆಲ್‌ಗೆ ಬರುತ್ತೀರಾ?" ಎಂದು ಕೇಜ್ರಿವಾಲ್ ಆಟೋ ಚಾಲಕರನ್ನು ನಗುತ್ತಾ ಕೇಳಿದರು.

ಕೇಜ್ರಿವಾಲ್ ಅವರು ಆಟೋ ಚಾಲಕರ ಮನೆಯಲ್ಲಿ ರಾತ್ರಿ 8 ಗಂಟೆಗೆ ಊಟಕ್ಕೆ ಹೋಗಲಿದ್ದಾರೆ.

ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್ ಅಹಮದಾಬಾದ್‌ನಲ್ಲಿ ನೈರ್ಮಲ್ಯ ಕಾರ್ಮಿಕರ ಜೊತೆ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಗುಜರಾತ್‌ಗೆ ಪದೇ ಪದೇ ಭೇಟಿ ನೀಡಿರುವ ಅವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಿಗೆ ಭತ್ಯೆ, ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಮತ್ತು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು "ಘೋಷಣೆ" ಗಳನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+