'ಕಾಗದದ ವಿಮಾನ ಕೂಡ ಮಾಡಲಾಗದ ಅನಿಲ್ ಅಂಬಾನಿಗೆ ರಫೇಲ್ ಡೀಲ್'

ಗಾಂಧೀನಗರ (ಗುಜರಾತ್), ಮಾರ್ಚ್ 12: ನಾನು ಗ್ಯಾರಂಟಿ, ಅನಿಲ್ ಅಂಬಾನಿಯಿಂದ ಕಾಗದದ ವಿಮಾನ ಕೂಡ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಪ್ರಧಾನಿ ಮೋದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನ ಗಾಂಧೀನಗರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಮಂಗಳವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ 'ಗೆಳೆಯ' ಅನಿಲ್ ಅಂಬಾನಿಗೆ ಮೂವತ್ತು ಸಾವಿರ ಕೋಟಿ ನೀಡಿದ್ದಾರೆ. ನರೇಂದ್ರ ಮೋದಿ ಅವರು ವಾಯು ಸೇನೆಯನ್ನು ಹೊಗಳುತ್ತಾರೆ. ಆದರೆ ಅದರ ಪಾಕೆಟ್, ಪೈಲಟ್ ನಿಂದಲೇ ಮೂವತ್ತು ಸಾವಿರ ಕೋಟಿ ಕದ್ದು, ಅನಿಲ್ ಆಂಬಾನಿಗೆ ನೀಡಿದ್ದನ್ನು ಹೇಳುವುದಿಲ್ಲ ಎಂದು ಆರೋಪಿದರು.

ಫ್ರಾನ್ಸ್ ನ ರಫೇಲ್ ತಯಾರಿಕೆ ಕಂಪನಿ ಡಸಾಲ್ಟ್ ಆಫ್ ಸೆಟ್ ಪಾರ್ಟ್ ನರ್ ಆಗಿ ಆಯ್ಕೆ ಮಾಡಿರುವ ಅನಿಲ್ ಅಂಬಾನಿ ಅವರ ಜೀವನದಲ್ಲಿ ಎಂದೂ ವಿಮಾನ ತಯಾರಿಸಿಲ್ಲ. ಅವರಿಂದ ಕಾಗದದ ವಿಮಾನ ಕೂಡ ತಯಾರಿಸಲು ಆಗಲ್ಲ ಅನ್ನೋದಿಕ್ಕೆ ನಾನು ಖಾತ್ರಿ ಎಂದು ಲೇವಡಿ ಮಾಡಿದ್ದಾರೆ.

Anil Ambani cannot even make a paper plane, congress chief Rahul Gandhis Rafale jibe

ಪ್ರಧಾನಿ ಮೋದಿ ಫ್ರಾನ್ಸ್ ಗೆ ತಮ್ಮ ನಿಯೋಗದ ಜತೆ ಹೋದರು. ಅನಿಲ್ ಅಂಬಾನಿಯೂ ಇದ್ದರು. ಆಗಿನ ಫ್ರಾನ್ಸ್ ಅಧ್ಯಕ್ಷರಿಗೆ ಅನಿಲ್ ಅಂಬಾನಿಗೆ ಗುತ್ತಿಗೆ ನೀಡುವಂತೆ ಹೇಳಿದರು ಎಂದು ರಾಹುಲ್ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+