ಮಹಿಳೆ ಮೇಲಿನ ದೌರ್ಜನ್ಯ : ಇತ್ಯರ್ಥಕ್ಕೆ 10 ತ್ವರಿತಗತಿ ಕೋರ್ಟ್

ತ್ವರಿತಗತಿಯ ನ್ಯಾಯಾಲಯ ಸ್ಥಾಪನೆಯ ಬಗ್ಗೆ ಆದೇಶ ಈಗಾಗಲೆ ಹೊರಡಿಸಲಾಗಿದ್ದು, ಶೀಘ್ರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲ ಅವರನ್ನು ಮತ್ತು ಜಿಲ್ಲಾ ನ್ಯಾಯಾಧೀಶರುಗಳನ್ನು ಭೇಟಿ ಮಾಡುವುದಾಗಿ ಅವರು ಪತ್ರಕರ್ತರಿಗೆ ತಿಳಿಸಿದರು. ಪ್ರತಿ ನ್ಯಾಯಾಲಯಕ್ಕೆ 37 ಸಿಬ್ಬಂದಿಗಳನ್ನೂ ಒದಗಿಸಲಾಗುವುದು ಎಂದು ಅವರು ಮಂಗಳವಾರ ತಿಳಿಸಿದರು.
ಬೆಂಗಳೂರಿನಲ್ಲಿ 3 ತ್ವರಿತಗತಿ ನ್ಯಾಯಾಲಯಗಳು ಬರಲಿದ್ದು, ಬೆಳಗಾವಿ, ದಕ್ಷಿಣ ಕನ್ನಡ, ಗುಲಬರ್ಗ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರಗಳಲ್ಲಿ ತಲಾ ಒಂದು ತ್ವರಿತಗತಿ ನ್ಯಾಯಾಲಯ ಸ್ಥಾಪನೆಯಾಗಲಿದೆ ಎಂದು ಜಯಚಂದ್ರ ಹೇಳಿದರು.
ಉಳಿದ ಜಿಲ್ಲೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣ ಕಡಿಮೆ ಇವೆ ಎಂದ ಅವರು, ಈ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಮಾಡಿ ಮಹಿಳೆಯರಲ್ಲಿ ನ್ಯಾಯಾಲಯಗಳ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುವುದೇ ಇದರ ಹಿಂದಿನ ಮೂಲ ಉದ್ದೇಶ ಎಂದು ಅವರು ನುಡಿದರು.
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು 9 ತಿಂಗಳಲ್ಲಿ ಸಾಕೇತ್ ತ್ವರಿತಗತಿ ನ್ಯಾಯಾಲಯ ಇತ್ಯರ್ಥಪಡಿಸಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದಿರುವ ಹಲವಾರು ಪ್ರಕರಣಗಳು ವರ್ಷಗಟ್ಟಲೆ ಧೂಳು ತಿನ್ನುತ್ತ ನ್ಯಾಯಾಲಯದಲ್ಲಿ ಬಿದ್ದಿವೆ.












Click it and Unblock the Notifications