ಬೆಂಗಳೂರು : ಆತ್ಮಹತ್ಯೆಗೆ ಶರಣಾದ ಬಿಲ್ಡರ್

ಕದಿರೇನಹಳ್ಳಿ ಸಮೀಪದ ಈಶ್ವರನಗರದ ನಿವಾಸಿಯಾಗಿದ್ದ ರಾಮಮೂರ್ತಿ (47) ನೇಣಿಗೆ ಶರಣದವರು ಎಂದು ಗುರುತಿಸಲಾಗಿದೆ. ಬಿಲ್ಡರ್ ಮತ್ತು ಉದ್ಯಮಿಯಾಗಿದ್ದ ಇವರು ಮಾಲೂರಿನಲ್ಲಿ ಕಾರ್ಖನೆ ಹೊಂದಿದ್ದರು.
ಕೆಳೆದ ಕೆಲವು ದಿನಗಳಿಂದ ಇವರಿಗೆ ಉದ್ಯಮದಲ್ಲಿ ಭಾರೀ ನಷ್ಟ ಉಂಟಾಗಿತ್ತು. ಇದರಿಂದ ಬೇಸತ್ತ ರಾಮಮೂರ್ತಿ ಸೆ.7ರಿಂದ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ.
ನಂತರ ಕುಟುಂಬದವರು ಕುಮಾರಸ್ವಾಮಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಬುಧವಾರ ಬೆಳಗ್ಗೆ ಬಸನವಗುಡಿಯ ಸಾಯಿನೂರು ಲಾಡ್ಜ್ ನಲ್ಲಿ ರಾಮಮೂರ್ತಿ ಅವರ ಶವ ಪತ್ತೆಯಾಗಿದೆ.
ಲಾಡ್ಜ್ ನಲ್ಲಿ ರೂಂ ಪಡೆದ ನಂತರ ರಾಮಮೂರ್ತಿ ಅಲ್ಲಿಂದ ಹೊರಗೆ ಬಂದಿರಲಿಲ್ಲ. ಮೊದಲ ದಿನ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರ ಹತ್ತಿರ ಊಟ ತರಿಸಿಕೊಂಡಿದ್ದರು. ನಂತರ ಅವರು ಕೋಣೆಯಿಂದ ಹೊರಗೆ ಬಂದಿದ್ದನ್ನು ಯಾರು ನೋಡಿರಲಿಲ್ಲ.
ಬುಧವಾರ ಬೆಳಗ್ಗೆ ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಲಾಡ್ಜ್ ಮಾಲೀಕರು ಬಸವನಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ, ಬಾಗಿಲು ಒಡೆದ ಒಳ ಪ್ರವೇಶಿಸಿದ ಪೊಲೀಸರು ರಾಮಮೂರ್ತಿ ಅವರ ಶವವನ್ನು ನೋಡಿದ್ದಾರೆ.
ಶವದ ಬಳಿ ಇದ್ದ ಪರ್ಸ್ ನ ಮೂಲಕ ಅವರ ವಿಳಾಸ ಪತ್ತೆ ಹಚ್ಚಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಲಾಡ್ಜ್ ನಲ್ಲಿ ದೊರಕಿರುವ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ರಾಮಮೂರ್ತಿ ಬರೆದಿದ್ದಾರೆ.
ನನ್ನ ಕುಟುಂಬದವರಿಗೆ ತೊಂದರೆ ಕೊಡಬೇಡಿ ಎಂದು ಡೆತ್ ನೋಟ್ ನಲ್ಲಿ ಸಾಲಕೊಟ್ಟ ಜನರಿಗೆ ರಾಮಮೂರ್ತಿ ಮನವಿ ಮಾಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.












Click it and Unblock the Notifications