ಜೆಪಿ ನಗರ ಒಂಟಿ ಮಹಿಳೆ ಜ್ಯೋತಿಲಕ್ಷ್ಮಿ ಹಂತಕ ಸಿಕ್ಕಿಬಿದ್ದ

ಜ್ಯೋತಿಲಕ್ಷ್ಮಿಗೆ ಪರಿಚಿತನೇ ಆಗಿದ್ದ ಬನ್ನೇರುಘಟ್ಟ ರಸ್ತೆ ದೊರೆಸ್ವಾಮಿಪಾಳ್ಯ ನಿವಾಸಿ ಅರುಣ್ (23) ಬಂಧಿತ ಆರೋಪಿ. ಕ್ಯಾಬ್ ಡ್ರೈವರ್ ಆಗಿರುವ ಆರೋಪಿ ಅರುಣನನ್ನು ಕಳೆದ ವಾರವೇ ವಶಕ್ಕೆ ತೆಗೆದುಕೊಂಡಿರುವ ಜೆಪಿ ನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹತ್ಯೆಯ ವೃತ್ತಾಂತ ತನಿಖೆಯ ಬಳಿಕ ಇನ್ನಷ್ಟೇ ಬಹಿರಂಗವಾಗಬೇಕಿದೆ.
ನಗರದ ದಕ್ಷಿಣ ಭಾಗದಲ್ಲಿರುವ ಜೆಪಿ ನಗರದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮ್ಯಾನೇಜರ್ ಜ್ಯೋತಿಲಕ್ಷ್ಮಿ ಅವರನ್ನು ಆಗಸ್ಟ್ 2 ರಂದು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಪೊಲೀಸರು ಅನುಮಾಣದ ಮೇಲೆ ಒಟ್ಟು 8 ಮಂದಿಯನ್ನು ಬಂಧಿಸಿದ್ದರು.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಅರುಣ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಈ ಹಿನ್ನೆಲೆಯಲ್ಲಿ ಮಗಳೊಂದಿಗೆ ಒಂಟಿಯಾಗಿ ವೆಂಕಟಾದ್ರಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಜ್ಯೋತಿಲಕ್ಷ್ಮಿ ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಲು ಸಂಚು ರೂಪಿಸಿದ್ದ.
ಅದರಂತೆ ಆಗಸ್ಟ್ 2ರಂದು ಜ್ಯೋತಿಲಕ್ಷೀ ಮನೆಗೆ ಬಂದಿದ್ದ ಅರುಣ್ ಸ್ವಲ್ಪ ಹೊತ್ತು ಮಾತನಾಡಿ, ಬಳಿಕ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದ. ಆ ಸಂದರ್ಭದಲ್ಲಿ ಜ್ಯೋತಿ ಹಾಗೂ ಆಕೆಯ ಪುಟ್ಟ ಮಗಳು ಜಾಗೃತಿ ಕಿರುಚಿಕೊಂಡಿದ್ದರು.
ಕಿರುಚಾಟದಿಂದ ಯಾರಾದರೂ ಮನೆಗೆ ಬಂದರೆ ಸಿಕ್ಕಿ ಬೀಳಬಹುದು ಎಂಬ ಭಯದಿಂದ ಅರುಣ್, ಬಾಲಕಿಯ ಕತ್ತು ಹಿಸುಕಿ ಗೊಡೆಗೆ ತಳ್ಳಿದ್ದ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಕಿಟಿಕಿಯಿಂದ ಎಸೆದಿದ್ದ. ಆದರೆ ಹಣ, ಚಿನ್ನಾಭರಣ ದೋಚದೆ ಪರಾರಿಯಾಗಿದ್ದ.
ಜ್ಯೋತಿ 7 ವರ್ಷಗಳ ಹಿಂದೆ ಹೇಮಚಂದ್ರ ಎಂಬುವವರನ್ನು ವಿವಾಹವಾಗಿದ್ದರು. ಆದರೆ ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಮಗಳೊಂದಿಗೆ ವಾಸಿಸುತ್ತಿದ್ದರು.












Click it and Unblock the Notifications