Ragging: ಯುವತಿ ಬಲಿ; ಸಹೋದ್ಯೋಗಿಗಳ ಸೆರೆ

19 ವರ್ಷದ ಪ್ರಣಾಲಿ ಪ್ರದೀಪ್ ರಾಣೆ ranging ಕಾಟಕ್ಕೆ ಬೇಸತ್ತು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯೋಗಿ. ಪ್ರಕರಣದ ಸಂಬಂಧ ಆಕೆಯ ನಾಲ್ವರು ಮಹಿಳಾ ಸಹೋದ್ಯೋಗಿಗಳ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಕಳೇದ ವಾರ ಬಂಧಿಸಿದ್ದಾರೆ.
ಅಂದಹಾಗೆ ಪ್ರಣಾಲಿಯನ್ನು ಕಂಪನಿಯು ಹೆಚ್ಚಿನ ತರಬೇತಿಗೆಂದು ಜರ್ಮನಿಗೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಇದರಿಂದ ಪ್ರಣಾಲಿ ಬಗ್ಗೆ ಅಸೂಯೆಗೊಂಡ ಸದರಿ ಸಹೋದ್ಯೋಗಿಗಳು ಆಕೆಯನ್ನು rangingಗೆ ಈಡುಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾತ್ಪುರದಲ್ಲಿರುವ ಪ್ರತಿಷ್ಠಿತ MNC ಕಂಪನಿಯಲ್ಲಿ ಪ್ರಣಾಲಿ ಟ್ರೈನೀ ಉದ್ಯೋಗಿಯಾಗಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮೊದಲು ಮುಂಗೈಯನ್ನು ಚಾಕುವಿನಲ್ಲಿ ಕತ್ತರಿಸಿಕೊಂಡ ಪ್ರಣಾಲಿ, ಸಾಯಲೇಬೇಕೆಂದು ನಿರ್ಧರಿಸಿ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾಳೆ.
ಪ್ಲಂಬರ್ ಕೆಲಸ ಮಾಡುವ ಪ್ರಣಾಲಿ ಅಪ್ಪ ಪ್ರದೀಪ್ ರಹಾನೆ ಮನೆಗೆ ಬಂದು ನೋಡಿದಾಗ ಮಗಳು ನೇಣಿಗೆ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಪ್ರಣಾಲಿ ಅದಾಗಲೇ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರದೀಪ್ ರಹಾನೆ ಮನೆಯನ್ನು ಶೋಧಿಸಿದಾಗ ಪ್ರಣಾಲಿ ಬರೆದಿಟ್ಟಿದ್ದ ಡೆತ್ ನೋಟ್ ದೊರೆತಿದ್ದು, ಅದರಲ್ಲಿ ಆಕೆ ranging ಪೈಶಾಚಿಕತೆಯನ್ನು ಎಳೆ ಎಳೆಯಾಗಿ ಬರೆದಿಟ್ಟಿರುವುದು ಕಂಡುಬಂದಿದೆ. ಡೆತ್ ನೋಟ್ ಸುಳಿವನ್ನಾಧರಿಸಿ ಪೊಲೀಸರು Maharashtra Ragging Act section 4 ಮತ್ತು IPC ಸೆಕ್ಷನ್ನುಗಳಡಿ 10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲ ಹದಿಹರೆಯದವರು.












Click it and Unblock the Notifications