ಅಸಾರಾಂ ರೇಪ್ ಖಂಡಿಸಿ ಮರ್ಮಾಂಗ ಕತ್ತರಿಸಿಕೊಂಡ ಸಾಧು
ಅಮೇಠಿ,
ಸೆ. 5: ಅತ್ತ ಪಾಕಿಸ್ತಾನದಿಂದ ಓಡಿಬಂದು ಟಾಂಗಾ ಓಡಿಸಿಕೊಂಡಿದ್ದ ಅಸಾರಾಂ ಬಾಪು ಮುಂದೆ ಅಧ್ಯಾತ್ಮ ಗುರುವಾಗಿ ಪ್ರಭಾವಳಿ ಸೃಷ್ಟಿಸಿಕೊಂಡು ಇದೀಗ ಜೈಲಿನಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಿದ್ದರೆ ಅತ್ತ ಉತ್ತರಪ್ರದೇಶದಲ್ಲಿ 60 ವರ್ಷ ವಯೋವೃದ್ಧರೊಬ್ಬರು ಅಸಾರಾಮನ ಕೃತ್ಯವನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ತಮ್ಮ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾರೆ! id="toptextpromo">ಸ್ವಯಂಘೋಚಿತ
ದೇವಮಾನವ ಅಸಾರಾಂ ಬಾಪು ವಿರುದ್ಧ ಬಾಲಕಿಯೊಬ್ಬಳು ರೇಪ್ ಕೇಸ್ ಹಾಕಿರುವುದನ್ನು ಅರಿತ ಬಾಬಾ ಪ್ರೇಮದಾಸ ಎಂಬ ಸದರಿ ಹಿಂದೂ ಸಂತ ಅಸಾರಾಮನ ಕುಕೃತ್ಯ ಅಕ್ಷಮ್ಯ. ಇದನ್ನು ನಾನು ತೀವ್ರವಾಗಿ ಖಂಡಿಸಿ/ ಪ್ರತಿಭಟಿಸುತ್ತೇನೆ ಎಂದು ಆವೇಶದಿಂದ ಕೂಗಾಡುತ್ತಾ ಆ ವೃದ್ಧ ಮಹಾಶಯ ತನ್ನ ಮರ್ಮಾಂಗಕ್ಕೆ ಕತ್ತರಿ ಇರುಕಿಸಿಯೇ ಬಿಟ್ಟರು. id='are-slot-1' class='oiad oi-axt oiadv'> id='top-searched-articles'>ಅಮೇಠಿ
ಜಿಲ್ಲೆಯ ಮಾಧೋಪುರ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ತೀವ್ರ ರಕ್ತಸ್ರಾವಕ್ಕೀಡಾದ ಬಾಬಾ ಪ್ರೇಮದಾಸ ಅವರನ್ನು ತಕ್ಷಣ ಅಮೇಠಿ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು/ಪೊಲೀಸರು ಹೇಳಿದ್ದಾರೆ.











Click it and Unblock the Notifications