ಚಿತ್ರಗಳಲ್ಲಿ: ರೇಸಿಂಗ್ ಕಾರ್ ಜತೆ ಮಾಸ್ಟರ್ ಬ್ಲಾಸ್ಟರ್
ಬೆಂಗಳೂರು, ಸೆ.4: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತ ಹೊಂದಬೇಕೇ? ಬೇಡವೇ? ಎಂಬ ಚರ್ಚೆ ನಡೆಯುತ್ತಿದೆ. ಮುಂಬೈನಲ್ಲೇ 200ನೇ ಟೆಸ್ಟ್ ಆಡುವುದು ಖಚಿತವಾಗಿದೆ.
ಸದ್ಯಕ್ಕಂತೂ ಸಚಿನ್ ತಮ್ಮ ಇನ್ನಿತರ ಅಭಿರುಚಿಗಳತ್ತ ಕಣ್ಣು ಹಾಯಿಸಿದ್ದಾರೆ. ಇತ್ತೀಚೆಗೆ ನಡೆದ ಇಂಡಿಯನ್ ಬಾಡ್ಮಿಂಟನ್ ಲೀಗ್ ಟೂರ್ನಿಯ ಪಂದ್ಯಾವಳಿಯನ್ನು ವೀಕ್ಷಿಸಿದ್ದಲ್ಲದೆ ಮುಂಬೈ ತಂಡವನ್ನು ಹುರಿದುಂಬಿಸಿದರು. ಈಗ BMW 1 ಸರಣಿಯ ರೇಸ್ ಕಾರು ಉದ್ಘಾಟನೆ ಮಾಡಿದ್ದಾರೆ. FIA GT 1 ವಿಶ್ವ ಚಾಂಪಿಯನ್ ರೇಸ್ ಡ್ರೈವರ್ ಅರ್ಮಾನ್ ಇಬ್ರಾಹಿಂ ಜತೆ ಸಚಿನ್ ಪೋಸ್ ನೀಡಿದ್ದಾರೆ.
ಮಿಕ್ಕಂತೆ ಟೆನಿಸ್ ನಲ್ಲಿ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಗೆ ಕೆಟ್ಟ ದಿನಗಳು ನಡೆಯುತ್ತಿದೆ. ಯುಎಸ್ ಓಪನ್ ಟೆನಿಸ್ ನಿಂದ ಬೇಗನೆ ನಿರ್ಗಮಿಸಿದ್ದಾರೆ. ಯುರೋಪಿನ ಗ್ರಂಥಾಲಯ ಉದ್ಘಾಟಿಸಿದ ಮಲಾಲ,ಅಹಮದಾಬಾದಿನಲ್ಲಿ ಎತ್ತಿನ ರೇಸ್, ನವಿ ಮುಂಬೈನಲ್ಲಿ ಬೆಡಗಿ, ಕೋಲ್ಕತ್ತಾ ಜಿಬ್ರಾ, ಸಿರಿಯಾದಲ್ಲಿ ಗೊಂದಲ ಹಾಗೂ ಹೈದರಾಬಾದಿನಲ್ಲಿ ಪ್ರತಿಭಟನೆ ಬಿಸಿ ಚಿತ್ರಗಳು ಇಲ್ಲಿವೆ....

ರೇಸಿಂಗ್ ಕಾರ್ ಜತೆ ಮಾಸ್ಟರ್
ಈಗ BMW 1 ಸರಣಿಯ ರೇಸ್ ಕಾರು ಉದ್ಘಾಟನೆ ಮಾಡಿದ ಸಚಿನ್ ತೆಂಡೂಲ್ಕರ್

BMW 1 ಸರಣಿಯ ರೇಸ್ ಕಾರು
FIA GT 1 ವಿಶ್ವ ಚಾಂಪಿಯನ್ ರೇಸ್ ಡ್ರೈವರ್ ಅರ್ಮಾನ್ ಇಬ್ರಾಹಿಂ ಜತೆ ಸಚಿನ್ ಪೋಸ್

ಧರ್ಮಶಾಲದಲ್ಲಿ
ಟಿಬೇಟಿನ ಧರ್ಮಗುರು ದಲೈಲಾಮ ಅವರು ಪ್ರವಚನದ ಮಧ್ಯೆ ಟೀ ಸೇವಿಸುತ್ತಿದ್ದಾರೆ. Tshuglakhang ದೇಗುಲ, ಮೆಕ್ ಲಿಯೊಗಂಜ್, ಧರ್ಮಶಾಲದಲ್ಲಿ ದಲೈಲಾಮ ನೆಲೆಸಿದ್ದಾರೆ.

ಅವನತಿಯ ಹಾದಿಯಲ್ಲಿ
ಯುಎಸ್ ಓಪನ್ ಟೆನಿಸ್ ಟೂರ್ನಿಯ 2013ರಲ್ಲಿ ಸ್ಪೇನಿನ ಟಾಮಿ ರೊಬ್ರೆಡೋ ವಿರುದ್ಧ ಸೋತ ನಿರ್ಗಮಿಸಿದ ವಿಶ್ವದ ಮಾಜಿ ನಂ.1 ಆಟಗಾರ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್

ಗ್ರಂಥಾಲಯ ಉದ್ಘಾಟಿಸಿದ ಮಲಾಲ
ಬಿರ್ಮಿಂಗ್ ಹ್ಯಾಂ: ಮಲಾಲ ಯೂಸಫಾಜೈ ಇಂಗ್ಲೆಂಡಿನಲ್ಲಿ ಯುರೋಪಿನ ಅತಿದೊಡ್ಡ ಗ್ರಂಥಾಲಯವನ್ನು ಉದ್ಘಾಟಿಸಿದರು. 10 ಲಕ್ಷಕ್ಕೂ ಅಧಿಕ ಪುಸ್ತಕ ಹೊಂದಿರುವ ಈ ಲೈಬ್ರರಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಇರುವ 188 ಮಿಲಿಯನ್ ಪೌಂಡ್ ಲ್ರೈಬರಿಯಾಗಿ ಗುರುತಿಸಿಕೊಳ್ಳಲಿದೆ.

ಇತ್ತೀಚಿನ ಸುದ್ದಿಗಳು
ಹೈದರಾಬಾದ್: ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಈರುಳ್ಳಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದು ಹೀಗೆ

ಕೋಲ್ಕತ್ತಾದಲ್ಲಿ
ಕೋಲ್ಕತ್ತಾದ ಅಲಿಪೋರ್ ಪ್ರಾಣಿಸಂಗ್ರಹಾಲಯದಲ್ಲಿ ನವಜಾತ ಶಿಶುವಿನೊಂದಿಗೆ ಹೇಸರುಗತ್ತೆ PTI Photo by Ashok Bhaumik

ನವಿ ಮುಂಬೈನಲ್ಲಿ
ರೂಪದರ್ಶಿ, ನಟಿ ಕೈನಾತ್ ಅರೋರಾ ಬಾತುಕೋಳಿಗಳ್ ಜತೆಗೆ

ಅಹಮದಾಬಾದಿನಲ್ಲಿ
ಗ್ರಾಮಸ್ಥರು ಎತ್ತಿನ ಗಾಡಿ ರೇಸ್ ನಲ್ಲಿ ತಾರ್ನೆತಾರ್ ಮೇಳದಲ್ಲಿ ಕಂಡು ಬಂದಿದ್ದು ಹೀಗೆ

ಅನಂತಪುರದಲ್ಲಿ
ಆಂಧ್ರ ವಿಭಜನೆ ವಿರುದ್ಧ ಸಾರ್ವಜನಿಕರ ಬೃಹತ್ ಮೆರವಣಿಗೆ

ವಂಝಾರ
ಗುಜರಾತ್ : ಐಎಎಸ್ ಅಧಿಕಾರಿ ವಂಝಾರ ಅವರ ರಾಜೀನಾಮೆಯನ್ನು ನರೇಂದ್ರ ಮೋದಿ ಸರ್ಕಾರ ತಿರಸ್ಕರಿಸಿದೆ.












Click it and Unblock the Notifications