ಮಡಿಕೇರಿ ಪ್ರೇಮ: ಪ್ರಿಯಕರ ದೇವಿಪ್ರಸಾದ್ ದೊಡ್ಡ ಫ್ರಾಡ್

facebook-love-madikeri-bf-devi-prasad-fraud-gf-ramya-told-tv9
ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರು ಸಿದ್ದಾಪುರ ಪೊಲೀಸರ ಅಟ್ಟಹಾಸ, ಮಡಿಕೇರಿಯ ವಯೋವೃದ್ಧ ಸೋಮಶೇಖರ್ ಸಾವು, ಪ್ರಿಯಕರ ದೇವಿಪ್ರಸಾದ್ ಅರೆಸ್ಟ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಈ ಮಧ್ಯೆ, ಇಂದು ಬೆಳಗ್ಗೆ ಮೃತಪಟ್ಟ ಸೋಮಶೇಖರ್ ಅವರ ಅಂತ್ಯಕ್ರಿಯೆಗಾಗಿ ಅವರ ಪುತ್ರ ದೇವಿಪ್ರಸಾದನನ್ನು ಬೆಂಗಳೂರು ಪೊಲೀಸರು ಇನ್ನೂ ಹೊರಗೆ ಬಿಟ್ಟಿಲ್ಲ. ಪ್ರಸ್ತುತ ದೇವಿಪ್ರಸಾದ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ದೇವಿಪ್ರಸಾದ್ ಪ್ರಿಯತಮೆ (ಹೆಂಡತಿ) ಬೆಂಗಳೂರಿನ ಯುವತಿ ರಮ್ಯಾ ತನ್ನ ಪ್ರೇಮ ಪ್ರಕರಣದ ಬಗ್ಗೆ, ದೇವಿಪ್ರಸಾದ್ ಬಗ್ಗೆ ಇದೀಗ ಟಿವಿ9 ನ್ಯೂಸ್ ಚಾನೆಲ್ಲಿಗೆ ನೇರ ಸಂದರ್ಶನ ನೀಡುತ್ತಿದ್ದು ಅದರಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

'ದೇವಿಪ್ರಸಾದ್ ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ. ಅವನೊಬ್ಬ ದೊಡ್ಡ ಫ್ರಾಡ್. ಕೊಲೆಗಡುಕ. ಜಾರ್ಖಂಡ್ ನಲ್ಲಿ ಹತ್ಯೆ ಮಾಡಿ ಬಂದಿದ್ದಾನೆ. ಅವನೊಬ್ಬ ಟ್ಯಾಕ್ಸಿ ಚಾಲಕ. ನಾನು (ರಮ್ಯಾ) ಎಂದಿಗೂ ಮಡಿಕೇರಿಗೆ ಹೋಗಿಲ್ಲ' ಹೀಗೆ ಸಾಗಿದೆ ರಮ್ಯಾ ಅವರ ವಾದ.

ಆದರೆ ದೇವಿಪ್ರಸಾದ್ ಅವರ ಗೆಳೆಯ ಮುರಳಿ ಅವರು ರಮ್ಯಾ ಅವರ ಅಷ್ಟೂ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಒಟ್ಟಿನಲ್ಲಿ ಇಡೀ ಪ್ರಕರಣ ಗೋಜಲು ಗೋಜಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+