ಮಲ್ಲೇಶ್ವರಂ ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ

ಮಲ್ಲೇಶ್ವರಂ ಸಂಪಿಗೆ ರಸ್ತೆಯ 9 ಮತ್ತು 10ನೇ ಕ್ರಾಸ್ ನಡುವೆ ಇರುವ ಸಂಪಿಗೆ ಜ್ಯುವೆಲ್ಲರ್ಸ್ ಅಂಗಡಿಯ ಹಿಂಭಾಗದ ಗೋಡೆ ಕೊರೆದು ನುಗ್ಗಿರುವ ಕಳ್ಳರು, 35 ಕೆ.ಜಿ.ಬೆಳ್ಳಿ, 150 ಗ್ರಾಂ ಚಿನ್ನ ಮತ್ತು 25 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಅಂಗಡಿ ಮಾಲೀಕ ಸುರೇಶ್ ಸೆ.1ರಂದು ಪ್ರವಾಸ ಹೋಗಿದ್ದರು. ಮಂಗಳವಾರ ಬೆಳಗ್ಗೆ ಅವರು ಅಂಗಡಿಗೆ ಆಗಮಿಸಿ ನೋಡಿದಾಗ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಖಾಲಿ ನಿವೇಶನ ನೆರವಾಯ್ತು : ಸಂಪಿಗೆ ಜ್ಯುವೆಲ್ಲರ್ಸ್ ಅಂಗಡಿಯ ಹಿಂಭಾಗದಲ್ಲಿ ಖಾಲಿ ನಿವೇಶನವಿದೆ. ಈ ನಿವೇಶನದ ಮೂಲಕ ಸುರಂಗ ತೋಡಿರುವ ಕಳ್ಳರು ಅಂಗಡಿ ಪ್ರವೇಶಿಸಿದ್ದಾರೆ. ಒಬ್ಬರು ಅಂಗಡಿ ಪವೇಶಿಸುವಷ್ಟು ಜಾಗ ಮಾಡಿಕೊಂಡು ಆಭರಣ ಕದ್ದು ಪರಾರಿಯಾಗಿದ್ದಾರೆ.
ಸಿಸಿಟಿವಿ ಇರಲಿಲ್ಲ : ಜ್ಯುವೆಲ್ಲರ್ಸ್ ಅಂಗಡಿಗೆ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ಆದೇಶ ನೀಡಿದ್ದರು. ಆದರೆ, ಅಂಗಡಿ ಮಾಲೀಕ ಸುರೇಶ್, ಅಂಗಡಿಯ ದುರಸ್ತಿ ಕೆಲಸಗಳಿವೆ ದೀಪಾವಳಿ ನಂತರ ಸಿಸಿಟಿವಿ ಆಳವಡಿಸುವುದಾಗಿ ಹೇಳಿದ್ದರು.
ಪರಿಚಿತರ ಕೃತ್ಯ ಶಂಕೆ : ಅಂಗಡಿ ಮಾಲೀಕ ಸುರೇಶ್ ಪ್ರವಾಸ ಹೋಗಿದ್ದರು. ಅಂಗಡಿಯಲ್ಲಿ ಸಿಸಿಟಿವಿ ಇರಲಿಲ್ಲ ಇದನ್ನು ಗಮನಿಸಿದ ಪರಿಚಿತರೇ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications