ಮೇಲುಕೋಟೆ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ

ಮಂಡ್ಯ, ಸೆ.2 : ಮಂಡ್ಯ ಜಿಲ್ಲೆ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೇವಾಲಯದ ಆಡಳಿತಾಧಿಕಾರಿಯಾಗಿ ವಾಣಿ ಅವರನ್ನು ನೇಮಿಸಲಾಗಿದೆ.

ಸೋಮವಾರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ವಜ್ರಾಂಗಿ ಆಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಾಲಯದ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಿರುವುದಾಗಿ ತಿಳಿಸಿದೆ.

melukote

ಪಾಂಡವಪುರ ಉಪ ವಿಭಾಗಾಧಿಕಾರಿ ವಾಣಿ ಅವರನ್ನು ದೇವಾಲಯದ ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇವಾಲಯದ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ವಿಧಾನಸಭೆ ಕಲಾಪದಲ್ಲಿ ಹೇಳಿಕೆ ನೀಡಿದ್ದರು.

ಅದರಂತೆ ವ್ಯವಸ್ಥಾಪನಾ ಮಂಡಳಿ ರದ್ದುಗೊಳಿಸಿ, ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ದೇವಾಲಯದ ರತ್ನಾಂಗಿ ಆಭರಣದ ಅವ್ಯವಹಾರ ಪ್ರಕರಣ ಇನ್ನೂ ಬಗೆಹರಿದಿಲ್ಲ. ದೇವಾಲಯದ ಅರ್ಚಕ ನರಸರಾಜ ಭಟ್ಟರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಆದರೆ, ಅವರು ತಲೆಮರಿಸಿಕೊಂಡಿದ್ದಾರೆ.

ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ನರಸರಾಜ ಭಟ್ಟರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಮಂಡ್ಯ ಜಿಲ್ಲಾಧಿಕಾರಿ ಬಿ.ಎಸ್.ಕೃಷ್ಣಯ್ಯ, ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಮೇಲುಕೋಟೆ ಠಾಣೆಯಲ್ಲಿ ನರಸರಾಜ ಭಟ್ಟ ವಿರುದ್ಧ ದೂರು ದಾಖಲಿಸುವಂತೆ ದೂರು ಸೂಚಿಸಿದ್ದರು.

ಅದರಂತೆ ಜು.18ರಂದು ಮೇಲುಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ದೂರು ದಾಖಲಾಗಿದ್ದು, ತಿಳಿಯುತ್ತಿದ್ದಂತೆಯೇ ಭಟ್ಟರು ಪರಾರಿಯಾಗಿದ್ದರು. ಮೇಲುಕೋಟೆ ಠಾಣೆ ಎಸ್ಐ ಅಶೋಕ್ ನೇತೃತ್ವದ ತಂಡ ನರಸರಾಜ ಭಟ್ಟರಿಗಾಗಿ ಹುಟುಕಾಟ ಮುಂದುವರೆಸಿದೆ.

ಯಾವ ಪ್ರಕರಣ : ನರಸರಾಜ ಭಟ್ಟರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 406 (ನಂಬಿಕೆ ದ್ರೋಹ), 408 (ಕರ್ತವ್ಯದಲ್ಲಿ ವಂಚನೆ), 420 (ಮೋಸ)ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಮೇಲುಕೋಟೆ : ಪೊಲೀಸರಿಗೆ ಹೆದರಿದ ಅರ್ಚಕರು ಪರಾರಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+