ಜಗನ್ ಉಪವಾಸ, ಶ್ರೀಸಾಮಾನ್ಯರಿಗೆ ಪ್ರಾಣ ಸಂಕಟ
ಹೈದರಾಬಾದ್, ಸೆ.1: ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಕಳೆದ 7 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ಮೋಹನ ರೆಡ್ಡಿ ಉಪವಾಸ ಬಲವಂತವಾಗಿ ಅಂತ್ಯಗೊಳಿಸಲಾಗಿದೆ. ಚಂಚಲಗುಡ ಜೈಲಿನಿಂದ ಉಸ್ಮಾನಿಯಾ ಆಸ್ಪತ್ರೆಗೆ ಮತ್ತೆ ಅಲ್ಲಿಂದ NIMS ಗೆ ಜಗನ್ ಶಿಫ್ಟ್ ಆಗುವ ಹೊತ್ತಿಗೆ ಸಾರ್ವಜನಿಕರು ಸಾಕಷ್ಟು ಕಷ್ಟಪಡಬೇಕಾಯಿತು.
ಚಂಚಲಗುಡ ಕಾರಾಗೃಹದ ಅಧಿಕಾರಿಗಳ ನಿರ್ದೇಶನದ ಮೇರೆಗೆ, ನಿಝಾಮ್ ವೈದ್ಯ ವಿಜ್ಞಾನ ಸಂಸ್ಥೆಯ ವೈದ್ಯರು ರೆಡ್ಡಿಯವರಿಗೆ ಬಲವಂತವಾಗಿ ಐವಿ ದ್ರವವನ್ನು ನೀಡಿದರು. ಅವರ ದೇಹಸ್ಥಿತಿ ಹದಗೆಟ್ಟಿದೆ. ಹೆಚ್ಚಿನ ದಿನ ಉಪವಾಸ ಕೈಗೊಂಡಿದ್ದರಿಂದ ಕಿಡ್ನಿಗೆ ತೊಂದರೆಯಾಗಿರುವ ಸಂಭವವಿದೆ. ಸದ್ಯಕ್ಕೆ ಮೂರು ದಿನಗಳ ಕಾಲ ನಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ ನಂತರ ಪರಿಸ್ಥಿತಿ ನೋಡಿಕೊಂಡು ಅವರನ್ನು ಡಿಸಾರ್ಜ್ ಮಾಡಲಾಗುತ್ತದೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಜಗನ್ಮೋಹನ್ ರೆಡ್ಡಿ ಅವರು ಅಖಂಡ ಆಂಧ್ರಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸದ್ಯ nims ಆಸ್ಪತ್ರೆಯಲ್ಲಿ ಅವರ ದೇಹ ಪರಿಸ್ಥಿತಿಯ ಬಗ್ಗೆ 8 ಮಂದಿ ವೈದ್ಯರ ತಂಡ ನಿಗಾ ವಹಿಸುತ್ತಿದೆ. ಅವರು 2-3 ದಿನ ಆಸ್ಪತ್ರೆಯಲ್ಲಿರಬೇಕಾಗಬಹುದು. ರೆಡ್ಡಿ ಉಪವಾಸದಿಂದ ಆದ ಪ್ರಯೋಜನವೇನು? ಜನ ಸಾಮಾನ್ಯರು ಪಟ್ಟ ಪಾಡೇನು? ಉಸ್ಮಾನಿಯಾ ವಿದ್ಯಾರ್ಥಿಗಳು ಪ್ರತಿಭಟಿಸಿದ್ದು ಏಕೆ? ಮುಂದೆ ಓದಿ....

ಪತ್ನಿಗೆ ಜತೆಗಿರಲು ಅವಕಾಶ
ಜಗನ್ ರೆಡ್ಡಿಯವರನ್ನು ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಎನ್ ಐಎಂಎಸ್ ಗೆ ಒಯ್ಯಲಾಗಿತ್ತು. ಆದರೆ ಅವರು ಉಪವಾಸ ಕೈ ಬಿಡಲು ನಿರಾಕರಿಸಿದ್ದರು.ವೈದ್ಯರು ರೆಡ್ಡಿಯವರಿಗೆ ಐವಿ ದ್ರವ ನೀಡುವಾಗ ಅವರ ಪತ್ನಿ ಭಾರತಿ ಬಳಿಯಲ್ಲಿದ್ದರು. ಅವರಿಗೆ ಪ್ರತಿ ದಿನ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಪತಿಯ ಬಳಿಯಿರಲು ಅನುಮತಿ ನೀಡಿದ ಸಿಬಿಐ ನ್ಯಾಯಾಲಯ ಕೊನೆಗೂ ಭಾರತಿ ಅವರಿಗೆ ಅವಕಾಶ ನೀಡಿತು.

ಜಗನ್ ಬೆಂಬಲಿಗರು
ಗೊಂದಲದಲ್ಲಿರುವ ಆಂಧ್ರಪ್ರದೇಶ(ಸೀಮಾಂಧ್ರ) ಜನತೆ, ಅಖಂಡ ಆಂಧ್ರಕ್ಕಾಗಿ ಜಗನ್ ಕೈಗೊಂಡ ಉಪವಾಸವನ್ನು ಬೆಂಬಲಿಸಿ ಆಸ್ಪತ್ರೆ ಬಳಿ ಜಮಾಯಿಸಿದ ಜನ

ವಿದ್ಯಾರ್ಥಿಗಳ ಆಕ್ರೋಶ
ತೆಲಂಗಾಣ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಗನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದರಿಂದ ಆಸ್ಪತ್ರೆ ಸುತ್ತಾ ಬಿಗಿ ಬಂದೋಬಸ್ತ್ ಇನ್ನಷ್ಟು ಹೆಚ್ಚಿಸಲಾಗಿದೆ.
ಸೀಮಾಂಧ್ರದಲ್ಲಿ ಒಳ್ಳೆ ಪ್ರಚಾರ ಪಡೆಯಲು ಜಗನ್ ಹೂಡಿರುವ ನಾಟಕ ಇದಾಗಿದೆ. ರಾಜ್ಯ ವಿಭಜನೆಯಾದ ಮೇಲೆ ಉಪವಾಸ ಕೈಗೊಂಡು ಏನು ಪ್ರಯೋಜನ, ರಾಯಲಸೀಮೆದಲ್ಲಿ ಪ್ರಾಬಲ್ಯ ಹೊಂದಿರುವ ಜಗನ್ ಸೀಮಾಂಧ್ರದ ಸರದಾರ ಆಗಲು ಹೊರಟಿದ್ದಾರೆ ಎಂಬ ಕೂಗೆದ್ದಿದೆ.

ಜಗನ್ ಬೆಂಬಲರ ಮನವಿ
ಜಗನ್ ಮೋಹನ್ ರೆಡ್ಡಿ ಅವರನ್ನು ಕಾಣಲು ದೂರದ ಊರುಗಳಿಂದ ಬಂದಿರುವ ಅವರ ಅಭಿಮಾನಿಗಳು, ಪೊಲೀಸರ ಬಳಿ ಮಾತುಕತೆ ನಡೆಸಿದ್ದಾರೆ.

ಜಗನ್ ಕುಟುಂಬ
ಜಗನ್ ಮೋಹನ್ ರೆಡ್ಡಿಗೂ ಮೊದಲು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಅವರ ತಾಯಿ ವಿಜಯಮ್ಮ ಅವರು ಅನಾರೋಗ್ಯದ ಕಾರಣ ಉಪವಾಸ ಕೈಬಿಟ್ಟಿದ್ದರು. ಮರು ಗಳಿಗೆಯಲ್ಲೇ ಜಗನ್ ಉಪವಾಸ ಆರಂಭಿಸಿದ್ದರು.

ಆಸ್ಪತ್ರೆಯಲ್ಲಿ ವಿಜಯಮ್ಮ
ಜಗನ್ ಮೋಹನ್ ರೆಡ್ಡಿ ಅವರ ತಾಯಿ ವಿಜಯಮ್ಮ, ಪತ್ನಿ ಭಾರತಿ ಅವರು NIMS ಆಸ್ಪತ್ರೆಗೆ ಆಗಮಿಸಿ ಜಗನ್ ಅವರ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

ಬೆಂಬಲಿಗರು
ಪೊಲೀಸರ ಬಿಗಿ ಭದ್ರತೆ ನಡುವೆ ಆಸ್ಪತ್ರೆಯೊಳಗೆ ನುಸುಳಲು ಯತ್ನಿಸಿದ ಅಭಿಮಾನಿಗಳನ್ನು ಪೊಲೀಸರು ತಡೆಗಟ್ಟಿದ್ದಾರೆ.

ಜಗನ್ ಕುಟುಂಬ ವರ್ಗ
ಹೈದರಾಬಾದಿನ NIMS ಆಸ್ಪತ್ರೆಗೆ ಬಿಗಿ ಭದ್ರತೆ ನಡುವೆ ಬಂದ ಜಗನ್ ಕುಟುಂಬ ವರ್ಗ

ಶ್ರೀಸಾಮಾನ್ಯರ ಪಾಡು
ಜಗನ್ ಮೋಹನ್ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ವೇಳೆಗೆ ಜನ ಸಾಮಾನ್ಯರು ತತ್ತರಿಸಿದ್ದರು. ಹಲವಾರು ಮಂದಿ NIMS ಬಿಟ್ಟು ಬೇರೆ ಆಸ್ಪತ್ರೆ ಕಡೆಗೆ ತೆರಳಿದರು. ಹೈದರಾಬಾದಿನ ಈ ಭಾಗದಲ್ಲಿ ಸಂಚಾರ ದಟ್ಟಣೆಯೂ ಅಧಿಕವಾಗಿತ್ತು.
ಹೊರ ರೋಗಿಗಳಿದ್ದ ಕೆಲವರು ಬೇರೆ ಆಸ್ಪತ್ರೆಗೆ ಶಿಫ್ಟ್ ಆಗಲು ಬಯಸಿದ ಘಟನೆಯೂ ಜರುಗಿದೆ. ಆಸ್ಪತ್ರೆಯಲ್ಲ್ಲಿ ಹೆಚ್ಚಿರುವ ಭದ್ರತಾ ತಪಾಸಣೆ, ಹೊರಗಡೆ ಗೊಂದಲ, ಗಲಾಟೆ, ಪ್ರತಿಭಟನೆಯಿಂದ ಸಾಮಾನ್ಯ ಜನತೆ ರೋಸಿ ಹೋಗಿದ್ದಾರೆ.

ಬೆಂಬಲಿಗರ ಆಕ್ರೋಶ
ಜಗನ್ ನೋಡಲು ಬಿಡದ ಪೊಲೀಸರ ಜತೆ ಬೆಂಬಲಿಗರ ಕಿತ್ತಾಟ












Click it and Unblock the Notifications