ಮುಂಬೈ ಅತ್ಯಾಚಾರ, ಎಲ್ಲಾ ಆರೋಪಿಗಳ ಬಂಧನ

ಮುಂಬೈ, ಆ.25: ಪತ್ರಿಕಾ ಛಾಯಾಗ್ರಾಹಕಿ ಮೇಲೆ ಕಳೆದ ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ ಅತ್ಯಾಚಾರ ಪ್ರಕರಣ ಖಂಡಿಸಿ ಭಾರಿ ಚರ್ಚೆ, ಪ್ರತಿಕ್ರಿಯೆಗಳು ಬಂದಿವೆ. ದೇಶದೆಲ್ಲೆಡೆ ಜನರು ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ಬಂಧಿತನಾಗಿದ್ದ ಆರೋಪಿಯೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡು ಉಳಿದವರ ವಿವರ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಬಲೆ ಬೀಸಿದ ಮುಂಬೈ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿ ಸಂಗ್ರಹಣೆ ಮತ್ತು ಫೋಟೋ ತೆಗೆಯಲೆಂದು ನಿರ್ಜನ ಸ್ಥಳದಲ್ಲಿರುವ ಶಕ್ತಿ ಮಿಲ್ಸ್ ಕಾಂಪೌಂಡ್‌ಗೆ ಅತ್ಯಾಚಾರಕ್ಕೊಳಗಾದ 23ರಹರೆಯ ಫೋಟೋ ಜರ್ನಲಿಸ್ಟ್ ತನ್ನ ಸಹೋದ್ಯೋಗಿಯೊಂದಿಗೆ ತೆರಳಿದ್ದಾಗ, ಮೇಲೆ ತಿಳಿಸಿರುವ ಐವರು ದುರುಳರು, ಸಹೋದ್ಯೋಗಿಯನ್ನು ಥಳಿಸಿ, ಕಟ್ಟಿಹಾಕಿ, ಯುವತಿಯನ್ನು ಅಮಾನುಷವಾಗಿ ಅತ್ಯಾಚಾರಕ್ಕೆ ಒಳಪಡಿಸಿದ್ದರು.

ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿರುವ ಯುವತಿಯನ್ನು ಮುಂಬೈನ ಜಸಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. 'ಘಟನೆಯಿಂದ ವಿಚಲಿತಳಾಗಿದ್ದೆ ಆದರೆ, ಇದೇ ಜೀವನದ ಅಂತ್ಯವಲ್ಲ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು 'ಎಂದು ಸಂತ್ರಸ್ತ ಪತ್ರಕರ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸ್ ಕಾರ್ಯಾಚರಣೆ ವಿವರ ಹಾಗೂ ದೇಶದೆಲ್ಲೆಡೆ ನಡೆದಿರುವ ಪ್ರತಿಭಟನೆಯ ಚಿತ್ರಗಳು ಇಲ್ಲಿವೆ ನೋಡಿ

ಬಂಧಿತರ ವಿವರ

ಬಂಧಿತರ ವಿವರ

ಯುವತಿ ಮೇಲೆ ಎರಡು ಬಾರಿ ಅತ್ಯಾಚಾರ ಎಸೆಗಿದ ದೆಹಲಿಯಲ್ಲಿ ಸೆರೆ ಸಿಕ್ಕ ಕಾಸಿಮ್ ಬೆಂಗಾಳಿ, ಸಿರಾಜ್ ರೆಹಮಾನ್ (25), ವಿಜಯ್ ಮೋಹನ್ ಜಾಧವ್, ಚಾಂದ್ ಬಸು ಸತ್ತಾರ್ ಶೇಕ್ ಅಲಿಯಾಸ್ ಮಹಮ್ಮದ್ ಅಬ್ದುಲ್(19), ಅಸ್ಪಾಕ್ ಹಾಗೂ ಸಲೀಂ. ಆಗಸ್ಟ್ 30 ರ ತನಕ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಪೊಲೀಸ್ ತ್ವರಿತ ಕಾರ್ಯಾಚರಣೆ

ಪೊಲೀಸ್ ತ್ವರಿತ ಕಾರ್ಯಾಚರಣೆ

ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಸಹದ್ಯೋಗಿಗಳು ನೀಡಿದ ಮಾಹಿತಿಯ ಮೇರೆಗೆ ಐವರು ಶಂಕಿತ ಅತ್ಯಾಚಾರಿಗಳ ರೇಖಾ ಚಿತ್ರವನ್ನು ಪೊಲೀಸರು ತಕ್ಷಣವೇ ಬಿಡುಗಡೆ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ 18 ಪೊಲೀಸ್ ತಂಡಗಳನ್ನು ರಚಿಸಿದ್ದರು.

ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಶುಕ್ರವಾರ ಮತ್ತೊಬ್ಬನನ್ನು ಬಂಧಿಸಿದರು. ಶನಿವಾರ ಬಂಧಿತನಾದ ಜಾಧವ್ ನೀಡಿದ ಮಾಹಿತಿ ಕಾಸಿಂ ನಲ್ಲಿ ಬಂಧಿಸಲು ನೆರವಾಯಿತು. ಭಾನುವಾರ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಪತ್ರಕರ್ತರ ಪ್ರತಿಭಟನೆ

ಪತ್ರಕರ್ತರ ಪ್ರತಿಭಟನೆ

ಅತ್ಯಾಚಾರವನ್ನು ಖಂಡಿಸಿ ಮೊಂಬತ್ತಿ ಹಿಡಿದು ವಿವಿಧ ಮಾಧ್ಯಮಗಳ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಘಟನಾ ಸ್ಥಳ

ಘಟನಾ ಸ್ಥಳ

ದುರ್ಘಟನೆ ನಡೆದ ಮುಂಬೈನ ಶಕ್ತಿ ಮಿಲ್ಸ್ ಕಾಂಪೌಂಡ್ ನ ಬಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪತ್ರಕರ್ತರಿಂದ ಬೆಂಬಲ

ಪತ್ರಕರ್ತರಿಂದ ಬೆಂಬಲ

ವಿವಿಧ ಮಾಧ್ಯಮಗಳ ಫೋಟೋ ಜರ್ನಲಿಸ್ಟ್ ಗಳು ಮುಂಬೈ ಜರ್ನಲಿಸ್ಟ್ ಗೆ ಆಗಿರುವ ದುರಂತವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಆರೋಪಿ ಸಿರಾಜ್

ಆರೋಪಿ ಸಿರಾಜ್

ಮುಂಬೈ: ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಸಿರಾಜ್ ರೆಹಮಾನ್ ನನ್ನು ಕೋರ್ಟಿಗೆ ಕರೆದೊಯ್ಯಲಾಗುತ್ತಿದೆ. PTI Photo by Shashank Parade

ಎಂಎನ್ ಎಸ್ ಪ್ರತಿಭಟನೆ

ಎಂಎನ್ ಎಸ್ ಪ್ರತಿಭಟನೆ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ ಕಾರ್ಯಕರ್ತರು ಗೃಹ ಸಚಿವ ಆರ್ ಆರ್ ಪಾಟೀಲ್ ಅವರ ವಿರುದ್ಧ ಕಿಡಿಕಾರಿದ್ದಾರೆ.

ಮತ್ತೊಬ್ಬ ಆರೋಪಿ

ಮತ್ತೊಬ್ಬ ಆರೋಪಿ

ಮುಂಬೈ: ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಚಾಂದ್ ಶೇಖ್ ಅಲಿಯಾಸ್ ಮಹಮ್ಮದ್ ಅಬ್ದುಲ್ ನನ್ನು ಕೋರ್ಟಿಗೆ ಕರೆದೊಯ್ಯಲಾಗುತ್ತಿದೆ. PTI Photo by Shashank Parade

ಅಗರ್ತಲದಲ್ಲಿ

ಅಗರ್ತಲದಲ್ಲಿ

ಮುಂಬೈ ಸಾಮೂಹಿಕ ಅತ್ಯಾಚಾರ ವಿರೋಧಿಸಿ ಅಗರ್ತಲದಲ್ಲಿ ನಡೆದ ಪ್ರತಿಭಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+