ಕಳೆದ ವಾರದ ಸದ್ದು ಮಾಡಿದ ಸುದ್ದಿಗಳಿವು
ಬೆಂಗಳೂರು, ಆ.25: ಆಗಸ್ಟ್ 18 ರಿಂದ ಆಗಸ್ಟ್ 24ರ ತನಕ ದೇಶ ಅನೇಕ ಘಟನಾವಳಿಗಳನ್ನು ಕಂಡಿದೆ. ಪ್ರಮುಖ ಸುದ್ದಿಗಳನ್ನು ಹೆಕ್ಕಿ ಒನ್ ಇಂಡಿಯಾ ನಿಮ್ಮ ಮುಂದೆ ಚಿತ್ರಗಳಲ್ಲಿ ಸುದ್ದಿಗಳ ಹಿನ್ನೋಟ ನೀಡುತ್ತಿದೆ.
ಕಳೆದ ವಾರದ ಸುದ್ದಿಗಳ ಕಥೆ ವ್ಯಥೆಗಳಲ್ಲಿ ಕರ್ನಾಟಕದಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಲ್ಲಿ ಹಾರಾಡಿದ ಕಾಂಗ್ರೆಸ್ ಬಾವುಟ, ಮಂಡ್ಯದಲ್ಲಿ ರಮ್ಯಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರಿಗೆ ಜಯಭೇರಿ, ವಾರಾಂತ್ಯಕ್ಕೆ ಬೆಂಗಳೂರಿಗೆ ಬಂದ ಇಂಡಿಯನ್ ಬಾಡ್ಮಿಂಟನ್ ಲೀಗ್, ಇಶ್ರಾತ್ ಜಹನಾ ನಕಲಿ ಎನ್ ಕೌಂಟರ್ ಪ್ರಕರಣ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಉಸೇನ್ ಬೋಲ್ಡ್ ವಿಜಯ ಓಟ, ದೆಹಲಿಯಲ್ಲಿ ಸೆರೆ ಸಿಕ್ಕ ಅಬ್ದುಲ್ ಕರೀಂ ತುಂಡಾ ಬಾಯ್ಬಿಟ್ಟ ಸತ್ಯಗಳಿವೆ.
ಉಳಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಸಂಕಟ, ರುಪಾಯಿ ಅಪಮೌಲ್ಯ, ಸಿರಿಯಾದಲ್ಲಿ ಮಾರಣ ಹೋಮ ಇವೆ ಮುಂತಾದ ಚಿತ್ರಗಳು ಇಲ್ಲಿವೆ

ಕರ್ನಾಟಕ ಉಪಚುನಾವಣೆ
ಮಂಡ್ಯದಲ್ಲಿ ರಮ್ಯಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರಿಗೆ ಜಯಭೇರಿ.

ಐಬಿಎಲ್ ಹವಾ
ಇಂಡಿಯನ್ ಬಾಡ್ಮಿಂಟನ್ ಲೀಗ್ ನಲ್ಲಿ ಸೈನಾ ನೆಹ್ವಾಲ್ ಅವರು ತಮ್ಮ ಜಯದ ಓಟ ಮುಂದುವರೆಸಿದ್ದಾರೆ. ಬೆಂಗಳೂರಿನ ತಂಡ ಬೆಂಗಾ ಬೀಟ್ಸ್ ಮಾತ್ರ ಕೊನೆ ಸ್ಥಾನದಲ್ಲಿದೆ.

ಇಶ್ರಾತ್ ಜಹಾನ್ ಎನ್ ಕೌಂಟರ್
2004ರ ಇಶ್ರಾತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಟಾಪ್ ಪೊಲೀಸ್ ಅಧಿಕಾರಿ ಪಿಪಿ ಪಾಂಡೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಉಗ್ರ ಸೈಯದ್ ಕರೀಂ ತುಂಡಾ
ದೆಹಲಿ ಪೊಲೀಸರ ಕೈಗೆ ಕಳೆದ ವಾರ ಸೆರೆಸಿಕ್ಕ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಸೈಯದ್ ಕರೀಂ ತುಂಡಾ ಅನೇಕ ಬೆಚ್ಚಿ ಬೀಳಿಸುವ ವಿಷಯಗಳನ್ನು ಹೊರ ಹಾಕಿದ್ದಾನೆ. ದಾವೂದ್ ಇಬ್ರಾಹಿಂ ಸಂಪರ್ಕ, ಹಫೀಜ್ ಸಯೀದ್- ದಾವೂದ್ ನಿಕಟ ವ್ಯವಹಾರ, ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಉಗ್ರರ ನುಸುಳುವಿಕೆ ಹೀಗೆ ಅನೇಕ ಮಾಹಿತಿಯನ್ನು ತುಂಡ ಹೇಳಿದ್ದಾನೆ. ಇನ್ನಷ್ಟು ನಿರೀಕ್ಷಿಸಿ

ಈಜಿಪ್ಟ್ ನಲ್ಲಿ
ಈಜಿಪ್ಟ್ ನಲ್ಲಿ ನೂರಾರು ಮೋರ್ಸಿ ಪರ ಪ್ರತಿಭಟನಾಕಾರರ ಹತ್ಯೆ, ಹೊಸ ಸರ್ಕಾರ ಸ್ಥಾಪನೆ ಭರವಸೆ ನಡುವೆ 800 ಜನರ ಸಾವಿಗೆ ಕಾರಣರಾದ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರು ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ನ್ಯೂಯಾರ್ಕ್ ನಲ್ಲಿ
ಭಾರತದ ಸ್ವಾತಂತ್ರೋತ್ಸವವನ್ನು ನ್ಯೂಯಾರ್ಕ್ ನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನಟಿ ವಿದ್ಯಾ ಬಾಲನ್ ಪ್ರಮುಖ ಆಕರ್ಷಣೆಯಾಗಿದ್ದರು.

ಉಸೇನ್' ಥಂಡರ್'
ಜಗದೇಕ ಓಟಗಾರ ಜಮೈಕಾದ ಉಸೇನ್ ಬೋಲ್ಡ್ ಅವರು ರಷ್ಯಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ಟೂರ್ನಿಯಲ್ಲಿ 100, 200 ಹಾಗೂ 4X100 ಮೀ ಓಟದಲ್ಲಿ ಚಿನ್ನ ಗೆದ್ದರು. ಈ ಮೂಲಕದ ಕಾರ್ಲ್ ಲೂಯಿಸ್ ಹೆಸರಿನಲ್ಲಿದ್ದ 8 ಪದಕ ಗೆದ್ದ ದಾಖಲೆ ಸರಿಗಟ್ಟಿದರು.

ಮಹಾ ದುರಂತ
ಭಾರತದ ಜಲಂತರ್ಗಾಮಿ ಮುಂಬೈನ ಡಾಕ್ ಯಾರ್ಡ್ ನಲ್ಲಿ ಮುಳುಗಿದ್ದಲ್ಲದೆ ಸರಣಿ ಸ್ಫೋಟದ ಪರಿಣಾಮ 18 ಜನ ಸಿಬ್ಬಂದಿಯ ಬಲಿ ತೆಗೆದುಕೊಂಡಿತು

ಸಂಕಷ್ಟದಲ್ಲಿ ಮುಷರಫ್
2007ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಮಾಡಿದ ಆರೋಪದ ಮೇಲೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ರಾಜೀವ್ ಸ್ಮರಣೆ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 69ನೇ ಜನ್ಮ ದಿನಾಚರಣೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ದೇಶದೆಲ್ಲೆಡೆ ಸದ್ಭಾವನಾ ದಿವಸ ಆಚರಣೆ ಜತೆಗೆ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಕಾಯ್ದೆ ಯೋಜನೆಯನ್ನು ಜಾರಿಗೊಳಿಸಿತು.

ಮುಂಗಾರು ಅಧಿವೇಶನ
ತೆಲಂಗಾಣ ಸಂಸತ್ ಸದಸ್ಯರ ಅಮಾನತು, ವಿಪಕ್ಷಗಳ ಗದ್ದಲದ ನಡುವೆ ಯುಪಿಎ ಸರ್ಕಾರ ಲೋಕಸಭೆಯಲ್ಲಿ ಮೂರು ಕಾಯ್ದೆಗಳನ್ನು ಮಂಡಿಸಿದ್ದು ವಿಶೇಷ

ನರೇಂದ್ರ ಹತ್ಯೆ
ವಿಚಾರವಾದಿ ನರೇಂದ್ರ ದಭೋಲ್ಕರ್ ಹತ್ಯೆ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಸದ್ದು ಮಾಡಿದೆ. ಅಲ್ಲಿನ ಸರ್ಕಾರ ನರೇಂದ್ರ ಅವರ ಆಶಯದದಂತೆ ಮೂಢನಂಬಿಕೆ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದೆ.

ಕಿಶ್ತ್ ವಾರ್ ಗಲಾಟೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ ವಾರ್ ಪ್ರಾಂತ್ಯದಲ್ಲಿ ನಡೆದಿರುವ ಗಲಾಟೆ, 12ನೇ ದಿನಕ್ಕೆ ಕಾಲಿಟ್ಟಿದ್ದು ಓರ್ವ ಯುವಕನ ಬಲಿ ಪಡೆದಿದೆ. ಕರ್ಫ್ಯೂ ಮುಂದುವರೆದಿದೆ.

ಅಸಾರಾಮ್ ಬಾಪು ಕಿರಿಕ್
ಸ್ವಯಂಘೋಷಿತ ದೇವ ಮಾನವ ಅಸಾರಾಮ್ ಬಾಪು ಅವರು 16 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದ್ದು ದೆಹಲಿ ಪೊಲೀಸ್ ಠಾಣೆಯೊಂದರಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ವಿಷಾನಿಲ ಪ್ರಯೋಗ
ಸಿರಿಯಾದಲ್ಲಿ ಬಂಡುಕೋರರನ್ನು ತಡೆಗಟ್ಟಲು ಇಲ್ಲಿನ ಬಷರ್ ಅಲ್ ಅಸಾದ್ ಸರ್ಕಾರ ಅತ್ಯಂತ ಕ್ರೂರ ಮಟ್ಟದ ಪ್ರಯೋಗಕ್ಕೆ ಮುಂದಾಗಿದ್ದು ವಿಷಾನಿಲ ಪ್ರಯೋಗಿಸಿ ಸಾವಿರಾರು ನಾಗರೀಕರನ್ನು ಕೊಂದು ಹಾಕಿದೆ. ಒಬಾಮಾ ಸರ್ಕಾರ ಇಂದು ಕಣ್ಣು ಬಿಟ್ಟಿದ್ದು ವಿಶ್ವಸಂಸ್ಥೆಯ ಅಧಿಕಾರಿಗಳೊಡನೆ ಪರಿಸ್ಥಿತಿ ಅವಲೋಕನಕ್ಕೆ ತಂಡವೊಂದನ್ನು ಕಳಿಸಿದೆ.

ರಕ್ಷಾ ಬಂಧನ್
ದೇಶದೆಲ್ಲೆಡೆ ಸಂಭ್ರಮದಿಂದ ರಕ್ಷಾ ಬಂಧನ್ ಆಚರಿಸಲಾಯಿತು. ಮುಸ್ಲಿಂ ಮಹಿಳೆಯರು ಮೋದಿ ಕೈಗೆ, ಚಿಕ್ಕ ಮಕ್ಕಳು ಪ್ರಣಬ್ ಮುಖರ್ಜಿ ಅಜ್ಜನ ಕೈಗೆ, ಗಡಿಭಾಗದಲ್ಲಿ ವೀರ ಯೋಧರ ಕೈಗೆ ಯುವತಿಯರು ರಾಖಿ ಕಟ್ಟಿ ಸಂಭ್ರಮ ಪಟ್ಟರು.

ಮುಂಬೈ ಅತ್ಯಾಚಾರ ಪ್ರಕರಣ
ಚಿತ್ರದಲ್ಲಿರುವುದು ಕಳೆದ ಗುರುವಾರ ಸಂಜೆ ಮುಂಬೈ ನಲ್ಲಿ ಫೋಟೋ ಜರ್ನಲಿಸ್ಟ್ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ವಿಶಾಖಪಟ್ಟಣಂ
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸರ್ಕಾರಿ ಸ್ವಾಮ್ಯದ ಎಚ್ ಪಿಸಿಎಲ್ ರಿಫೈನರಿಯಲ್ಲಿ ಸ್ಫೋಟ ವುಂಟಾಗಿ ಓರ್ವ ಮೃತಪಟ್ಟು 35ಕ್ಕೂ ಅಧಿಕ ಜನರಿಗೆ ಗಾಯವುಂಟಾಯಿತು.

ಅಖಂಡ ಆಂಧ್ರಕ್ಕಾಗಿ
ಅಖಂಡ ಆಂಧ್ರಕ್ಕೆ ಒತ್ತಾಯಿಸಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖಂಡೆ ವೈಎಸ್ ವಿಜಯಮ್ಮ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಅವರ ಮನವಿ ಮೇರೆಗೆ ಸತ್ಯಾಗ್ರಹ ನಿಲ್ಲಿಸಿದ್ದಾರೆ. ಆದರೆ, ಚಂಚಲಗುಡ ಜೈಲಿನಲ್ಲಿ ಜಗನ್ ಅವರು ಭಾನುವಾರದಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.












Click it and Unblock the Notifications