• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳು

By Mahesh
|

ನವದೆಹಲಿ, ಆ.22: ದೆಹಲಿಯ ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟ ಯುವತಿ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದ ಸ್ವಯಂಘೋಷಿತ ದೇವಮಾನವ ಅಸಾರಮ್ ಬಾಪು ಲೇಟೆಸ್ಟ್ ಆಗಿ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಸಿಲುಕಿದ್ದಾರೆ. ಆದರೆ, ವಿವಾದಗಳು ಬಾಪುಗೆ ಹೊಸತೇನಲ್ಲ. ಅಸಾರಾಮ್ ಬಾಪು ವಿವಾದಗಳತ್ತ ಒಂದು ನೋಟ ಇಲ್ಲಿದೆ...

ಮಧ್ಯಪ್ರದೇಶದಲ್ಲಿ 38 ವರ್ಷಗಳ ಹಿಂದೆ ಜ್ಞಾನೋದಯ ಪಡೆದು ಸ್ವಯಂಘೋಷಿತ ದೇವ ಮಾನವನಾಗಿ ಬೆಳೆದ ಅಸಾರಾಮ್ ಬಾಪು ಅವರಿಗೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಗುಜರಾತಿನ ಸಂತ ಶ್ರೀ ಅಶರಾಮ್ ಜೀ ಆಶ್ರಮದ ಭಾಗವಾಗಿ ಬೆಳೆದ ಬಾಪು ಆಶ್ರಮ ದೇಶದೆಲ್ಲೆಡೆ ಹರಡಿಕೊಂಡಿದೆ.

ಸುಮಾರು 200 ಕ್ಕೂ ಆಶ್ರಮಗಳ ಜತೆಗೆ 500 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿರುವ ಶ್ರೀಮಂತ ಧಾರ್ಮಿಕ ಗುರು ಅಸರಾಮ್ ಅವರು 72 ವರ್ಷ ವಯಸ್ಸಿನಲ್ಲಿ ಹತ್ತಾರು ವಿವಾದಗಳನ್ನು ಹೊತ್ತು ಸಾಗುತ್ತಿದ್ದಾರೆ. ಅಸಾರಾಮ್ ಬಾಪು ಅವರ ಜೀವನದ ಪ್ರಮುಖ ವಿವಾದಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಕೊಲೆ ಯತ್ನ

ಕೊಲೆ ಯತ್ನ

2009ರಲ್ಲಿ ಅಸಾರಾಮ್ ಬಾಪು ಅವರ ಬಂಟ ಆಜು ಚಂದಕ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ 2009ರಲ್ಲಿ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆಶ್ರಮದಲ್ಲಿ ತಾಂತ್ರಿಕ್ ಕ್ರಿಯೆ ನಡೆಸುವಾಗ ಅಸಭ್ಯ ಭಂಗಿಗಳಲ್ಲಿ ಅಸಾರಾಮ್ ಬಾಪು ಇರುವುದನ್ನು ನೋಡಿದ್ದೇನೆ ಎಂದು ತಾನು ನೀಡಿದ ದೂರಿನ ಜತೆ ಅಫಿಡವಿಟ್ ಕೂಡಾ ರಾಜು ಸಲ್ಲಿಸಿದ್ದರು.

ಭೂ ಕಬಳಿಕೆ

ಭೂ ಕಬಳಿಕೆ

2000ರಲ್ಲಿ ಗುಜರಾತ್ ಸರ್ಕಾರ ನೀಡಿದ್ದ 10 ಎಕರೆ ಭೂಮಿಯಲ್ಲಿ ಆಶ್ರಮ ಸ್ಥಾಪಿಸಿದ್ದಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 18,000 ಚದರ ಮೀಟರ್ ಜಾಗವನ್ನು ಅಸಾರಮ್ ಬಾಪು ಆಶ್ರಮ ಅತಿಕ್ರಮಣ ಮಾಡಿಕೊಂಡಿತ್ತು.

ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮೊಕದ್ದಮೆ ದಾಖಲಾಗಿ ಕೋರ್ಟ್ ಸಮನ್ಸ್ ನೀಡಿತ್ತು. ಸಮನ್ಸ್ ಗೆ ಪ್ರತಿಕ್ರಿಯೆ ನೀಡದ ಕಾರಣ ಜಿಲ್ಲಾಧಿಕಾರಿಗಳು ಪೊಲೀಸರ ನೆರವಿನಿಂದ ಆಶ್ರಮದ ಅನಧಿಕೃತ ಕಟ್ಟಡವನ್ನು ನೆಲಸಮಗೊಳಿಸಿದ್ದರು.

2 ಮಕ್ಕಳ ನಿಗೂಢ ಸಾವು

2 ಮಕ್ಕಳ ನಿಗೂಢ ಸಾವು

ದೀಪೇಶ್ ವಘೇಲ(10) ಹಾಗೂ ಅಭಿಷೇಕ್ ವಘೇಲ (11) ಇಬ್ಬರು ಕಸಿನ್ಸ್ ಮೊಟೆರಾದಲ್ಲಿರುವ ಆಶ್ರಮದ ಗುರುಕುಲದಲ್ಲಿ ಓದುತ್ತಿದ್ದರು. ಕೆಲಕಾಲ ನಾಪತ್ತೆಯಾದವರು ಮತ್ತೆ ಶವವಾಗಿ ಪತ್ತೆಯಾಗಿದ್ದು ಸಬರಮತಿ ಆಶ್ರಮದ ದಂಡೆಯಲ್ಲಿ 2008ರ ಜು.5 ರಲ್ಲಿ ದಾಖಲಾದ ಪ್ರಕರಣದ ತನಿಖೆಗೆ ಆಯೋಗ ರಚನೆಯಾಗಿತ್ತು. ನಂತರ ಸಿಐಡಿ ತನಿಖೆ ಮುಂದುವರೆಸಿತು.

ಆಶ್ರಮದಲ್ಲಿ ತಂತ್ರ ಸಾಧನೆ, ಮಾಟ ಮಂತ್ರ ನಡೆಸುವ ಬಗ್ಗೆ ಏಳು ಜನ ಆಶ್ರಮವಾಸಿಗಳನ್ನು ಪ್ರಶ್ನಿಸಲಾಯಿತು. ನಂತರ ಸುಳ್ಳು ಪತ್ತೆಯಂತ್ರಕ್ಕೂ ಅವರು ತಲೆಬಾಗಲಿಲ್ಲ. ಏಳು ಜನರ ಮೇಲೆ ಪ್ರಕರಣ ದಾಖಲಾಯಿತು.

ದೆಹಲಿ ಅತ್ಯಾಚಾರ ಪ್ರಕರಣ ಹೇಳಿಕೆ

ದೆಹಲಿ ಅತ್ಯಾಚಾರ ಪ್ರಕರಣ ಹೇಳಿಕೆ

ಅಸಾರಾಮ್ ಬಾಪು ಅಸಂಬದ್ಧ ಹೇಳಿಕೆ ನೀಡಿದ್ದರು. 'ನನ್ನ ಪ್ರಕಾರ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪುರುಷರಷ್ಟೇ ಅತ್ಯಾಚಾರಕ್ಕೊಳಗಾದ ಯುವತಿಯ ಪಾತ್ರವೂ ಇದೆ'. ಇನ್ನಷ್ಟು ಇಲ್ಲಿದೆ ಓದಿ

ಮಾಧ್ಯಮಗಳು 'ಬೊಗಳುವ ನಾಯಿಗಳು'

ಮಾಧ್ಯಮಗಳು 'ಬೊಗಳುವ ನಾಯಿಗಳು'

ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯಿಂದ ಹಿಂದೆ ಸರಿಯದ ಬಾಪು, ಮಾಧ್ಯಮಗಳನ್ನು 'ಬೊಗಳುವ ನಾಯಿಗಳು' ಎಂದು ಕರೆದರು, ಜನವರಿ 8, 2013ರಲ್ಲಿ 'ನಾನು ಹೇಳಿದ್ದು ತಪ್ಪೇ ಇರಬಹುದು, ಒಂದು ನಾಯಿ ಬೊಗಳಿತು ಮತ್ತು ಅನೇಕ ನಾಯಿಗಳು(ಮಾಧ್ಯಮ) ದನಿಗೂಡಿಸಿದವು. ನಾಯಿ ಬೊಗಳಿದರೆ ಆನೆ ಗೌರವಕ್ಕೇನು ಧಕ್ಕೆ ಇಲ್ಲ' ಎಂದು ಬಾಪು ಹೇಳಿದ್ದರು.

ಮಧ್ಯಪ್ರದೇಶ ಭೂ ಹಗರಣ

ಮಧ್ಯಪ್ರದೇಶ ಭೂ ಹಗರಣ

ಜನವರಿ 2013ರಲ್ಲಿ ಮಧ್ಯಪ್ರದೇಶದಲ್ಲಿ ಸುಮಾರು700 ಕೋಟಿ ರು ಗೂ ಅಧಿಕ ಭೂ ಹಗರಣದಲ್ಲಿ ಅಸಾರಮ್ ಬಾಪು ಹೆಸರು ತಗುಲಿಕೊಂಡಿತು. ರತ್ಲಮ್ ನಲ್ಲಿರುವ ಆಶ್ರಮಕ್ಕೆ ಸೇರಿದ 200 ಎಕರೆ ಭೂಮಿ ವಿವಾದಕ್ಕೆ ಕಾರಣವಾಯಿತು. Serious Fraud Investigating Office (SFIO) ತಂಡ ಅಸಾರಾಮ್ ಬಾಪು ವಿರುದ್ಧ ಕ್ರಮಕ್ಕೆ ಸೂಚಿಸಿತು.

ಆಶ್ರಮದಲ್ಲಿ ಯುವಕನ ಸಾವು

ಆಶ್ರಮದಲ್ಲಿ ಯುವಕನ ಸಾವು

2013ರ ಫೆಬ್ರವರಿಯಲ್ಲಿ 24 ವರ್ಷದ ರಾಹುಲ್ ಪಚೌರಿ ಎಂಬ ಯುವಕ ಬಾಪು ಅವರ ಜಬಲ್ ಪುರದ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಬಾಪು ಆಶ್ರಮದಲ್ಲಿ ನನ್ನ ಮಗನಿಗೆ ವಿಷವಿಕ್ಕಿ ಕೊಲ್ಲಲಾಗಿದೆ ಎಂದು ರಾಹುಲ್ ತಂದೆ ಅರೋಪಿಸಿದರು. ಆಶ್ರಮದಲ್ಲಿ ನಕಲಿ ಔಷಧ ಮಾರಾಟ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ರಾಹುಲ್ ಅವರ ತಂದೆ ಹೇಳಿದ್ದ ಎನ್ನಲಾಗಿದೆ.

ಮೋದಿ ವಿರುದ್ಧ ಹೇಳಿಕೆ

ಮೋದಿ ವಿರುದ್ಧ ಹೇಳಿಕೆ

'ನಮ್ಮನ್ನು ತುಳಿಯಲು ಪ್ರಯತ್ನಿಸಿದರೆ ನಿಮ್ಮನ್ನು ಹೊರಹಾಕುತ್ತೇವೆ' ಎಂದು ಮೋದಿ ವಿರುದ್ಧ ಸಾರ್ವಜನಿಕ ಸಭೆಯಲ್ಲಿ ಬಾಪು ಕಿಡಿಕಾರಿದ್ದರು.

ಸೋಮನಾಥದಲ್ಲಿ ಸತ್ಸಂಗ ಕಾರ್ಯಕ್ರಮಕ್ಕೆ ಅನುಮತಿ ಪಡೆದರು ಪೊಲೀಸರು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ರಾವಣನ ಕಾಲದ ಪೊಲೀಸರು ಈ ರೀತಿ ವರ್ತಿಸುತ್ತಿರಲಿಲ್ಲ ಎಂದು ಬಾಪು ಹೇಳಿದ್ದಾರೆ. ಯಾರನ್ನು ಬೇಕಾದರೂ ಬಂದು ಅರೆಸ್ಟ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಭಕ್ತರನ್ನು ಒದ್ದು ನಿಂದಿಸಿದ್ದು

ಭಕ್ತರನ್ನು ಒದ್ದು ನಿಂದಿಸಿದ್ದು

ಕಳೆದ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬಾಪು ಅವರು ಸಹನೆ ಕಳೆದುಕೊಂಡು ಭಕ್ತನೊಬ್ಬನಿಗೆ ಜಾಡಿಸಿ ಒದ್ದಿದ್ದರು. ಅಮನ್ ಸಿಂಗ್ ಡಾಂಗಿ ಎಂಬ ಭಕ್ತ ಬಾಪುರಿಂದ ಒದೆಸಿಕೊಂಡು ಅವಾಚ್ಯ ಶಬ್ದಗಳಿಂದ ಬೈಯಿಸಿಕೊಂಡಿದ್ದರು.

ಬಾಪು ಅವರ ಪಾದ ಮುಟ್ಟಲು ಯತ್ನಿಸಿದ್ದೇ ತಪ್ಪಾಯ್ತು. ನನ್ನನ್ನು ನಿಂದಿಸಿದ ಬಾಪು ಕಾಲಿನಿಂದ ಒದ್ದರು. ಅವರ ಅಂಗರಕ್ಷಕರು ಕೂಡಾ ಒಡೆದರು ಎಂದು ಅಮನ್ ಅವರು ಮಾಧ್ಯಮಗಳ ಮುಂದೆ ಗೋಳು ತೋಡಿಕೊಂಡಿದ್ದರು.

ಪತ್ರಕರ್ತನಿಗೆ ಕಪಾಳಮೋಕ್ಷ

ಪತ್ರಕರ್ತನಿಗೆ ಕಪಾಳಮೋಕ್ಷ

2012ರ ಸೆಪ್ಟೆಂಬರ್ ನಲ್ಲಿ ವಿಡಿಯೋ ಜರ್ನಲಿಸ್ಟ್ ರೊಬ್ಬರಿಗೆ ಗಾಜಿಯಾಬಾದ್ ನಲ್ಲಿ ಅಸಾರಾಮ್ ಬಾಪು ಕಪಾಳ ಮೋಕ್ಷ ಮಾಡಿದ್ದರು. ಹಿಂದಿ ನ್ಯೂಸ್ ಚಾನೆಲ್ ನ ವರದಿಗಾರ ಕವಿ ನಗರದ ಸತ್ಸಂಗ ಕಾರ್ಯಕ್ರಮ ಚಿತ್ರೀಕರಿಸಲು ಬಂದಿದ್ದರು.

ಗೋಧ್ರಾ ಬಲಿ ಹೆಲಿಕಾಪ್ಟರ್ ಪತನದ ನಂತರವೂ ಬದುಕುಳಿದಿದ್ದು ಹೇಗೆ ಎಂದು ಬಾಪು ಅವರನ್ನು ವರದಿಗಾರ ಪ್ರಶ್ನಿಸಿದ್ದಾರೆ. ನಾನು ಸರ್ವಶಕ್ತ ಅದಕ್ಕೆ ನನಗೆ ಏನು ಆಗಲಿಲ್ಲ. ಹೆಲಿಕಾಪ್ಟರ್ ಮೂರು ಚೂರಾಗಿ ಬಿದ್ದರು ನಾನು ಆರಾಮಾಗಿ ಹೊರ ಬಂದೆ ಎಂದಿದ್ದರು. ನಂತರ ಭಕ್ತಾದಿಗಳಿಂದ ಹೇಳಿಕೆ ಪಡೆ ಎಂದು ವರದಿಗಾರನಿಗೆ ಸೂಚಿಸಿದರು.

ಇದಕ್ಕೆ ನಿರಾಕರಿಸಿದಾಗ ವರದಿಗಾರನ ಕೆನ್ನೆಗೆ ಬಾಪು ಬಾರಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Hindu spiritual leader Asaram Bapu, on Wednesday, embroiled himself into a fresh controversy after a 16-year-old girl from Jodhpur filed a complaint of a sexual assault against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more