ರಮ್ಯಾ ಇನ್ನು ಕಿತ್ತೂರು ರಾಣಿ ಚೆನ್ನಮ್ಮ ಅಂತೆ!

ಮಂಡ್ಯ,

ಆಗಸ್ಟ್
20:
ಮಂಡ್ಯ
ಲೋಕಸಭೆ
ಉಪಚುನಾವಣೆಯ
ಕಾಂಗ್ರೆಸ್
ಅಭ್ಯರ್ಥಿ,
ನಟಿ
ರಮ್ಯಾ
ಅವರ
ಅಪ್ಪ
ಯಾರೋ
ಕೊನೆಗೂ
ಕಾಂಗ್ರೆಸ್ಸಿನವರು
ಬಾಯ್ಬಿಡುತ್ತಿಲ್ಲವಾದರೂ
ಬಣ್ಣದ
ಲೋಕದ
ರಮ್ಯಾರನ್ನು
'ಮಂಡ್ಯದ
ಕಿತ್ತೂರು
ರಾಣಿ
ಚೆನ್ನಮ್ಮ'
ಎಂದು
ಮತದಾರರ
ಎದುರು
ಬಣ್ಣಿಸಿ
ಕೃತಾರ್ಥರಾಗಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಮಂಡ್ಯದ

ಗಂಡು
ಅಂಬರೀಷಣ್ಣ
ಹೇಳಿದಂತೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಕರ್ನಾಟಕದ
ಮೋದಿ
ಆಗಿದ್ದಾಯ್ತು
ಈಗ
ನಟಿ
ರಮ್ಯಾ
ಅವರಿನ್ನು
ಮಂಡ್ಯದ
ಜನತೆಗೆ
ಕಿತ್ತೂರು
ರಾಣಿ
ಚೆನ್ನಮ್ಮ.
ಮಂಡ್ಯದಲ್ಲಿ
ಸೋಮವಾರ
ನಡೆದ
ಕಾಂಗ್ರೆಸ್‌
ಚುನಾವಣಾ
ಪ್ರಚಾರ
ಸಭೆಯಲ್ಲಿ
ಕೇಂದ್ರ
ಸಚಿವ
ಎಂ
ವೀರಪ್ಪ
ಮೊಯ್ಲಿ
ಮಾತನ್ನಾಡಿದ್ದಾರೆ.

id='are-slot-2'
class='oiad
oi-axt
oiadv'>

 ಲೋಕಸಭೆಯಲ್ಲಿ ರಮ್ಯಾ ಹೋರಾಟ

ಲೋಕಸಭೆಯಲ್ಲಿ ರಮ್ಯಾ ಹೋರಾಟ

ನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರಮ್ಯಾ ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದ ನಂ 1 ತಾರೆಯಾಗಿ ಮೆರೆದರು. ಅದೇ ರೀತಿ ಬ್ರಿಟೀಷರ ವಿರುದ್ಧ ಹೋರಾಡಿದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನಂತೆ ನಾಡಿನ ನೆಲ, ಜಲದ ಪರವಾಗಿ ಲೋಕಸಭೆಯಲ್ಲೂ ಹೋರಾಟ ನಡೆಸಲಿದ್ದಾರೆ. ಆ ನಂಬಿಕೆ, ವಿಶ್ವಾಸದಿಂದಲೇ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ ಎಂದು ಸಮರ್ಥಿಸಿಕೊಂಡರು.

ಜನರು ರಮ್ಯಾ ಕೈ ಹಿಡಿಯಬೇಕು

ಜನರು ರಮ್ಯಾ ಕೈ ಹಿಡಿಯಬೇಕು

ರಮ್ಯಾಗೆ ರಾಜಕೀಯ ಅನುಭವವಿಲ್ಲ ನಿಜ. ಆದರೆ, ಈ ಭಾಗದ ರೈತರು, ಜನರ ಸಮಸ್ಯೆಗಳು ಅವರಿಗೆ ಗೊತ್ತಿದೆ. ರೈತರು, ನೀರಾವರಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಪರವಾಗಿ ಲೋಕಸಭೆಯಲ್ಲಿ ಚೆನ್ನಮ್ಮನ ರೀತಿ ಹೋರಾಟ ನಡೆಸಲಿದ್ದಾರೆ. ಅದಕ್ಕಾಗಿ ಜನರು ಅವರ ಕೈ ಹಿಡಿಯಬೇಕೆಂದು ಹೇಳಿದರು.

ಅಲ್ಲಿ ಮಾತನಾಡದೆ ಇಲ್ಲಿ ಮಾತನಾಡುತ್ತಾರೆ, ಛೀ!

ಅಲ್ಲಿ ಮಾತನಾಡದೆ ಇಲ್ಲಿ ಮಾತನಾಡುತ್ತಾರೆ, ಛೀ!

ನನಗೆ ರಾಜಕೀಯ ಅನುಭವ ಇಲ್ಲ. ಮಾತನಾಡಲು ಬರುವುದಿಲ್ಲವೆಂದು ಜೆಡಿಎಸ್ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ. ಮೊದಲು ಅವರು ಆಯ್ಕೆಯಾದಾಗ ಅವರಿಗೂ ಅನುಭವವಿತ್ತೆ? ಸಂತ್ತಿನಲ್ಲಿ ಅವರು ಏನು ಮಾತನಾಡಿದ್ದಾರೆ? ಅಲ್ಲಿ ಮಾತನಾಡದೆ ಇಲ್ಲಿ ಬಂದು ಮಾತನಾಡುತ್ತಾರೆ ಎಂದು ರಮ್ಯಾ ಚುನಾವಣಾ ಪ್ರಚಾರ ವೇಳೆ ತಿರುಗೇಟು ನೀಡಿದ್ದಾರೆ.

ದಿವ್ಯವಾಗಿ ಪ್ರತಿಸ್ಪಂದಿಸಿದ ದಿವ್ಯಸ್ಪಂದನ

ದಿವ್ಯವಾಗಿ ಪ್ರತಿಸ್ಪಂದಿಸಿದ ದಿವ್ಯಸ್ಪಂದನ

ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನನ್ನ ತಂದೆಯವರು ಮೃತಪಟ್ಟರು. ಆಗ ನಾನು ಅನಾಥೆಯಾದೆ ಅಂದುಕೊಂಡೆ. ಆದರೀಗ ನೀವೆಲ್ಲರೂ ಸಿಕ್ಕಿದ್ದೀರಿ. ನಾನೀಗ ಅನಾಥಳಲ್ಲ ಎಂದು ಮಾತುಮುಗಿಸುವ ಹೊತ್ತಿಗೆ ಸಿದ್ದರಾಮಯ್ಯ ಮತ್ತು ಅಂಬರೀಷ್ ಅವರುಗಳು ಇಲ್ಲೇ ಮನೆ ಮಾಡಿಕೊಂಡು ಇರುತ್ತೇನೆ ಎಂದು ಮತದಾರರ ಮುಂದೆ ಹೇಳಿಬಿಡು ಎಂದು ರಮ್ಯಾಗೆ ಗಂಟುಬಿದ್ದರು.

ಅದಕ್ಕೆ ದಿವ್ಯವಾಗಿ ಪ್ರತಿಸ್ಪಂದಿಸಿದ ದಿವ್ಯಸ್ಪಂದನ ನಾನು ಆಯ್ಕೆಯಾದರೆ ಮಾದೇಗೌಡ ಅವರ ಮನೆ ಅಥವಾ ಅಂಬರೀಷ್ ಅಂಕಲ್ ಮನೆಯಲ್ಲಿ ಅಥವಾ ನೀವು ಕರೆದರೆ ನಿಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ಮತದಾರರಿಗೆ ಭರಪೂರ್ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+