ಆಸ್ಟ್ರೋ ಮೋಹನ್ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ
ಬೆಂಗಳೂರು, ಆ. 19 : ಉದಯವಾಣಿ ದಿನಪತ್ರಿಕೆಯ ಹಿರಿಯ ನ್ಯೂಸ್ ಫೋಟೋಗ್ರಫರ್ ಆಗಿರುವ ಆಸ್ಟ್ರೋ ಮೋಹನ್ ಅವರ ಮೂರು ಚಿತ್ರಗಳು, ಹಂಗರಿಯ ಬುಡಾಪೆಸ್ಟ್ 4ನೇ ಏಜೆನ್ಸ್ ಅಂತಾರಾಷ್ಟ್ರೀಯ ಫೋಟೋಗ್ರಫಿ ಡಿಜಿಟಲ್ ಸಲಾನ್‌ಗೆ ಸ್ವೀಕೃತವಾಗಿವೆ. ವಿಶ್ವ ಫೋಟೋಗ್ರಫಿ ದಿನಾಚರಣೆಯಾದ ಆ.19ರಂದು ಆಸ್ಟ್ರೋ ಮೋಹನ್ ಅವರಿಗೆ ಅಭಿನಂದನೆಗಳು.
ಕಲರ್ ಡಿಜಿಟಲ್ ವಿಭಾಗದಲ್ಲಿ 'ಬ್ಲೂಮಿ ಬೀಚ್' ಮತ್ತು 'ದಿ ಬಫೆಲೋ ರೇಸ್' ಎಂಬ ಶೀರ್ಷಿಕೆಯ ಎರಡು ಚಿತ್ರಗಳು, ಹಾಗು ಮೋನೊಕ್ರೋಮ್ ವಿಭಾಗದಲ್ಲಿ 'ದಿ ಬಿಗ್ ಕಿಚನ್' ಎಂಬ ಶೀರ್ಷಿಕೆಯ ಇನ್ನೊಂದು ಛಾಯಾಚಿತ್ರ ಸ್ವೀಕೃತವಾಗಿವೆ. ಪ್ರದರ್ಶನಕ್ಕೆ ಸ್ವೀಕೃತವಾಗುವುದು ಯಾವು ಪ್ರಶಸ್ತಿಗೂ ಕಡಿಮೆಯಲ್ಲ.
ಅಂತಾರಾಷ್ಟ್ರೀಯ ಫೋಟೋಗ್ರಫಿ ಡಿಜಿಟಲ್ ಸಲಾನ್‌ನಲ್ಲಿ ಇಲ್ಲಿಯವರೆಗೆ ಇಬ್ಬರು ಭಾರತೀಯರು ಮಾತ್ರ ಆಯ್ಕೆಯಾಗಿದ್ದಾರೆ. ಅವರಲ್ಲಿ ಒಬ್ಬರು ಆಸ್ಟ್ರೋ ಮೋಹನ್. ಇವರ ಚಿತ್ರಗಳು ಆಗಸ್ಟ್ 31ರಂದು ಹಂಗರಿಯ ಬುಡಾಪೆಸ್ಟ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತವಾಗಲಿವೆ.
ಇತ್ತೀಚೆಗೆ ನಡೆದ ಇಂಡಿಯಾ ಇಂಟರ್ನ್ಯಾಷನಲ್ ಫೋಟೋಗ್ರಫಿ ಕೌನ್ಸಿಲ್ ಡಿಜಿಟಲ್ ಫೋಟೋ ಸ್ಪರ್ಧೆಯಲ್ಲಿ ಆಸ್ಟ್ರೋ ಮೋಹನ್ ಅವರ 'ದಿ ಬಿಗ್ ಕಿಚನ್' ಶೀರ್ಷಿಕೆಯ ನೆರಳು-ಬೆಳಕಿನ ಛಾಯಾಚಿತ್ರ ಮೂರನೇ ಬಹುಮಾನ ಪಡೆದಿತ್ತು. ಉದಯವಾಣಿಯ ಆಸ್ಟ್ರೋ ಮೋಹನ್ ಅವರು ಸೆರೆಹಿಡಿದಿರುವ ಮೂರು ಅದ್ಭುತ ಚಿತ್ರಗಳು ಸ್ಲೈಡ್ ನಲ್ಲಿವೆ ನೋಡಿರಿ. [ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು]

ದಿ ಬಫೆಲೋ ರೇಸ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿರುವ ಕಂಬಳದ ಚಿತ್ರವಿದು. ಗದ್ದೆಯ ನೀರನ್ನು ಚೆಲ್ಲಾಪಿಲ್ಲಿ ಮಾಡುತ್ತ ಓಡುವ ಕೋಣಗಳ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.

ಬ್ಲಾಮಿ ಬೀಚ್
ಆಗಸದ ಅಂಚಿನಲ್ಲಿ ಅಸ್ತಂಗತವಾಗುತ್ತಿರುವ ಭಾಸ್ಕರನ ರಂಗು, ಸಂಜೆಯ ಸೊಬಗು, ಕಡಲ ತೀರದ ಪ್ರಶಾಂತತೆ ಆಸ್ಟ್ರೋ ಮೋಹನ್ ಅವರ ಕ್ಯಾಮೆರಾದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಸಂಜೆಯ ರಂಗನ್ನೇ ರಂಗೇರಿಸುವಂತೆ ಮಾಡಿದೆ.

ದಿ ಬಿಗ್ ಕಿಚನ್
ನೆರಳು ಬೆಳಕನ್ನು ಛಾಯಾಚಿತ್ರಗಳಲ್ಲಿ ಸಮರ್ಥವಾಗಿ ಬಳಸಿಕೊಂಡವನು ಮಾತ್ರ ಯಶಸ್ವಿ ಛಾಯಾಚಿತ್ರಕಾರನಾಗಬಲ್ಲ.

ಕಂಗ್ರಾಟ್ಸ್ ಆಸ್ಟ್ರೋ ಮೋಹನ್
ಉದಯವಾಣಿಯ ಹಿರಿಯ ನ್ಯೂಸ್ ಛಾಯಾಚಿತ್ರಕಾರರಾಗಿರುವ ಆಸ್ಟ್ರೋ ಮೋಹನ್ ಅವರಿಗೆ ಅಭಿನಂದನೆಗಳು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications