ಚಿತ್ರಗಳಲ್ಲಿ ಕಂಡ ಭಾನುವಾರದ ಸುದ್ದಿಗಳು

ಬೆಂಗಳೂರು, ಆ.18 : ನವದೆಹಲಿಯಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಮಿತಿ ಮತ್ತು ನಾಯಕರ ಸಭೆ ನಡೆಯಿತು. ಸಭೆಗೆ ಆಗಮಿಸುವ ನಾಯಕರ ದೊಡ್ಡ-ದೊಡ್ಡ ಕಟೌಟ್ ಗಳು ಸಭೆ ನಡೆಯುತ್ತಿದ್ದ ಪ್ರದೇಶದಲ್ಲಿ ಕಾಣಿಸಿದವು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಯ ಕೇಂದ್ರಬಿಂದುವಾಗಿದ್ದರು.

ಓಡಿಶಾ : ಈರುಳ್ಳಿ ಬೆಲೆ ಸಾಮಾನ್ಯ ಜನರಿಗೆ ತೊಂದರೆ ಉಂಟುಮಾಡಿದೆ ಎಂಬುದನ್ನು ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಶಿಲ್ಪಕಲೆಗಳ ಮೂಲಕ ಒಡಿಶಾದ ಪುರಿ ಬೀಚ್ ನಲ್ಲಿ ಪ್ರದರ್ಶಿಸಿದರು.

ಐಬಿಎಲ್ : ಲಕ್ನೋದಲ್ಲಿ ನಡೆಯುತ್ತಿರುವ ಐಬಿಎಲ್ 2013 ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ದೆಹಲಿ ತಂಡದ ಆರುಂಧತಿ ಅವರ ವಿರುದ್ಧ ಹೈದರಾಬಾದ್ ಹಾಟ್ ಶಾಟ್ಸ್ ತಂಡದ ಸೈನಾ ನೆಹ್ವಾಲ್ ಜಯಗಳಿಸಿದರು.

ದಿಗ್ಗಜರ ಸಮ್ಮಿಲನ : ಶನಿವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಚಿನ್, ಸೌರವ್ ಗಂಗೂಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ಸಮಾರಂಭಕ್ಕೆ ಸಾಕ್ಷಿಯಾದರು.

ಕೋಲ್ಕತ್ತಾ : ವಿಶ್ವಪ್ರಸಿದ್ಧ ಬಂಗಾಳದ ಹುಲಿ ಅಲಿಪೋರ್ ಮೃಗಾಯಲದಲ್ಲಿ ಮರದ ತುಂಡಿನ ಮೇಲೆ ಆಟವಾಡುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು. (ಪಿಟಿಐ ಚಿತ್ರಗಳು)

ಕಟೌಟ್ ನಲ್ಲಿ ಮೋದಿ ಮೋಡಿ

ಕಟೌಟ್ ನಲ್ಲಿ ಮೋದಿ ಮೋಡಿ

ನವದೆಹಲಿಯಲ್ಲಿ ಭಾನುವಾರ ಆರಂಭವಾಗಿರುವ ಬಿಜೆಪಿ ಪ್ರಚಾರ ಸಮಿತಿ ಮತ್ತು ನಾಯಕರ ಸಭೆ ನಡೆಯುವ ಸಭಾಂಗಣದ ಬಳಿ ಕಟೌಟ್ ನಲ್ಲಿ ಪಕ್ಷದ ನಾಯಕರು ಕಂಡು ಬಂದಿದ್ದು ಹೀಗೆ.

ಕ್ರಿಕೆಟ್ ಲೋಕಸ ದಿಗ್ಗಜರು

ಕ್ರಿಕೆಟ್ ಲೋಕಸ ದಿಗ್ಗಜರು

ಭಾರತದ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್, ಸೌರವ್ ಗಂಗೂಲಿ ಮತ್ತು ಕರ್ನಾಟಕದ ರಾಹುಲ್ ದ್ರಾವಿಡ್, ಬೆಂಗಳೂರಿನಲ್ಲಿ ಶನಿವಾರ ನಡೆದ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೆರೆಸಿಕ್ಕಿದ್ದು ಹೀಗೆ.

ದಿಗ್ಗಜರ ಸಮ್ಮಿಲನ

ದಿಗ್ಗಜರ ಸಮ್ಮಿಲನ

ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ಕ್ರಿಕೆಟ್ ಲೋಕದ ದಿಗ್ಗಜರಾದ ರಿಚರ್ಡ್ ಹ್ಯಾಡ್ಲಿ, ಸೌರವ್ ಗಂಗೂಲಿ, ಸಚಿನ್ ಮುಂತಾದ ಕ್ರಿಕೆಟಿಗರು ಪಾಲ್ಗೊಂಡಿದ್ದರು.

ಪಾಕಿಸ್ತಾನಕ್ಕೆ ಒಳ್ಳೆ ಬುದ್ದಿ ಬರಲಿ

ಪಾಕಿಸ್ತಾನಕ್ಕೆ ಒಳ್ಳೆ ಬುದ್ದಿ ಬರಲಿ

ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ. ಪೂಂಚ್ ನಲ್ಲಿ ಪಾಕಿಸ್ತಾನ ಸಿಡಿಸಿದ ಸ್ಫೋಟಗೊಳ್ಳದ ರಾಕೆಟ್ ಅನ್ನು ಗ್ರಾಮಸ್ಥರು ಪ್ರದರ್ಶಿಸುತ್ತಿರುವುದು.

ತಿರುಪತಿಯಲ್ಲಿ ತೆಲಂಗಾಣ ಕಿಚ್ಚು

ತಿರುಪತಿಯಲ್ಲಿ ತೆಲಂಗಾಣ ಕಿಚ್ಚು

ತಿರುಪತಿಯಲ್ಲಿ ಭಾನುವಾರ ಅಖಂಡ ಆಂಧ್ರಪ್ರದೇಶಕ್ಕಾಗಿ ನಡೆಸಿ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ತೆಲಂಗಾಣ ರಚನೆ ಖಂಡಿಸಿ ತಿರುಪತಿ ತಿರುಮಲ ನಡುವಿ ಟ್ಯಾಕ್ಸಿ ಸಂಚಾರವನ್ನು ಭಾನುವಾರ ಸ್ಥಗಿತಗೊಳಿಸಲಾಗಿತ್ತು.

ಬೀಚ್ ನಲ್ಲೂ ಈರುಳ್ಳಿ ನೋಡಿ

ಬೀಚ್ ನಲ್ಲೂ ಈರುಳ್ಳಿ ನೋಡಿ

ಈರುಳ್ಳಿ ಬೆಲೆ ಸಾಮಾನ್ಯ ಜನರಿಗೆ ತೊಂದರೆ ಉಂಟುಮಾಡಿದೆ ಎಂಬುದನ್ನು ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಶಿಲ್ಪಕಲೆಗಳ ಮೂಲಕ ಒಡಿಶಾದ ಪುರಿ ಬೀಚ್ ನಲ್ಲಿ ಪ್ರದರ್ಶಿಸಿದರು. ಈರುಳ್ಳಿ ಬೀಚ್ ನಲ್ಲಿಯೂ ಸಖತ್ ಸುದ್ದಿ ಮಾಡುತ್ತಿದೆ.

ಹುಲಿಯ ಆಟ, ತುಂಟಾಟ

ಹುಲಿಯ ಆಟ, ತುಂಟಾಟ

ವಿಶ್ವಪ್ರಸಿದ್ಧ ಬಂಗಾಳದ ಹುಲಿ ಅಲಿಪೋರ್ ಮೃಗಾಯಲದಲ್ಲಿ ಮರದ ತುಂಡಿನ ಮೇಲೆ ಆಟವಾಡುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.

ಮಳೆಯ ಆರ್ಭಟ

ಮಳೆಯ ಆರ್ಭಟ

ಅಲಹಾಬಾದ್ ನಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಶನಿವಾರ ಸುರಿದ ಭಾರೀ ಮಳೆಗೆ ಅಲಹಾಬಾದ್ ನ ಸಲೋರಿ ಬಡಾವಣೆ ಜಲಾವೃತವಾಗಿರುವುದು ಹೀಗೆ.

ಅಬ್ಬಾ ಕೆಳಗೆ ಬಂತು

ಅಬ್ಬಾ ಕೆಳಗೆ ಬಂತು

ಬಂಗಾಳದ ಹುಲಿ ಅಲಿಪೋರ್ ಮೃಗಾಯಲದಲ್ಲಿ ಚಿರತೆಯೊಂದು ಗೋಡೆಯ ಮೇಲಿಂದ ಹಾರಿದ ಕ್ಷಣ ಆಕರ್ಷಕವಾಗಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.

ರಘು ದೀಕ್ಷಿತ್ ಸಂಗೀತ ಸುಧೆ

ರಘು ದೀಕ್ಷಿತ್ ಸಂಗೀತ ಸುಧೆ

ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸದಲ್ಲಿ ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಗೆಲುವಿನ ಹೊಡೆತ

ಗೆಲುವಿನ ಹೊಡೆತ

ಲಕ್ನೋದಲ್ಲಿ ನಡೆಯುತ್ತಿರುವ ಐಬಿಎಲ್ 2013 ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ದೆಹಲಿ ತಂಡದ ಆರುಂಧತಿ ಅವರ ವಿರುದ್ಧ ಹೈದರಾಬಾದ್ ಹಾಟ್ ಶಾಟ್ಸ್ ತಂಡದ ಸೈನಾ ನೆಹ್ವಾಲ್ ಜಯಗಳಿಸಿದರು.

ಮೆಟ್ರೋ ಯೋಜನೆಯ ವೀಕ್ಷಣೆ

ಮೆಟ್ರೋ ಯೋಜನೆಯ ವೀಕ್ಷಣೆ

ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ತಮ್ಮ ನಿವಾಸದಲ್ಲಿ ಲಕ್ನೋದಲ್ಲಿನ ಮೆಟ್ರೋ ಯೋಜನೆಯ ನಕ್ಷೆಯನ್ನು ಪರಿಶೀಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+