ಸಿಂಧು ರಕ್ಷಕ್ ದುರಂತ : 6 ಶವಗಳು ಪತ್ತೆ

ಮುಂಬೈ, ಆ.18 : ಸ್ಫೋಟ ಮತ್ತು ಬೆಂಕಿ ಆಕಸ್ಮಿಕದಿಂದ ಮುಂಬೈನಲ್ಲಿ ದುರಂತಕ್ಕೀಡಾದ ಸಿಂಧು ರಕ್ಷಕ್ ಸಬ್ ಮೆರಿನ್ ನಲ್ಲಿ ಇದುವರೆಗೂ 6 ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆಗೆ ರಷ್ಯಾ ಸೇನೆಯೂ ಕೈ ಜೋಡಿಸಿದೆ.

ಕಳೆದ ಬುಧವಾರ ಮುಂಬೈನ ಹೊರವಲಯದಲ್ಲಿ ನಡೆದ ಸಿಂಧು ರಕ್ಷಕ್ ಸಬ್ ಮೆರಿನ್ ಸ್ಫೋಟದಲ್ಲಿ 18 ಮಂದಿ ಕಣ್ಮರೆ ಆಗಿದ್ದರು. ಶುಕ್ರವಾರ ಮೂವರು ಮೃತದೇಹಗಳು ಪತ್ತೆಯಾಗಿತ್ತು. ಭಾನುವಾರ ಮತ್ತ ಮೂವರ ದೇಹಗಳು ಪತ್ತೆಯಾಗಿವೆ.

Sindhurakshak,

ಸಬ್ ಮೆರಿನ್ ನಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಶೋಧ ಕಾರ್ಯಕ್ಕೆ, ರಷ್ಯಾ ಸೇನೆಯ ನುರಿತ ನೌಕಾದಳದ ತಜ್ಞರು ಸಹಾಯ ಮಾಡುತ್ತಿದ್ದಾರೆ. ಸಬ್ ಮೆರಿನ್ ನ ಎರಡನೇ ಭಾಗಿಲನ್ನು ತೆರೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಶಸ್ತ್ರಾಸ್ತ್ರ ಸ್ಫೋಟ : ಸಿಂಧು ರಕ್ಷಕ್ ಸಬ್ ಮೆರಿನ್ ನಲ್ಲಿ ಸ್ಫೋಟ ಸಂಭವಿಸಲು ಶಸ್ತಾಸ್ತ್ರ ಸ್ಫೋಟವೇ ಮೂಲ ಕಾರಣ ಎಂದು ರಷ್ಯಾದ ನೌಕಾದಳದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಸಬ್‌ ಮೆರಿನ್ ಗಳಿಗೆ ರಾತ್ರಿ ವೇಳೆಯಲ್ಲಿ ಶಸ್ತ್ರಾಸ್ತ್ರಗಳನ್ನು ಲೋಡ್ ಮಾಡುತ್ತಾರೆ.

ಸ್ಫೋಟ ಸಂಭವಿಸುವಾಗ ಸಿಂಧು ರಕ್ಷಕ್ ಸಬ್ ಮೆರೀನ್ ಗೆ ಸಹ ಶಸ್ತ್ರಾಸ್ತ್ರಗಳನ್ನು ತುಂಬಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಶಸ್ತ್ರಾಸ್ತ್ರಗಳನ್ನು ತುಂಬುವಾಗ ನೌಕೆಯಲ್ಲಿ ಉಂಟಾದ ಒತ್ತಡದಿಂದಾಗಿ ನೌಕೆ ಸ್ಫೋಟಗೊಂಡಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. (ಸಿಂಧು ರಕ್ಷಕ್ ದುರಂತ : ಮೂರು ದೇಹಗಳು ಪತ್ತೆ)

ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಭಾರತೀಯ ನೌಕಾದಳಕ್ಕೆ ರಷ್ಯಾ ಸೇನೆ ಸಹಾಯ ಮಾಡಲಿದೆ ಎಂದು ರಷ್ಯಾ ಉಪಾಧ್ಯಕ್ಷ ಡಿಮಿಟ್ರಿ ರೊಗೊಜಿನ್ ಹೇಳಿದ್ದಾರೆ. ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+