ದಿನಕ್ಕೆ ನಾಲ್ಕಾರು ಕಪ್ ಕಾಫಿ ಕುಡಿದರೆ ಸಾವು ಉಚಿತ

four-cups-of-coffee-a-day-lead-to-higher-mortality-rate
ವಾಷಿಂಗ್ಟನ್, ಆಗಸ್ಟ್ 17: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹವಾ ಹೇಗಿದೆಯಪ್ಪಾ ಅಂದರೆ ಎರಡು ಲೋಟ ಹೆಚ್ಚಿಗೆಯೇ ಕಾಫಿ ಹೀರುವಾ ಅನ್ನೋ ಹಾಗಿದೆ. ಆದರೆ ನಮ್ಮನ್ನು ಬೆಚ್ಚಗಿಡುವ ಕಾಫಿ ಎಂಬ ಘಮ ಘಮ ಪೇಯವನ್ನು ಹಾಗೆ ಹೀರುವ ಮುನ್ನ ಈ ಲೇಖನವನ್ನೊಮ್ಮೆ ಓದಿಬಿಡಿ.

ಏನಿಲ್ಲ! ವಾರಕ್ಕೆ 28 ಕಪ್ (7x4) ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರೋ ಮುಗಿಯಿತು ನಿಮ್ಮ ಕತೆ. ಹೌದು ಬೇಗನೇ ಅಂದರೆ ಶೇ. 21ರಷ್ಟು ಪ್ರಮಾಣದಲ್ಲಿ ಬೇಗನೇ ಸಾಯುವ ಸಾಧ್ಯತೆ ಇದೆಯಂತೆ. ಇದಕ್ಕೆ ಹೆಣ್ಣು- ಗಂಡು ಎಂಬ ಬೇಧವಿಲ್ಲ.

ಅಮೆರಿಕದ ರಾಷ್ಟ್ರೀಯ ಕಾಫಿ ಒಕ್ಕೂಟ 55 ವರುಷಕ್ಕಿಂತ ಕಡಿಮೆ ವಯಸ್ಸಿನವರು ಇಂತಹ ಚಟ ಹತ್ತಿಸಿಕೊಂಡಿದ್ದರೆ ಅವರಲ್ಲಿ ಸಾಯುವ ಪ್ರಮಾಣ ಶೇ. 50ರಷ್ಟು ಹೆಚ್ಚಿಗೆ ಇರುತ್ತದೆ. ಇದರ್ಥ ಯುವಜನತೆ ಕಾಫಿ ಕುಡಿಯುವುದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದೇ.

1979 ರಿಂದ 1998ರ ನಡುವೆ ಸುಮಾರು 16 ವರ್ಷಗಳ ಕಾಲ 40 ಸಾವಿರ ಪುರುಷರು ಮತ್ತು ಮಹಿಳೆಯರನ್ನು ಪರೀಕ್ಷೆ/ ಸಮೀಕ್ಷೆಗೊಳಪಡಿಸಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿ ತಿಳಿಸಿದೆ. ಈ ಅವಧಿಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿತ್ತು.

ಅದರ ಜತೆಗೆ ಮುಖ್ಯವಾಗಿ ಕಾಫಿ ಅಭ್ಯಾಸವನ್ನು ವಿಶೇಷವಾಗಿ ಅಧ್ಯಯನ ಮಾಡಲಾಯಿತು. ಈ ಅವಧಿಯಲ್ಲಿ 2,512 ಮಂದಿ ಕಾಫಿ ಸೇವನೆಯಿಂದಲೇ ಮರಣ ಹೊಂದಿದ್ದಾರೆ ಎಂದು ಖಚಿತವಾಗಿ ಹೇಳಲಾಗಿದೆ. Mayo Clinic Proceedings ಜರ್ನಲಿನಲ್ಲಿ ಈ ವರದಿ ಪ್ರಕಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+