ಸಿಂಧು ರಕ್ಷಕ್ ದುರಂತ : ಮೂರು ದೇಹಗಳು ಪತ್ತೆ
ಮುಂಬೈ, ಆ.16 : ಬುಧವಾರ ಮುಂಬೈನ ಡಾಕ್‌ಯಾರ್ಡ್‌ನಲ್ಲಿದ್ದ ಐಎನ್‌ಎಸ್ ಸಿಂಧು ರಕ್ಷಕ್ ಸಬ್ ಮೆರಿನ್ ಸ್ಪೋಟ ದುರಂತದಲ್ಲಿ ನಾಪತ್ತೆಯಾಗಿದ್ದ 18 ಸಿಬ್ಬಂದಿಯ ಪೈಕಿ ಮೂವರ ಮೃತ ದೇಹಗಳು ಶುಕ್ರವಾರ ದೊರಕಿವೆ.
ಶುಕ್ರವಾರ ಪತ್ತೆಯಾದ ಮೃತದೇಹಗಳು ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯುವುದು ಕಷ್ಟವಾಗಿದೆ. ಮೃತ ದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 15 ಮಂದಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಬುಧವಾರ ಐಎನ್‌ಎಸ್ ಸಿಂಧುರಕ್ಷಕ್ ಸಬ್ ಮೆರಿನ್‌ನಲ್ಲಿ ಸರಣಿ ಸ್ಫೋಟ ಸಂಭವಿಸಿ ಭಾರರೀ ಪ್ರಮಾಣದ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ವೇಳೆ ಸಬ್ ಮೆರಿನ್‌ನಲ್ಲಿದ್ದ ಮೂವರು ಅಧಿಕಾರಿಗಳು ಸೇರಿದಂತೆ 18 ಸಿಬ್ಬಂದಿ ನಾಪತ್ತೆಯಾಗಿದ್ದರು.
ಗುರುವಾರ ರಕ್ಷಣಾ ಸಚಿವಾಲಯ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಅಧಿಕಾರಿಗಳು ಹಾಗೂ 15 ಸಿಬ್ಬಂದಿಗಳ ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಲೆ.ಕಮಾಂಡರ್ ಗಳಾದ ನಿಖಿಲೇಶ್ ಪಾಲ್, ಅಲೋಕ್ ಕುಮಾರ್ ಮತ್ತು ಆರ್ ವೆಂಕಟರಾಜ್ ನಾಪತ್ತೆಯಾದ ಅಧಿಕಾರಿಗಳು ಎಂದು ಗುರುತಿಸಲಾಗಿದೆ.
ಸಿಬ್ಬಂದಿಗಳು : ಸಂಜೀವ್ ಕುಮಾರ್, ಕೆ.ಸಿ. ಉಪಾಧ್ಯಾಯ, ಟಿಮೋಟಿ ಸಿನ್ಹಾ, ಕೇವಲ್ ಸಿಂಗ್, ಸುನಿಲ್ ಕುಮಾರ್, ದಾಸರಿ ಪ್ರಸಾದ್, ಲಿಜು ಲಾರೆನ್ಸ್, ರಾಜೇಶ್ ತೂಟಿಕ, ಅಮಿತ್ ಕೆ ಸಿಂಗ್, ಅತುಲ್ ಶರ್ಮಾ ಮತ್ತು ವಿಕಾಶ್ ಇ, ನರುತ್ತಮ್ ದಿಯೋರಿ, ಮಲಯ್ ಹಲ್ದಾರ್, ವಿಷ್ಣು ವಿ ಮತ್ತು ಸೀತಾರಾಂ ಬಡಪಲ್ಲಿ. (ಸಬ್ ಮರಿನ್ ಬೆಂಕಿ ಅನಾಹುತದಲ್ಲಿ 18 ಮಂದಿ ಹತ)












Click it and Unblock the Notifications