Get Updates
Get notified of breaking news, exclusive insights, and must-see stories!

ಮಂಗಳೂರಲ್ಲಿ ಲೇಖಕ ಚೇತನ್ ಭಗತ್ ಉಪನ್ಯಾಸ

Chetan Bhagat to inspire young minds of Mangalore
ಮಂಗಳೂರು, ಆ.15: ಖ್ಯಾತ ಲೇಖಕ ಹಾಗೂ ಬರಹಗಾರ ಚೇತನ್ ಭಗತ್ ಆ.24 ರಂದು ಮಂಗಳೂರಿಗೆ ಆಗಮಿಸಿಲಿದ್ದಾರೆ. ನಗರದ ಎಮ್.ಜಿ. ರಸ್ತೆಯಲ್ಲಿರುವ ಟಿ.ಎಮ್.ಎ. ಪೈ ಸಭಾಂಗಣದಲ್ಲಿ ಉಪನ್ಯಾಸ ನೀಡಲಿದ್ದಾರೆ.

'ನಾಯಕತ್ವ ಗುಣ ಹಾಗೂ ವ್ಯಕ್ತಿ ವಿಕಸನ' ಇನ್ನಿತರ ವಿಚಾರಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮಣಿಪಾಲ್ ಏಸ್ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ಮುಖ್ಯ ನಿರ್ವಾಹಣಕ ಅಧಿಕಾರಿ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಹಾಗೂ ವಿವಿಧ ಉದ್ಯೋಗ ಸಂಸ್ಥೆಗಳಿಗೆ ಬಹು ಉಪಯೋಗಿಯಾಗಿರುತ್ತದೆ ಎಂದರು.

ಪ್ರವೇಶಕ್ಕಾಗಿ ಟಿಕೇಟ್ ನೀಡಲಿದ್ದು, ಆಸಕ್ತರು ಪ್ರಸಾದ್-96861 12588, ನಾಯಕ್-98808 11455

ಅಥವಾ ಇ-ಮೇಲ್ [email protected], [email protected] ಸಂಪರ್ಕಿಸಬಹುದಾಗಿದೆ.

ಇದೇ ವೇದಿಕೆಯಲ್ಲಿ ಈ ಮುಂಚೆ ಶಿವ್ ಖೇರಾ ಅವರು ಭಾಷಣ ಮಾಡಿದ್ದರು. ಈಗ 3 ಈಡಿಯಟ್ಸ್, ಕಾಯ್ ಪೊ ಛೇ, 2 ಸ್ಟೇಟ್ಸ್ ಕೃತಿಗಳನ್ನು ರಚಿಸಿರುವ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ಸ್ ಗಳ ನೆಚ್ಚಿನ ಲೇಖಕ ಚೇತನ್ ಭಗತ್ ಅವರನ್ನು ಆಹ್ವಾನಿಸಲಾಗಿದೆ. ಆಹ್ವಾನವನ್ನು ಚೇತನ್ ಅವರು ಒಪ್ಪಿಕೊಂಡಿದ್ದಾರೆ. ಅವರ ಉಪನ್ಯಾಸ ನಂತರ 30 ನಿಮಿಷಗಳ ಕಾಲ ಸಂವಾದ ಕಾರ್ಯಕ್ರಮವಿರುತ್ತದೆ ಎಂದು ಕುಂಬ್ಳೆ ನರಸಿಂಹ ಪ್ರಭು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+