ಊಟಿ ಡ್ರೈವರಿಗೆ ಹೃದಯಾಘಾತ: 40 ಪ್ರಯಾಣಿಕರು ಬಚಾವ್

ooty-driver-ramasami-dies-of-heart-attack-in-bus-passengers-safe
ಉದಕಮಂಡಲ (ಊಟಿ), ಆಗಸ್ಟ್ 14: ಸುಮಾರು 40 ಪ್ರಯಾಣಿಕರು ಊಟಿ ಪ್ರವಾಸ ಮುಗಿಸಿಕೊಂಡು ಮಂಗಳವಾರ ಮಧ್ಯಾಹ್ನ ಸಂತೋಷದಿಂದ ಈರೋಡಿಗೆ ವಾಪಸಾಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ರಸ್ತೆ ಬದಿಗೆ 600 ಅಡಿ ಆಳದ ಕಂದಕವಿದ್ದಾಗ ಅವರು ಸಂಚರಿಸುತ್ತಿದ್ದ ಬಸ್ಸು ತುರ್ತಾಗಿ ನಿಂತುಬಿಟ್ಟಿದೆ. ಆತಂಕದಿಂದ ಕೆಲ ಪ್ರಯಾಣಿಕರು ಬಸ್ ಚಾಲಕನತ್ತ ಧಾವಿಸಿದಾಗ ಆತನ ಹೃದಯವೇ ಸ್ತಬ್ಧವಾಗಿದ್ದು ಕಂಡುಬಂದಿದೆ.

ಏನಾಯ್ತು ಅಂದರೆ 52 ವರ್ಷದ ರಾಮಸಾಮಿ ಅವರು ತಮಿಳುನಾಡಿನ ಸದರಿ ಸರಕಾರಿ ಬಸ್ಸನ್ನು ಊಟಿಯಿಂದ ಘಟ್ಟ ಪ್ರದೇಶದಲ್ಲಿ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಆದರೆ ಸುಮಾರು 25ಕಿಮೀ ದೂರ ಚಲಿಸುತ್ತಿದ್ದಂತೆ ಬುರ್ಲಿಯಾರ್ ಸಮೀಪ ಡ್ರೈವರ್ ರಾಮಸಾಮಿಗೆ ಎದೆನೋವು ಕಾಣಿಸಿಕೊಂಡಿದೆ. ಇನ್ನೇನು ಸತ್ತೇ ಹೋದೆ ಎಂಬುವಷ್ಟು ನೋವು ಅವರನ್ನು ಬಾಧಿಸಿದೆ.

ಆದರೆ ಹಿಂದಿರುಗಿ ನೋಡಿದ ರಾಮಸಾಮಿಗೆ 40 ಮಂದಿ ಸುಖ ಪ್ರಯಾಣದಲ್ಲಿರುವುದು ಕಂಡಿದೆ. ಪರಲೋಕಕ್ಕೆ ಪಯಣಿಸುವುದಾದರೆ ತಾನೊಬ್ಬನೇ ಹೋಗುವೆ ಎಂಬಂತೆ ನಿರ್ಧರಿಸಿ ರಾಮಸಾಮಿ ಮೊದಲು ಬಸ್ಸನ್ನು ಸುರಕ್ಷಿತವಾಗಿ ರಸ್ತೆ ಬದಿ ನಿಲ್ಲಿಸಿ, ಎಲ್ಲರಿಗೂ ಅಂತಿಮ ಗುಡ್ ಬೈ ಹೇಳುತ್ತಾ, ತನಗೆ ಬದುಕು ನೀಡಿದ್ದ ಸ್ಟೀರಿಂಗ್ ವೀಲ್ ಅನ್ನು ಎದೆಗಪ್ಪಿಕೊಂಡಿದ್ದಾರೆ.

15 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಚಾಲಕ ರಾಮಸ್ವಾಮಿಯೊಬ್ಬರನ್ನು ಬಿಟ್ಟು ಉಳಿದಷ್ಟೂ ಮಂದಿ ಬದುಕುಳಿದಿದ್ದಾರೆ. ತಕ್ಷಣವೇ ಕೂನೂರು ಮತ್ತು ಮೆಟ್ಟೂರುಪಾಳ್ಯಂ ಕಡೆಗಳಿಂದ ತುರ್ತು ಸೇವೆಗಳು ಹಾಜರಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+