ಸೋಧಿಗೆ ಖೇಲ್ ರತ್ನ, ಕೊಹ್ಲಿಗೆ ಅರ್ಜುನ ಪ್ರಶಸ್ತಿ?
ನವದೆಹಲಿ, ಆ.13: ವಿಶ್ವಕಪ್ ಶೂಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶೂಟರ್ ರೊಂಜನ್ ಸೋಧಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಗೆ ಅರ್ಜುನ ಪ್ರಶಸ್ತಿ ಸೇರಿದಂತೆ ಕ್ರೀಡಾಕ್ಷೇತ್ರದ 14 ಜನರನ್ನು ಆಯ್ಕೆ ಸಮಿತಿ ಪ್ರಶಸ್ತಿಗೆ ಹೆಸರಿಸಿದೆ.
ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚುಗಳಿಸಿರುವ ಭಾರತದ ಪ್ರಥಮ ಆಟಗಾರ್ತಿ ಬ್ಯಾಡ್ಮಿಂಟನ್ ನ ಉದಯೋನ್ಮುಖ ತಾರೆ ಪಿ.ವಿ.ಸಿಂಧು ಕೂಡ ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2010ರ ಕಾಮನ್ ವೆಲ್ತ್ ಕ್ರೀಡಾಕೂಟ ಪದಕ ವಿಜೇತೆ ರೆಂಜೀತ್ ಮಹೇಶ್ವರಿ, ಗಂಗ್ ಜೀತ್ ಭುಲ್ಲರ್ ಅವರು ಕೂಡ 2012 ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶೇಷವೆಂದರೆ ಖೇಲ್ ರತ್ನ ಪ್ರಶಸ್ತಿ ಮೂರು ಬಾರಿಯೂ ಶೂಟರ್ ಗಳಿಗೆ ಸಂದಿದೆ. 2011ರ ಪ್ರಶಸ್ತಿ ಗಗನ್ ನಾರಂಗ್ ಪಾಲಾಗಿದ್ದರೆ, 2012ರ ಪ್ರಶಸ್ತಿ ವಿಜಯ್ ಕುಮಾರ್ ಗೆ ಸಂದಿತ್ತು.

ಕವಿತಾ ಚಾಹಲ್, ಕುಸ್ತಿಪಟು ಯೋಗೀಶ್ವರ್‌ದತ್ ಜೋತ್ಸ್ನಾ ಚಿನ್ನಪ್ಪ, ಸಾಬಾ ಅಂಜುಮ್, ಮೌಮಾದಾಸ್, ನೇಹಾರತಿ, ರಾಜಕುಮಾರಿ ರಾಥೋಡ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಿಲ್ಲುಗಾರ ಚೆಕ್ರೋವೋಲು ಸ್ವುರೋ ಮತ್ತಿತರರು.
ಟ್ರಾಪ್ ಶೂಟರ್ ರೊಂಜನ್ ಸೋಧಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರೆ. ಅರ್ಜುನ ಪ್ರಶಸ್ತಿಗೆ ವಿರಾಟ್ ಕೊಹ್ಲಿ(ಕ್ರಿಕೆಟ್), ಚೆಕ್ರೋವೊಲು ಸ್ವುರೊ(ಆರ್ಚರಿ) ರಂಜಿತ್ ಮಹೇಶ್ವರಿ(ಅಥ್ಲೆಟಿಕ್ಸ್), ಪಿ.ವಿ.ಸಿಂಧು(ಬ್ಯಾಡ್ಮಿಂಟನ್), ಕವಿತಾ ಚಹಾಲ್(ಬಾಕ್ಸಿಂಗ್), ರೂಪೇಶ್ ಶಾ(ಸ್ನೂಕರ್), ಗಗನ್ ಜೀತ್ ಭುಲ್ಲಾರ್(ಗಾಲ್ಫ್), ಸಾಬಾ ಅಂಜುಮ್(ಹಾಕಿ), ರಾಜಕುಮಾರಿ ರಾಥೋಡ್(ಶೂಟಿಂಗ್), ಜೋತ್ಸ್ನಾ ಚಿನ್ನಪ್ಪ(ಸ್ಕ್ಯಾಷ್), ಮೌಮಾದಾಸ್(ಟೇಬಲ್ ಟೆನಿಸ್) ನೇಹಾ ರಥಿ(ಕುಸ್ತಿ), ಧರ್ಮೇಂದ್ರ ದಲಾಲ್ (ಕುಸ್ತಿ), ಅಮಿತ್ ಕುಮಾರ್ ಸರೋಹಾ(ಪ್ಯಾರಾ ಸ್ಪೋರ್ಟ್ಸ್) ಇವರ ಹೆಸರು ಪ್ರಶಸ್ತಿಗೆ ಶಿಫಾರಸು ಗೊಂಡಿದೆ. (ಪಿಟಿಐ)












Click it and Unblock the Notifications