ಡೆಕ್ಕನ್ ಕ್ರಾನಿಕಲ್ ಟ್ರೇಡ್ ಮಾರ್ಕ್ ಹರಾಜು!

IDBI Bank puts Deccan Chronicle's newspaper titles on the block
ಹೈದರಾಬಾದ್, ಆ.13: ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ಡೆಕ್ಕನ್ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ ಲಿ. (ಡಿಸಿಎಚ್ಎಲ್) ದಿವಾಳಿ ಅಂಚು ತಲುಪಿದ್ದು, ಕಂಪನಿಯ ಟ್ರೇಡ್ ಮಾರ್ಕ್ ಅನ್ನು ಐಡಿಬಿಐ ಬ್ಯಾಂಕ್ ಮತ್ತೊಮ್ಮೆ ಹರಾಜು ಹಾಕಲು ಸಿದ್ಧತೆ ನಡೆಸಿದೆ. 2012ರಲ್ಲಿ ಸಂಸ್ಥೆ ದಿವಾಳಿ ಹೊಂದಿದಾಗ ಈ ಭೀತಿ ಎದುರಿಸಿತ್ತು.

ಡಿಸಿಎಚ್ ಎಲ್ ಪ್ರಕಟಣೆಯ ಡೆಕ್ಕನ್ ಕ್ರಾನಿಕಲ್, ದಿ ಏಷ್ಯನ್ ಏಜ್, ಆಂಧ್ರ ಭೂಮಿ ಹಾಗೂ ಫೈನಾನ್ಶಿಯಲ್ ಕ್ರಾನಿಕಲ್ ಟ್ರೇಡ್ ಮಾರ್ಕ್ ಗಳನ್ನು ಅಡಮಾನ ಇಟ್ಟಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈಗ ಈ ಟ್ರೇಡ್ ಮಾರ್ಕ್ ಗಳು ಹರಾಜಿಗಿಡಲಾಗಿದ್ದು, ಅತಿ ಹೆಚ್ಚು ಬಿಡ್ ಮಾಡುವ ಸಂಸ್ಥೆ ಪಾಲಾಗಲಿದೆ.

ಐಡಿಬಿಐ ಬ್ಯಾಂಕ್ ನಿಂದ 250 ಕೋಟಿ ಸಾಲ ಪಡೆಯಲು ಟಿ. ವಿ. ವೆಂಕಟರಾಮ್ ರೆಡ್ಡಿ ಹಾಗೂ ಟಿ. ವಿನಾಯಕ್ ರವಿ ರೆಡ್ಡಿ ಅವರ ಜಂಟಿ ಮಾಲೀಕತ್ವದ ಡಿಸಿಎಚ್ ಎಲ್ ಟ್ರೇಡ್ ಮಾರ್ಕ್ ಅನ್ನು ಅಡವಿಟ್ಟಿದ್ದರು. ಇದು ಸೇರಿದಂತೆ ಸುಮಾರು 18 ಆರ್ಥಿಕ ಸಂಸ್ಥೆಗಳಿಗೆ ಸುಮಾರು 4000 ಕೋಟಿ ರು ಗೂ ಅಧಿಕ ಸಾಲವನ್ನು ಹಿಂತಿರುಗಿಸಲು ಆಗದೆ ಡಿಸಿಎಚ್ ಎಲ್ ಒದ್ದಾಡುತ್ತಿದೆ.

ಹೀಗಾಗಿ ಡಿಸಿಎಚ್ ಎಲ್ ನ ಮಾಧ್ಯಮ ಸಂಸ್ಥೆಗಳ ಟ್ರೇಡ್ ಮಾರ್ಕ್ ಗಳನ್ನು ಪತ್ಯೇಕವಾಗಿ ಅಥವಾ ಒಟ್ಟಾಗಿ ಯಾರಾದರೂ ಖರೀದಿಸಬಹುದಾಗಿದೆ ಎಂದು ಬಿಡ್ಡಿಂಗ್ ಗೆ ಆಹ್ವಾನ ನೀಡಲಾಗಿದೆ.

ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ನ ಪರಿಸ್ಥಿತಿ ಈ ರೀತಿ ಇದ್ದರೂ ಷೇರುಪೇಟೆ ಮಾತ್ರ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಮಂಗಳವಾರ ಡಿಸಿಎಚ್ ಎಲ್ ಷೇರುಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಬಿಎಸ್ ಇನಲ್ಲಿ 2.34ರು ನಂತೆ ಶೇ 4 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ ಕಳೆದ 30 ದಿನಗಳಲ್ಲಿ ಸಂಸ್ಥೆ ಯಾವುದೇ ವಹಿವಾಟು ನಡೆಸಿಲ್ಲ.

ಐಪಿಎಲ್ ತಂಡ ಕೂಡಾ ಹರಾಜು : ಬಿಸಿಸಿಐನಿಂದ ಅನುಮತಿ ಪಡೆದ ನಂತರ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿ(DHCL) ಸಂಸ್ಥೆ ಡೆಕ್ಕನ್ ಚಾರ್ಜರ್ಸ್ ತಂಡದ ಮಾರಾಟಕ್ಕೆ ಟೆಂಡರ್ ಕರೆದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾರಾಟಕ್ಕೆ ಸಿದ್ಧವಾಗಿರುವ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಖರೀದಿಸಿದ್ದಾರೆ ಎಂಬ ಗಾಳಿ ಸುದ್ದಿ ಕೂಡಾ ಹಬ್ಬಿತ್ತು. ಆದರೆ, ಸುದ್ದಿಯನ್ನು ತಂಡದ ಒಡತಿ ಗಾಯತ್ರಿ ರೆಡ್ಡಿ ಅಲ್ಲಗೆಳೆದಿದ್ದರು.

ಡೆಕ್ಕನ್ ಚಾರ್ಜರ್ಸ್ ತಂಡ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಳಪೆ ಸಾಧನೆ ಮುಂದುವರೆಸಿತ್ತು. ನಂತರ ತಂಡವನ್ನು ಸನ್ ನೆಟ್ವರ್ಕ್ ಖರೀದಿಸಿ ಸನ್ ರೈಸರ್ಸ್ ಹೆಸರಿನಲ್ಲಿ ಐಪಿಎಲ್ ನಲ್ಲಿ ಕಣಕ್ಕಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+