ಕರಾವಳಿಯಲ್ಲಿ ಈದ್ ಉಲ್ ಫಿತ್ರ್ ಸಂಭ್ರಮಾಚರಣೆ

ಮಂಗಳೂರು, ಆ.8: ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನವು ಕೇರಳದ ಕಾಪಾಡ್ ನಲ್ಲಿ ಆ.7 ರಂದು ಆಗಿರುವುದರಿಂದ ಆ.8 ರಂದು ಕರ್ನಾಟಕದ ಕರಾವಳಿ ಭಾಗದಲ್ಲಿ ಈದ್ ಉಲ್ ಫಿತ್ರ್ ಆಚರಿಸಲಾಗುತ್ತಿದೆ ಎಂದು ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್ ತಿಳಿಸಿದ್ದಾರೆ.

ಆ.8ರಂದು ಈದುಲ್ ಫಿತ್ರ್ ಆಚರಿಸಲು ಉಳ್ಳಾಲ ಖಾಝಿ ಅಬ್ದುರ್ರಹ್ಮಾನ್ ಅಲ್- ಬುಖಾರಿ ಕೋಯ ತಂಙಳ್, ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಪಿ. ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ ಹಾಗೂ ಉಡುಪಿ ಜಿಲ್ಲಾ ಖಾಝಿ ಯೇ ಶರೀಅತ್ ವೌಲಾನ ಉಬೈದುಲ್ಲಾ ಅಬೂಬಕರ್ ನದ್ವಿ ತೀರ್ಮಾನಿಸಿದ್ದಾರೆ.

ಬ್ರಹ್ಮಗಿರಿ, ಉಡುಪಿ ಬಸ್ ನಿಲ್ದಾಣ ಬಳಿ ಮಸೀದಿ, ಇಂದ್ರಾಳಿ, ಕಾಪು, ಮಲ್ಪೆ, ಬ್ರಹ್ಮಾವರ, ಹೆಜಮಾಡಿ, ಕುಂದಾಪುರ ಹಾಗೂ ಗಂಗೊಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

Eid-ul-Fitr celebrated with Religious Fervor in Karavali District

ಬಿಗಿ ಬಂದೋಬಸ್ತ್ : ಈದ್ ಉಲ್ ಫಿತ್ರ್ ಆಚರಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮುಸ್ಲಿಮರು ಯಾವುದೇ ಆತಂಕವಿಲ್ಲದೆ ಈದ್ ಉಲ್ ಫಿತ್ರ್(festival of breaking of the fast) ಹಬ್ಬವನ್ನು ಆಚರಿಸುವ ಸಲುವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡ ದಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಹೇಳಿದ್ದಾರೆ.

ನಗರ ಪೊಲೀಸ್ ಇಲಾಖೆಯ ಸಿಬ್ಬಂದಿಯಲ್ಲದೆ ಹೆಚ್ಚುವರಿಯಾಗಿ 5 ಕೆಎಸ್ ಆರ್ ಪಿ (150 ಪೊಲೀಸರು) ತುಕಡಿ,150 ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. 15 (ನಾಕಾಬಂಧಿ) ಚೆಕ್ ಪೋಸ್ಟ್, ಪಿಕೆಟಿಂಗ್ ಕೇಂದ್ರ, ಸೂಕ್ಷ್ಮ ಪ್ರದೇಶ ಸಹಿತ ಪ್ರಮುಖ ಮಸೀದಿಗಳಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿದೆ ಎಂದು ನಗರ ಡೆಪ್ಯುಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಕೆ.ವಿ. ಜಗದೀಶ್ ಹೇಳಿದ್ದಾರೆ.

ಜಿಲ್ಲೆಗೆ ಸಂಬಂಧಿಸಿದಂತೆ ದಿನನಿತ್ಯದ ಪೊಲೀಸ್ ಸಿಬ್ಬಂದಿಯಲ್ಲದೆ ಡಿಎಆರ್ ಹಾಗೂ 3 ಕೆಎಸ್ ಆರ್ ಪಿ (90 ಪೊಲೀಸರು) ತುಕಡಿ, 100 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. 20 ಚೆಕ್ ಪೋಸ್ಟ್, ನಾಕಾಬಂಧಿ, ಸೂಕ್ಷ್ಮ ಪ್ರದೇಶ ಮತ್ತು ಮಸೀದಿಗಳಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿದೆ. ಪ್ರತೀ ಠಾಣೆಯ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರದಿಂದಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಅಭಿಷೇಕ್ ಗೋಯೆಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+