14 ದಿನಗಳ 108 ಸಿಬ್ಬಂದಿ ಮುಷ್ಕರ ಅಂತ್ಯ

ambulance
ಬೆಂಗಳೂರು, ಆ.8 :ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 108 ಸಿಬ್ಬಂದಿ ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ. ಜಿವಿಕೆ ಸಂಸ್ಥೆ ವಜಾ ಮಾಡಿದ್ದ 194 ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಸಂಸ್ಥೆ ಒಪ್ಪಿಗೆ ನೀಡಿದೆ. ಶುಕ್ರವಾರದಿಂದಲೇ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 14 ದಿನಗಳಿಂದ 108 ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆ.14ರಂದು ನೌಕರರ ಸಭೆ ಕರೆದಿದ್ದಾರೆ.

ಹೈಕೋರ್ಟ್ ಛೀಮಾರಿ : 108 ಸಿಬ್ಬಂದಿ 14 ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಜಿವಿಕೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸದೆ ಅವರನ್ನು ಅಮಾನತುಗೊಳಿಸಿದೆ ಎಂದು ಆರೋಪಿಸಿ ಕಡೂರು ವೆಂಕಟೇಶ್ ಎಂಬುವವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಿವಿಕೆ ಸಂಸ್ಥೆಗೆ ಛೀಮಾರಿ ಹಾಕಿತ್ತು. ಇದರಿಂದ ಎಚ್ಚತ್ತುಕೊಂಡ ಸಂಸ್ಥೆ ವಜಾಗೊಳಿಸಿದ 194 ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿತ್ತು. ಇದರಿಂದ ಇಂದು ನೌಕರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. (ನೌಕರರ ಬೇಡಿಕೆಗಳು)

14 ರಂದು ಮಾತುಕತೆ : ಸೇವಾ ಭದ್ರತೆ, ಕನಿಷ್ಠ ವೇತನ ಮುಂತಾದ ನೌಕರರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆ.14ರಂದು ನೌಕರರ ಸಭೆ ಕರೆದಿದ್ದಾರೆ. ಅಂದಿನ ಸಭೆಯಲ್ಲಿ ನೌಕರರ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸುವುದೇ ಎಂದು ಕಾದು ನೋಡಬೇಕು.

ನೌಕರರ ಮುಷ್ಕರ ಶುಕ್ರವಾರದಿಂದ ರಾಜ್ಯದಲ್ಲಿ ಆಂಬ್ಯುಲೆನ್ಸ್ ಸೇವೆ ಎಂದಿನಂತೆ ಲಭ್ಯವಾಗಲಿದೆ. ನೌಕರರ ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರ ಕೆಎಸ್ಆರ್ ಟಿಸಿ ಬಸ್ ಡ್ರೈವರ್ ಮತ್ತು ಸರ್ಕಾರಿ ಆಸ್ಪತ್ರೆಯ ನರ್ಸ್ ಗಳನ್ನು 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ನಿಗದಿಗೊಳಿಸಿತ್ತು. ಶುಕ್ರವಾರದಿಂದ ಅವರು ತಮ್ಮ ಸೇವೆಗೆ ಮರಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+